AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

CSK vs DC: ಸಿಎಸ್​ಕೆ ಪರ ಮೊದಲ ಅರ್ಧಶತಕ ಬಾರಿಸಿದ ಸಂಜು ಸ್ಯಾಮ್ಸನ್

CSK vs DC: ಸಿಎಸ್​ಕೆ ಪರ ಮೊದಲ ಅರ್ಧಶತಕ ಬಾರಿಸಿದ ಸಂಜು ಸ್ಯಾಮ್ಸನ್

ಪೃಥ್ವಿಶಂಕರ
|

Updated on: Apr 11, 2026 | 8:35 PM

Share

Sanju Samson's First CSK Fifty: ಈ ಆವೃತ್ತಿಯ ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಆಡುತ್ತಿರುವ ಸಂಜು ಸ್ಯಾಮ್ಸನ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಬ್ಬರಿಸಿದ್ದಾರೆ. ಮೊದಲ ಮೂರು ಪಂದ್ಯಗಳಲ್ಲಿ ನಿರಾಸೆ ಮೂಡಿಸಿದ್ದ ಸಂಜು, ಈ ಪಂದ್ಯದಲ್ಲಿ 26 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ 50 ರನ್ ಗಳಿಸಿ ಲಯ ಕಂಡುಕೊಂಡರು. ರುತುರಾಜ್ ಔಟಾದ ನಂತರ ಒತ್ತಡದಲ್ಲಿ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದ ಸಂಜು, ಸಿಎಸ್‌ಕೆ ನಿರ್ವಹಣೆಯ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಶತಕದತ್ತ ಮುನ್ನಡೆದಿರುವ ಇವರ ಆಟ ಸಿಎಸ್‌ಕೆ ಅಭಿಮಾನಿಗಳಿಗೆ ಭರವಸೆ ಮೂಡಿಸಿದೆ.

ಈ ಆವೃತ್ತಿಯಿಂದ ಐಪಿಎಲ್​ನಿಂದ ಸಿಎಸ್​ಕೆ ತಂಡದ ಪರ ಆಡುತ್ತಿರುವ ಸಂಜು ಸ್ಯಾಮನ್ಸ್​ ಕೊನೆಗೂ ತಮ್ಮ ಲಯ ಕಂಡುಕೊಂಡಿದ್ದಾರೆ. ಆವೃತ್ತಿಯ ಮೊದಲ ಮೂರು ಪಂದ್ಯಗಳಲ್ಲಿ ನಿರಾಶೆ ಮೂಡಿಸಿದ ಸಂಜು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಈ ಪಂದ್ಯದಲ್ಲಿ ಆರಂಭದಿಂದಲೂ ತಾಳ್ಮೆಯ ಆಟ ಪ್ರದರ್ಶಿಸಿದ ಸಂಜು ಸ್ಯಾಮ್ಸನ್, ಮುಖೇಶ್ ಕುಮಾರ್ ಎಸೆದ ಇನ್ನಿಂಗ್ಸ್‌ನ ಒಂಬತ್ತನೇ ಓವರ್‌ನ ಮೊದಲ ಎಸೆತದಲ್ಲಿ ಸಿಂಗಲ್ ಪಡೆಯುವ ಮೂಲಕ ತಮ್ಮ ಅರ್ಧಶತಕ ಪೂರೈಸಿದರು.

ಸಂಜು ಕೇವಲ 26 ಎಸೆತಗಳಲ್ಲಿ ಒಟ್ಟು 9 ಬೌಂಡರಿಗಳ ಸಹಿತ ಸಿಎಸ್​ಕೆ ಪರ ತಮ್ಮ ಮೊದಲ ಅರ್ಧಶತಕ ಬಾರಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್‌ಮೆಂಟ್ ತನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಸಂಜು ಸ್ಯಾಮ್ಸನ್ ಈ ಅರ್ಧಶತಕ ಬಾರಿಸುವ ಮೂಲಕ ಉಳಿಸಿಕೊಂಡಿದ್ದಾರೆ. ರುತುರಾಜ್ ಔಟಾದ ನಂತರ ಒತ್ತಡಕ್ಕೆ ಮಣಿಯದೆ ಜವಾಬ್ದಾರಿಯುತ ಇನ್ನಿಂಗ್ಸ್ ಆಡುತ್ತಿರುವ ಸಂಜು ಶತಕದತ್ತ ಸಾಗುತ್ತಿದ್ದಾರೆ.

Follow Us