ಸಾನ್ಯಾ ಐಯ್ಯರ್ ಮಾಡಿದ ಕೆಲಸಕ್ಕೆ ಬೆಚ್ಚಿಬಿದ್ದ ರೂಪೇಶ್ ರಾಜಣ್ಣ
ಪ್ರಶಾಂತ್ ಸಂಬರ್ಗಿ ಹಾಗೂ ಸಾನ್ಯಾ ಐಯ್ಯರ್ ಬಿಗ್ ಬಾಸ್ ಮನೆಯಲ್ಲಿ ಒಂದಾಗಿದ್ದಾರೆ. ಇಬ್ಬರೂ ಸೇರಿ ರೂಪೇಶ್ ರಾಜಣ್ಣ ಅವರನ್ನು ಕುರಿ ಮಾಡುತ್ತಿದ್ದಾರೆ.
ಪ್ರಶಾಂತ್ ಸಂಬರ್ಗಿ (Prashanth Sambargi) ಹಾಗೂ ಸಾನ್ಯಾ ಐಯ್ಯರ್ ಬಿಗ್ ಬಾಸ್ ಮನೆಯಲ್ಲಿ ಒಂದಾಗಿದ್ದಾರೆ. ಇಬ್ಬರೂ ಸೇರಿ ರೂಪೇಶ್ ರಾಜಣ್ಣ ಅವರನ್ನು ಕುರಿ ಮಾಡುತ್ತಿದ್ದಾರೆ. ಸೆಪ್ಟೆಂಬರ್ 17ರ ಎಪಿಸೋಡ್ನಲ್ಲಿ ಇದು ಹೈಲೈಟ್ ಆಗಿತ್ತು. ಈಗ ಇದರ ಮುಂದುವರಿದ ಭಾಗವಾಗಿ ರೂಪೇಶ್ ರಾಜಣ್ಣ (Roopesh Rajanna) ಅವರ ಕಳೆದು ಹೋದ ಬಾಟಲಿಯನ್ನು ಹುಡುಕಿಕೊಟ್ಟಿದ್ದಾರೆ ಸಾನ್ಯಾ. ಇದನ್ನು ನೋಡಿ ರೂಪೇಶ್ ರಾಜಣ್ಣ ಅಚ್ಚರಿ ಹೊರಹಾಕಿದ್ದಾರೆ.