Sapthami Gowda: ಮದುವೆ ಯಾವಾಗ ಎಂದು ಕೇಳುವವರಿಗೆ 'ಆಚಾರ್ ಆಂಡ್ ಕೋ'ನಲ್ಲಿದೆ ಉತ್ತರ: ಸಪ್ತಮಿ ಗೌಡ

Sapthami Gowda: ಮದುವೆ ಯಾವಾಗ ಎಂದು ಕೇಳುವವರಿಗೆ ‘ಆಚಾರ್ ಆಂಡ್ ಕೋ’ನಲ್ಲಿದೆ ಉತ್ತರ: ಸಪ್ತಮಿ ಗೌಡ

ಮಂಜುನಾಥ ಸಿ.
|

Updated on: Jul 27, 2023 | 8:44 AM

Aachar and Co: ಪಿಆರ್​ಕೆ ಪ್ರೊಡಕ್ಷನ್​ನ 'ಆಚಾರ್ ಆಂಡ್ ಕೋ' ಸಿನಿಮಾ ವೀಕ್ಷಿಸಿದ ನಟಿ ಸಪ್ತಮಿ ಗೌಡ, ಮದುವೆ ಯಾವಾಗ ಎಂದು ಕೇಳುವವರಿಗೆ ಸಿನಿಮಾದಲ್ಲಿ ಉತ್ತರವಿದೆ ಎಂದಿದ್ದಾರೆ. ಏನದು ಉತ್ತರ?

ಅಶ್ವಿನಿ ಪುನೀತ್ ರಾಜ್​ಕುಮಾರ್ (Ashwini Puneeth Rajkumar) ನಿರ್ಮಾಣ ಮಾಡಿರುವ ‘ಆಚಾರ್ ಆಂಡ್ ಕೋ‘ (Aachar And Co) ಸಿನಿಮಾ ಜುಲೈ 28ರಂದು ಬಿಡುಗಡೆ ಆಗಲಿದೆ. ಜುಲೈ 25 ರಂದು ಸಿನಿಮಾದ ಸೆಲೆಬ್ರಿಟಿ ಪ್ರೀಮಿಯರ್ ಶೋ ಅನ್ನು ಅಶ್ವಿನಿ ಪುನೀತ್ ರಾಜ್​ಕುಮಾರ್ ಆಯೋಜಿಸಿದ್ದರು. ಪ್ರೀಮಿಯರ್ ಶೋನಲ್ಲಿ ಸಿನಿಮಾ ನೋಡಿದ ಅನೇಕರು ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಅದರಲ್ಲಿಯೂ ಅಪ್ಪು ಅಭಿಮಾನಿಯಾಗಿರುವ ಸಪ್ತಮಿ ಗೌಡ, ಸಿನಿಮಾವನ್ನು ವೀಕ್ಷಿಸಿ ಮದುವೆ ಯಾವಾಗ ಎಂದು ಕೇಳುವ ಹಲವರಿಗೆ ಸಿನಿಮಾದಲ್ಲಿ ಉತ್ತರ ಇದೆ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ