ಚಿತ್ರರಂಗದಲ್ಲಿ ಒಳಜಗಳ ಹೆಚ್ಚಾಗಿದೆಯೇ? ಶಿವಣ್ಣ ಕೊಟ್ಟರು ಉತ್ತರ
Shiva Rajkumar: ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ವಿವಾದಗಳು ಹೆಚ್ಚಾಗಿವೆ, ಸ್ಟಾರ್ ನಟರುಗಳ ನಡುವೆ ವೈಮನ್ಯ ಹೆಚ್ಚಾಗಿದೆಯಲ್ಲ ಎಂಬ ಪ್ರಶ್ನೆಗೆ ಶಿವರಾಜ್ ಕುಮಾರ್ ಉತ್ತರಿಸಿದ್ದು ಹೀಗೆ...
ಶಿವರಾಜ್ ಕುಮಾರ್ (Shiva Rajkumar) ಪತ್ನಿ ಗೀತಾ ಶಿವರಾಜ್ ಕುಮಾರ್ ಅವರ ಸಹೋದರ ಮಧು ಬಂಗಾರಪ್ಪ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಶಿವಮೊಗ್ಗದ ಕಲ್ಲಹಳ್ಳಿಯಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಶಿವರಾಜ್ ಕುಮಾರ್ ಅವರಿಗೆ ಹಲವು ರೀತಿಯ ಪ್ರಶ್ನೆಗಳು ಎದುರಾದವು, ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ವಿವಾದಗಳು ಹೆಚ್ಚಾಗಿವೆ, ನಾಯಕ ನಟರುಗಳ ನಡುವೆ ವೈಮನಸ್ಯಗಳು ಹೆಚ್ಚಾಗಿವೆಯಲ್ಲ? ಎಂಬ ಪ್ರಶ್ನೆಗೆ ಉತ್ತರಿಸಿದ ನಟ ಶಿವರಾಜ್ ಕುಮಾರ್, ‘ಸ್ಟಾರ್ ವಾರ್ಸ್ ಎಂಬುದು ಎಲ್ಲಿಲ್ಲ ಹೇಳಿ, ಎಲ್ಲ ಕ್ಷೇತ್ರಗಳಲ್ಲಿಯೂ ರಾಜಕೀಯ ಇದ್ದಿದ್ದೇ. ನಮ್ಮಲ್ಲೂ ಅದು ಇರುತ್ತೆ ಆದರೆ ಅದನ್ನು ನಾವೇ ದೂರ ಇಡಬೇಕು, ಎಲ್ಲರ ಗುರಿ ಸಿನಿಮಾ, ಭಾಷೆಯ ಬೆಳವಣಿಗೆ ಬಗ್ಗೆ ಮಾತ್ರವೇ ಆಗಿರಬೇಕು’ ಎಂದರು. ಇಲ್ಲಿದೆ ಪೂರ್ತಿ ವಿಡಿಯೋ…
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos