ಕನ್ನಡ ಚೆನ್ನಾಗಿ ಗೊತ್ತಿರುವ ನನಗೆ ಶಿವಕುಮಾರ್ ವಂಗ್ಯವಾಗಿ ಮಾತಾಡಿದ್ದು ಅರ್ಥವಾಗುತ್ತದೆ: ಅನ್ನದಾನಿ, ಶಾಸಕ
ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಎಲ್ಲರಿಗೂ ಗೊತ್ತಿರುವ ವಿಚಾರವೇ, ಬಣ ಬಡಿದಾಟ ಪಕ್ಷಕ್ಕೆ ಹೊಸದೇನೂ ಅಲ್ಲ, ಈ ಸರ್ಕಾರದಲ್ಲಿ 3-4 ಬಣಗಳಿವೆ, ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರದ್ದು ಒಂದೊಂದು ಬಣವಾದರೆ ಅಹಿಂದ ನಾಯಕ ಸತೀಶ್ ಜಾರಕಿಹೊಳಿ ಮತ್ತು ದಲಿತ ನಾಯಕ ಜಿ ಪರಮೇಶ್ವರ್ ಸಹ ತಮ್ಮ ತಮ್ಮ ಬಣಗಳನ್ನು ಹೊಂದಿದ್ದಾರೆ ಎಂದು ಅನ್ನದಾನಿ ಹೇಳಿದರು.
ಮಂಡ್ಯ: ಜೆಡಿಎಸ್ ಮುಖಂಡರು ಕಾಂಗ್ರೆಸ್ ಸರ್ಕಾರದ ಮೇಲೆ ಪ್ರಹಾರ ಮಾಡುವುದನ್ನು ಹೆಚ್ಚಿಸಿದ್ದಾರೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಾಸಕ ಡಾ ಕೆ ಅನ್ನದಾನಿ, ಸರ್ಕಾರ ಹೆಚ್ಚು ದಿನ ಬಾಳಲ್ಲ, ಅಧಿಕಾರ ಹಸ್ತಾಂತರದ ಬಗ್ಗೆ ತನ್ನ ಮತ್ತು ಡಿಕೆ ಶಿವಕುಮಾರ್ ನಡುವೆ ಯಾವುದೇ ಒಡಂಬಡಿಕೆ ನಡೆದಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ, ನಡೆದಿದೆ ಎಂದು ಡಿಸಿಎಂ ವಾದಿಸುತ್ತಾರೆ, ಆದರೆ ನಂತರ ಶಿವಕುಮಾರ್, ಸಿಎಂ ಹೇಳಿದ್ದೇ ಫೈನಲ್, ಅವರು ಹೇಳಿದ್ದಕ್ಕೆ ವಿರೋಧವಿಲ್ಲ ಎನ್ನುತ್ತಾರೆ, ತನಗೆ ಚೆನ್ನಾಗಿ ಕನ್ನಡ ಅರ್ಥವಾಗುತ್ತದೆ, ಶಿವಕುಮಾರ್ ವ್ಯಂಗ್ಯವಾಗಿ ಮಾತಾಡಿದ್ದು ಅಂತ ಹೇಳುವುದಕ್ಕೆ ಯಾವುದೇ ಪರಿಣಿತಿ ಬೇಕಿಲ್ಲ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿಎಂ ಕುರ್ಚಿಗಾಗಿ ಒಪ್ಪಂದವಾಗಿಲ್ಲ ಎಂದು ಸಿಎಂ ಹೇಳಿದ್ದರೆ ಮುಗೀತು, ಅದೇ ಫೈನಲ್: ಶಿವಕುಮಾರ್