ಶಿವಮೊಗ್ಗದ ಅರೆ ಮಲೆನಾಡು ಭಾಗದಲ್ಲಿ ಹೋರಿ ಹಬ್ಬದ ಸಂಭ್ರಮ; ಇಲ್ಲಿದೆ ವಿಡಿಯೋ
ಜಿಲ್ಲೆಯ ಸೊರಬ ತಾಲ್ಲೂಕಿನ ಯಲವಳ್ಳಿ ಗ್ರಾಮದಲ್ಲಿ ಸಾಂಪ್ರಾದಾಯಿಕ ಹೋರಿ ಬೆದರಿಸುವ ಹಬ್ಬವನ್ನು ಏರ್ಪಡಿಸಲಾಗಿತ್ತು. ಅಖಾಡದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನೋಡಲು ಸಾವಿರಾರು ಜನ ಸೇರಿದ್ದಲ್ಲದೆ, ಸ್ಪರ್ಧೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹೋರಿಗಳು ಬಂದಿದ್ದವು.
ಶಿವಮೊಗ್ಗ, ನ.25: ದೀಪಾವಳಿ ಹಬ್ಬದ ಬಳಿಕ ಶಿವಮೊಗ್ಗ(Shivamogga)ದ ಅರೆ ಮಲೆನಾಡು ಭಾಗದಲ್ಲಿ ಹೋರಿ ಹಬ್ಬ(Hori Habba)ವನ್ನು ಬಹು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅದರಂತೆ ಇಂದು(ನ.25) ಜಿಲ್ಲೆಯ ಸೊರಬ ತಾಲ್ಲೂಕಿನ ಯಲವಳ್ಳಿ ಗ್ರಾಮದಲ್ಲಿ ಸಾಂಪ್ರಾದಾಯಿಕ ಹೋರಿ ಬೆದರಿಸುವ ಹಬ್ಬವನ್ನು ಏರ್ಪಡಿಸಲಾಗಿತ್ತು. ಅಖಾಡದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನೋಡಲು ಸಾವಿರಾರು ಜನ ಸೇರಿದ್ದಲ್ಲದೆ, ಸ್ಪರ್ಧೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹೋರಿಗಳು ಬಂದಿದ್ದವು. ಜಿಲ್ಲೆಯ ಸೊರಬ ಹಾಗೂ ಶಿಕಾರಿಪುರ ಭಾಗಗಳಲ್ಲಿ ಈ ಹಬ್ಬದ ಕ್ರೇಜ್ ಹೆಚ್ಚಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಾತ್ಹೋಳಿ ಗ್ರಾಮದ ಹೋರಿಹಬ್ಬದ ಅಭಿಮಾನಿಗಳು, ತಮಿಳುನಾಡಿನ ಕೆಂಚ 777 ಎಂಬ ಹೋರಿಯನ್ನು ಸ್ನೇಹಿತರೇ ಸೇರಿಕೊಂಡು 1.8 ಲಕ್ಷ ರೂ. ನೀಡಿ ತಮಿಳುನಾಡಿನಿಂದ ತಂದಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್ ಕಾರಿಡಾರ್: ಡಿಕೆ ಶಿವಕುಮಾರ್ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
