ಮೋದಿ ನನ್ನ ಹೃದಯದಲ್ಲಿದ್ದಾರೆ, ಅವರ ಫೋಟೋ ಬಳಕೆಗೆ ಅವಕಾಶ ಸಿಕ್ಕಿದೆ: ಕೆಎಸ್ ಈಶ್ವರಪ್ಪ

| Updated By: Ganapathi Sharma

Updated on: May 02, 2024 | 12:00 PM

ಲೋಕಸಭೆ ಚುನಾವಣೆಗೆ ಮೇ 7ರಂದು ಕರ್ನಾಟಕದ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಕೆಎಸ್ ಈಶ್ವರಪ್ಪ ಪಕ್ಷೇತರರಾಗಿ ಕಣಕ್ಕಿಳಿದಿರುವ ಶಿವಮೊಗ್ಗ ಕ್ಷೇತ್ರ ರಾಜ್ಯದ ಗಮನ ಸೆಳೆದಿದೆ. ಈ ಮಧ್ಯೆ, ಈಶ್ವರಪ್ಪ ಪ್ರಧಾನಿ ಮೋದಿ ಫೋಟೊ ಬಳಸಬಾರದು ಎಂದು ಕೋರ್ಟ್​ ಮೊರೆ ಹೋಗಿದ್ದ ಬಿಜೆಪಿಗೆ ಹಿನ್ನಡೆಯಾಗಿದೆ.

ಶಿವಮೊಗ್ಗ, ಮೇ 2: ‘ಪ್ರಧಾನಿ ನರೇಂದ್ರ ಮೋದಿ (Narendra Modi) ನನ್ನ ಹೃದಯದಲ್ಲಿ ಇದ್ದಾರೆ. ಅವರ ಫೋಟೊ ನಾನು ಬಳಸಬಾರದೆಂದು ಬಿಜೆಪಿ (BJP) ಕೋರ್ಟ್​​ ಮೊರೆ ಹೋಗಿತ್ತು. ಆದರೆ ಪ್ರಧಾನಿಯ ಫೋಟೊ ಬಳಕೆಗೆ ನನಗೆ ಅವಕಾಶ ದೊರೆತಿದೆ’ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತ್ರ ಅಭ್ಯರ್ಥಿ ಕೆಎಸ್ ಈಶ್ವರಪ್ಪ (KS Eshwarappa) ಹೇಳಿದರು. ಬಿಜೆಪಿಯವರು ಕೋರ್ಟ್ ಮತ್ತು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದರು. ಈಗ ಮೋದಿ ಫೋಟೊ ಬಳಕೆಗೆ ನನಗೆ ಅವಕಾಶ ಸಿಕ್ಕಿದೆ. ಇದರಿಂದ ಬಿಜೆಪಿಯವರಿಗೆ ಎರಡೂ ಕಡೆ ಹಿನ್ನಡೆ ಆಗಿದೆ. ನನಗೆ ಸಂತೋಷವಾಗಿದ ಎಂದು ಅವರು ಹೇಳಿದರು.

ಪ್ರಧಾನಿ ಮೋದಿಯವರ ಆದರ್ಶ ನನಗೆ ಮಾದರಿ. ಚುನಾವಣೆ ಗೆಲ್ಲಲು ಮೋದಿ ಫೋಟೋ ಅನುಕೂಲ ಆಗಲಿದೆ ಎಂದು ಅವರು ಹೇಳಿದರು.

ಬುಧವಾರ ಶಿರಾಳಕೊಪ್ಪದಲ್ಲಿ ನನ್ನ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಾರೆ. ಬಿಎಸ್​ ಯಡಿಯೂರಪ್ಪ ಮತ್ತು ರಾಘವೇಂದ್ರ ಕುತಂತ್ರ ಮಾಡುತ್ತಿದ್ದಾರೆ. ಇದೇ ರೀತಿ ಮುಂದುವರಿಸಿದರೆ ತಕ್ಕ ಉತ್ತರ ನೀಡುತ್ತೇನೆ ಎಂದು ಈಶ್ವರಪ್ಪ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಕೆಎಸ್​​ ಈಶ್ವರಪ್ಪ ಪುತ್ರನಿಗೂ ಅಶ್ಲೀಲ ಸಿಡಿ ಭೀತಿ, ಕೋರ್ಟ್​ನಿಂದ ಸ್ಟೇ ತಂದ​ ಕಾಂತೇಶ್​

ಈಶ್ವರಪ್ಪರ ಚುನಾವಣಾ ಕಚೇರಿ ಎದುರು ವಾಮಾಚಾರ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ರಾಷ್ಟ್ರ ಭಕ್ತರ ಬಳಗದ ಕಚೇರಿ ಎದುರು ವಾಮಾಚಾರ ನಡೆಸಿರುವುದು ಬೆಳಕಿಗೆ ಬಂದಿದೆ. ಈಶ್ವರಪ್ಪ ಚುನಾವಣಾ ಕಚೇರಿ ಎದುರೇ ನಿಂಬೆ ಹಣ್ಣು, ಕುಂಕುಮ ಹಾಕಿ ವಾಮಾಚಾರ ಮಾಡಲಾಗಿದೆ ಎಂದು ಅವರ ಬೆಂಬಲಿಗರು ಆರೋಪಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published on: May 02, 2024 11:59 AM