ಶಿಗ್ಗಾವಿಯಲ್ಲಿ ಕಾಂಗ್ರೆಸ್ ಬಂಡಾಯ ಶಮನ, ಖಾದ್ರಿ ಜೊತೆ ಮಾತಾಡಿದ ಸಿದ್ದರಾಮಯ್ಯ

Updated on: Oct 26, 2024 | 1:16 PM

ಶುಕ್ರವಾರದಂದು ಬಂಡಾಯದ ಮಾತುಗಳನ್ನಾಡಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವುದೊಂದೇ ತನ್ನ ಗುರಿ ಎಂದು ಹೇಳಿದ್ದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಇವತ್ತು ಸಿದ್ದರಾಮಯ್ಯ ಎದುರು ಶಾಲಾ ಬಾಲಕನಂತೆ ಕೂತಿದ್ದರು. ಕೆಪಿಸಿಸಿ ಅಧ್ಯಕ್ಷ ಹೇಳಿದರೂ ಕೇಳದ ಖಾದ್ರಿ ಸಿಎಂ ಹೇಳಿದ ಮಾತಿಗೆ ಪಿಟಕ್ಕೆನ್ನಲಿಲ್ಲ. 

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪಳಗಿದ ರಾಜಕಾರಣಿ, ಭಿನ್ನಮತ ಹೇಗೆ ಶಮನಗೊಳಿಸಬೇಕೆನ್ನುವುದು ಅವರಿಗೆ ಗೊತ್ತು. ಶಿಗ್ಗಾವಿ ಉಪಚುನಾವಣೆಗೆ ಟಿಕೆಟ್ ನೀಡದ ಕಾರಣ ರೊಚ್ಚಿಗೆದ್ದು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಅಜ್ಜಂಪೀರ್ ಖಾದ್ರಿಯವರ ಮನವೊಲಿಸಿರುವ ಸಿದ್ದರಾಮಯ್ಯ ಪಕ್ಷದ ಅಧಿಕೃತ ಅಭ್ಯರ್ಥಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಗೆ ಬೆಂಬಲ ನೀಡುವಂತೆ ಸೂಚಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸೋಲಿಸುವುದು ನನ್ನ ಗುರಿ ಮತ್ತು ಉದ್ದೇಶ: ಅಜ್ಜಂಪೀರ್ ಖಾದ್ರಿ