Loading video

ದಾಖಲೆಯ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳೋದನ್ನೊಮ್ಮೆ ಕೇಳಬೇಕು!

Updated on: Mar 08, 2025 | 6:29 PM

ಸರ್ಕಾರ ಘೋಷಣೆ ಮಾಡುವ ಯೋಜನೆಗಳೆಲ್ಲ ಮೈಸೂರಿಂದ ಆರಂಭಗೊಂಡು ದಾವಣಗೆರೆವರೆಗೆ ಬಂದು ನಿಂತು ಬಿಡುತ್ತವೆ, ಅಲ್ಲಿಂದ ಮುಂದಕ್ಕೆ ಬರುತ್ತಿಲ್ಲ, ಬಜೆಟ್ ರೂಪಿಸುವಾಗ ಉತ್ತರ-ದಕ್ಷಿಣ ಎಂಬ ತಾರತಮ್ಯ ಇಟ್ಟುಕೊಳ್ಳದೆ ಸಮತೋಲನವನ್ನು ಕಾಪಾಡಿಕೊಂಡಿದ್ದರೆ ಉತ್ತರ ಕರ್ನಾಟಕಕ್ಕೆ ಈಗ ಎದುರಿಸುತ್ತಿರುವ ಸ್ಥಿತಿ ಬರುತ್ತಿರಲಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಬೆಂಗಳೂರು, ಮಾರ್ಚ್ 8: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ತಾವು ಮಂಡಿಸಿದ ಬಜೆಟ್ ಬಗ್ಗೆ ಬೀಗುತ್ತಿರಬಹುದು, ಆದರೆ ಖುದ್ದು ಅವರ ಪಾರ್ಟಿ ಅಧ್ಯಕ್ಷರಿಗೆ ಬಜೆಟ್ ಖುಷಿ ನೀಡಿಲ್ಲ. ಕಲಬುರಗಿಯಲ್ಲಿ ಇಂದು ಮಾತಾಡಿದ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಹೇಳಿದ್ದನ್ನು ಗೇಲಿ ಮಾಡುತ್ತ, ಉತ್ತರ ಕರ್ನಾಟಕಕ್ಕೆ ₹5,000 ಕೋಟಿ ಅಲ್ಲ ಒಂದು ಲಕ್ಷ ಕೋಟಿ ನೀಡಿದರೂ ದಕ್ಷಿಣ ಕರ್ನಾಟಕದ ಸಮ ಬರಲಾರದು ಎಂದು ಹೇಳಿದರು. ಸರ್ಕಾರದ ತಾರತಮ್ಯ ನೀತಿಯನ್ನು ಖರ್ಗೆ ಉಗ್ರವಾಗಿ ಖಂಡಿಸಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ದಲಿತ ವಿರೋಧಿ ಬಿಜೆಪಿಯಿಂದ ಸಂವಿಧಾನಕ್ಕೆ ಆಪತ್ತು; ಬೆಳಗಾವಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ