ಇಂಗ್ಲಿಷ್ ಚೆನ್ನಾಗಿ ಮಾತಾಡಲು ಬಿಜೆಪಿ ಶಾಸಕರಂತೆ ನಾನು ಪಟ್ಟಣದಲ್ಲಿ ಓದಿಲ್ಲ, ಹಳ್ಳಿಯಲ್ಲಿ ಓದಿದವನು: ಸಿದ್ದರಾಮಯ್ಯ, ಮುಖ್ಯಮಂತ್ರಿ   

ಇಂಗ್ಲಿಷ್ ಚೆನ್ನಾಗಿ ಮಾತಾಡಲು ಬಿಜೆಪಿ ಶಾಸಕರಂತೆ ನಾನು ಪಟ್ಟಣದಲ್ಲಿ ಓದಿಲ್ಲ, ಹಳ್ಳಿಯಲ್ಲಿ ಓದಿದವನು: ಸಿದ್ದರಾಮಯ್ಯ, ಮುಖ್ಯಮಂತ್ರಿ   

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 13, 2023 | 4:18 PM

ಅವರ ಮಾತಿನಿಂದ ಕೆರಳುವ ಮುಖ್ಯಮಂತ್ರಿ, please don’t allow him to speak ಅಂತ ಹೇಳಿದರೆ ಅದು ಅಸಂಸದೀಯ ಅಲ್ಲ ಎನ್ನುತ್ತಾರೆ.

ಬೆಂಗಳೂರು: ವಿಧಾನ ಮಂಡಲದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಬಳಸಿದ ಇಂಗ್ಲಿಷ್ ವಾಕ್ಯವೊಂದರ ಮೇಲೆ ಚರ್ಚೆ ನಡೆಯಿತು. ಬಿಜೆಪಿ ಸದಸ್ಯರೊಬ್ಬರು ಮಾತಾಡುವಾಗ ಸಿದ್ದರಾಮಯ್ಯ ಎದ್ದು ಸಭಾಧ್ಯಕ್ಷರಿಗೆ, ಅಧ್ಯಕ್ಷರಿಗೆ please don’t allow him to speak ಅನ್ನುತ್ತಾರೆ. ಅವರ ಈ ಮಾತಿಗೆ ಬಿಜೆಪಿ ಶಾಸಕ ಸಿಸಿ ಪಾಟೀಲ್ (CC Patil) ಆಕ್ಷೇಪಣೆ ವ್ಯಕ್ತಪಡಿಸುತ್ತಾ ಅವರ ಮಾತನ್ನು ಕಡತದಿಂದ ತೆಗೆದುಹಾಕಬೇಕು ಎನ್ನುತ್ತಾರೆ. ಅವರ ಮಾತಿನಿಂದ ಕೆರಳುವ ಮುಖ್ಯಮಂತ್ರಿ, please don’t allow him to speak ಅಂತ ಹೇಳಿದರೆ ಅದು ಅಸಂಸದೀಯ ಅಲ್ಲ ಎನ್ನುತ್ತಾರೆ. ಬಿಜೆಪಿ ಮತ್ತೊಬ್ಬ ಶಾಸಕ ಸುರೇಶ್ ಕುಮಾರ್ (Suresh Kumar) ಅದು ತಪ್ಪು, ಪ್ಲೀಸ್ ಅಂತ ಸೇರಿಸಿ ನೀವು ಏನು ಬೇಕಾದರೂ ಅನ್ನಬಹುದು ಅಂತ ಭಾವಿಸಿದರರೆ ಅದು ಸರಿಯಲ್ಲ, ಪ್ಲೀಸ್ ಕಿಲ್ ಹಿಮ್ ಅಂತ ನೀವು ಸದನದಲ್ಲಿ ಹೇಳುವುದು ಸಾಧ್ಯವೇ ಅಂತ ಹೇಳಿದಾಗ; ಸಿದ್ದರಾಮಯ್ಯ ಇಲ್ಲ ಹಾಗೆ ಹೇಳಲು ಬರೋದಿಲ್ಲ ಆದರೆ ನಾನು ಬಳಸಿದ ವಾಕ್ಯ ಅಸಂದೀಯ ಅಲ್ಲ ಅನ್ನುತ್ತಾರೆ. ಪಾಟೀಲ್ ಮತ್ತು ಡಾ ಅಶ್ವಥ್ ನಾರಾಯಣ ಅವರು ಸುರೇಶ್ ಕುಮಾರ್ ಜೊತೆಗೂಡಿದಾಗ ಸಿದ್ದರಾಮಯ್ಯ, ನಾನು ನಿಮ್ಮ ಹಾಗೆ ಪಟ್ಟಣದಲ್ಲಿ ಓದಿದವನಲ್ಲ, ಹಳ್ಳಿಯಲ್ಲಿ ಓದಿದವನು ಅಂದಾಗ ಎಲ್ಲರೂ ನಗುತ್ತಾ ಕೂತುಕೊಳ್ಳುತ್ತಾರೆ.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ