ನಮ್ಮ ಕಣ್ತಪ್ಪಿಸಿ ಮಹಜರು ನಡೆಸಲಾಗುತ್ತಿದೆ: ರೇವಣ್ಣ ಪರ ವಕೀಲ ಆರೋಪ
ಹೆಚ್ಡಿ ರೇವಣ್ಣ(HD Revanna) ಅವರ ನಿವಾಸದಲ್ಲಿ ಮಹಜರು ಪ್ರಕ್ರಿಯೆ ನಡೆಯುತ್ತಿದೆ, ಆದರೆ ವಕೀಲರಾದ ನನ್ನನ್ನೇ ನಿವಾಸದ ಒಳಗೆ ಬಿಡುತ್ತಿಲ್ಲ ಎಂದು ಹೆಚ್ಡಿ ರೇವಣ್ಣ ಪರ ವಕೀಲ ಗೋಪಾಲ್ ತಿಳಿಸಿದ್ದಾರೆ. ಅಧಿಕಾರಿಗಳು ಮಹಜರು ಪ್ರಕ್ರಿಯೆ ನೋಟಿಸ್ ನನಗೆ ಕೊಟ್ಟಿದ್ದಾರೆ, ಭವಾನಿ ರೇವಣ್ಣ ಅವರಿಗೆ ಮಂಡಿ ಆಪರೇಷನ್ ಆಗಿರುವ ಹಿನ್ನೆಲೆ, ಮಹಜರು ಪ್ರಕ್ರಿಯೆ ನೋಡಿಕೊಳ್ಳಲು ನನಗೆ ಹೇಳಿದ್ದರು ಎಂದರು.

ಹೊಳೆನರಸೀಪುರದ ಮನೆಯಲ್ಲಿ ಮಹಜರು ಪ್ರಕ್ರಿಯೆ ವೇಳೆ ನಾನಿದ್ದೆ, ಬಸವನಗುಡಿ ಮನೆಯಲ್ಲೂ ಮಹಜರು ಮಾಡುತ್ತೇವೆ ಎಂದು ಎಸ್ಐಟಿ ಅಧಿಕಾರಿಗಳು ನನಗೆ ನೋಟಿಸ್ ನೀಡಿದ್ದರು.
ಹಾಗಾಗಿ ಮಹಜರು ಪ್ರಕ್ರಿಯೆಗೆ ಸಹಕರಿಸಲು ನಾನು ಬಂದಿದ್ದೆ, ಆದರೆ ಹೆಚ್.ಡಿ.ರೇವಣ್ಣ ನಿವಾಸದೊಳಗೆ ನಮ್ಮನ್ನು ಬಿಟ್ಟಿಲ್ಲ ಎಂದು ಗೋಪಾಲ್ ಹೇಳಿದ್ದಾರೆ. ಬಸವನಗುಡಿ ನಿವಾಸದ ಬಳಿ ರೇವಣ್ಣ ಪರ ವಕೀಲರು ಹೇಳಿಕೆ ನೀಡಿದ್ದಾರೆ.
ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಹೆಚ್ಡಿ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸಲಾಗಿದೆ. ಹಾಗೆಯೇ ಮಹಿಳೆಯ ಅಪಹರಣಕ್ಕೆ ಸಂಬಂಧಿಸಿದಂತೆ ಹೆಚ್ಡಿ ರೇವಣ್ಣ ಅವರನ್ನು ಎಸ್ಐಟಿ ಬಂಧಿಸಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: May 06, 2024 02:10 PM
ಸೆಪ್ಟೆಂಬರ್ 1, 2026: ದ್ವಾದಶ ರಾಶಿಗಳ ಮೇಲೆ ಗ್ರಹಗಳ ಪ್ರಭಾವ, ದಿನ ಭವಿಷ್ಯ
ಸಲಾಲ್ ಡ್ಯಾಂನ ಗೇಟ್ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?