ಕಾರವಾರದ ಕಠಿಣಕೋಣ ಗ್ರಾಮದಲ್ಲಿ ಒಂದೇ ಕಡೆ 6 ಹೆಬ್ಬಾವು ಪತ್ತೆ! ಬೆಚ್ಚಿಬಿದ್ದ ಗ್ರಾಮಸ್ಥರು

Edited By:

Updated on: Feb 23, 2026 | 11:24 AM

ಕಾರವಾರದ ಕಠಿಣಕೋಣ ಗ್ರಾಮದಲ್ಲಿ ಒಂದೇ ಕಡೆ ಏಕಾಏಕಿ 6 ಹೆಬ್ಬಾವುಗಳು ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಯಿತು. ಸದ್ಯ ಅವುಗಳನ್ನು ಸೆರೆಹಿಡಿದು ಅರಣ್ಯ ಪ್ರದೇಶಕ್ಕೆ ಬಿಡಲು ಕ್ರಮ ಕೈಗೊಳ್ಳಲಾಗಿದೆ. ಈ ಘಟನೆ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದ್ದು, ಮನೆ ಆವರಣ ಹಾಗೂ ದಾಸ್ತಾನು ಸ್ಥಳಗಳನ್ನು ಸ್ವಚ್ಛವಾಗಿಡುವಂತೆ ಸಲಹೆ ನೀಡಲಾಗಿದೆ.

ಕಾರವಾರ, ಫೆಬ್ರವರಿ 23: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಠಿಣಕೋಣ ಗ್ರಾಮದಲ್ಲಿ ಒಂದೇ ಕಡೆ ಆರು ಬೃಹತ್ ಗಾತ್ರದ ಹೆಬ್ಬಾವುಗಳು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ವಿಜಯ ತಳೇಕರ ಎಂಬುವವರ ಮನೆಯ ಆವರಣದಲ್ಲಿ ದಾಸ್ತಾನು ಮಾಡಿಟ್ಟಿದ್ದ ವಸ್ತುಗಳ ನಡುವೆ ಅವಿತುಕೊಂಡ ಸ್ಥಿತಿಯಲ್ಲಿ ಹೆಬ್ಬಾವುಗಳು ಇದ್ದವು. ಬೆಳಿಗ್ಗೆ ಮನೆ ಆವರಣದಲ್ಲಿ ಸಂಚರಿಸುವಾಗ ಚಲನವಲನ ಗಮನಿಸಿದ ಮನೆಯವರು ಪರಿಶೀಲನೆ ನಡೆಸಿದ ವೇಳೆ, ಒಂದೇ ಸ್ಥಳದಲ್ಲಿ ಹಲವು ಹೆಬ್ಬಾವುಗಳು ಇರುವುದನ್ನು ಕಂಡು ಬೆಚ್ಚಿಬಿದ್ದರು. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಗಸ್ತು ವನಪಾಲಕ ಗೋಪಾಲ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಸುರಕ್ಷಿತವಾಗಿ ಹೆಬ್ಬಾವುಗಳನ್ನು ಹಿಡಿದಿದ್ದಾರೆ. ಮಿಲನಕ್ರಿಯೆಯ ಅವಧಿಯಾದ್ದರಿಂದ ಹೆಬ್ಬಾವುಗಳು ಒಟ್ಟಾಗಿ ಸೇರಿರುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Feb 23, 2026 11:23 AM