SM Krishna No More; ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಕೃಷ್ಣರನ್ನು ಭೇಟಿಯಾಗಿ ಕಾಂಗ್ರೆಸ್ ಸೇರುವ ಇಚ್ಛೆ ವ್ಯಕ್ತಪಡಿಸಿದ್ದೆ: ಸಿದ್ದರಾಮಯ್ಯ
ಎಸ್ ಎಂ ಕೃಷ್ಣ ಮತ್ತು ಚಂದ್ರೇಗೌಡರನ್ನು ಬಿಟ್ಟರೆ ಎಲ್ಲ 4 ಸದನಗಳಿಗೆ ಆಯ್ಕೆಯಾದವರು ಬೇರೆ ಯಾರೂ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದಾಗ, ಸದನದಲ್ಲಿ ಹಾಜರಿದ್ದ ಸದಸ್ಯರೊಬ್ಬರು ಈಗ ಮೇಘಾಲಯದ ರಾಜ್ಯಪಾಲರಾಗಿರುವ ಸಿಹೆಚ್ ವಿಜಯಶಂಕರ ಸಹ ಎಲ್ಲ 5 ಸದನಗಳಿಗೆ ಆಯ್ಕೆಯಾಗಿದ್ದರು ಎನ್ನುತ್ತಾರೆ. ಅವರು ರಾಜ್ಯಸಭೆಗೆ ಆಯ್ಕೆಯಾದಂತಿಲ್ಲ ಎನ್ನುವ ಸಿದ್ದರಾಮಯ್ಯ ತಪ್ಪು ಹೇಳಿದ್ದರೆ ತಿದ್ದಿಕೊಳ್ಳಲು ತಯಾರಿದ್ದೇನೆ ಅನ್ನುತ್ತಾರೆ.
ಬೆಳಗಾವಿ: ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಗಲಿದ ಹಿರಿಯ ಮುತ್ಸದ್ದಿ ಎಸ್ ಎಂ ಕೃಷ್ಣ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. 1962 ರಲ್ಲೇ ವಿಧಾನಸಭಾ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು ಪ್ರಾಯಶಃ ಚಂದ್ರೇಗೌಡರನ್ನು ಬಿಟ್ಟರೆ ಕರ್ನಾಟಕದಿಂದ ನಾಲ್ಕು ಸದನಗಳಿಗೆ- ವಿಧಾನ ಸಭೆ, ವಿಧಾನ ಪರಿಷತ್, ಲೋಕಸಭೆ ಮತ್ತು ರಾಜ್ಯಸಭೆಗಳಿಗೆ ಆಯ್ಕೆಯಾದರವರು ಒಬ್ಬರೇ ಎಂದರು. ಅಷ್ಟು ಮಾತ್ರವಲ್ಲದೆ ಅವರು ವಿಧಾನ ಸಭೆಯ ಸ್ಪೀಕರ್ ಅಗಿಯೂ ಕೆಲಸ ಮಾಡಿದರು ಎಂದ ಸಿದ್ದರಾಮಯ್ಯ, ಕೃಷ್ಣ ಅವರು ಮಹಾರಾಷ್ಟ್ರದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾಗ, ತಾನು ಅವರನ್ನು ಮುಂಬೈಯಲ್ಲಿ ಭೇಟಿಯಾಗಿ ಕಾಂಗ್ರೆಸ್ ಸೇರುವ ಇಂಗಿತ ವಕ್ತಪಡಿಸಿದ್ದೆ ಮತ್ತು ಅವರು ತನ್ನ ನಿರ್ಧಾರ ಕೇಳಿ ಬಹಳ ಸಂತಸಪಟ್ಟಿದ್ದರು ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Dy CM meets former CM: ಹಿರಿಯ ಮುತ್ಸದ್ದಿ ಎಸ್ ಎಂ ಕೃಷ್ಣ ಮನೆಗೆ ತೆರಳಿ ಗೌರವ ಸಲ್ಲಿಸಿದ ಉಪ-ಮುಖ್ಯಮಂತ್ರಿ ಡಿಕೆ ಶಿವಕುಮಾರ್