‘ದಯವಿಟ್ಟು ಹೀಗೆಲ್ಲ ಮಾಡಬೇಡಿ’; ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಶ್ರೀಮುರಳಿ
ನಟ ಶ್ರೀಮುರಳಿ ಅವರು ಆನೆಗುಂದಿ ಉತ್ಸವಕ್ಕೆ ತೆರಳುತ್ತಿದ್ದಾರೆ. ಮಾರ್ಗ ಮಧ್ಯೆ ಕೋಟೆನಾಡು ಚಿತ್ರದುರ್ಗದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ರಸ್ತೆಯಲ್ಲಿ ತಮ್ಮನ್ನು ಫಾಲೋ ಮಾಡುವ ಅಭಿಮಾನಿಗಳಿಗೆ ಶ್ರೀಮುರಳಿ ಕಿವಿಮಾತು ಹೇಳಿದ್ದಾರೆ. ದಯವಿಟ್ಟು ಅಪಾಯಕಾರಿ ಕೆಲಸ ಮಾಡಬೇಕು ಎಂದು ಅವರು ಬುದ್ಧಿ ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..
ನೆಚ್ಚಿನ ನಟರನ್ನು ನೋಡಬೇಕು ಎಂಬ ಆಸೆಯಿಂದ ರಸ್ತೆಯಲ್ಲಿ ಫಾಲೋ ಮಾಡುವ ಅಭಿಮಾನಿಗಳಿಗೆ ಶ್ರೀಮುರಳಿ ಅವರು ಕಿವಿಮಾತು ಹೇಳಿದ್ದಾರೆ. ಅಭಿಮಾನಿಗಳು ಈ ರೀತಿ ಚೇಸ್ ಮಾಡಿಕೊಂಡ ಬಂದಾಗ ಅಪಾರ ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಶ್ರೀಮುರಳಿ (Sri Murali) ಅವರು ಬುದ್ಧಿ ಹೇಳಿದ್ದಾರೆ. ಕೊಪ್ಪಳದ ಆನೆಗುಂದಿ ಉತ್ಸವಕ್ಕೆ (Anegundi Utsav 2024) ಶ್ರೀಮುರಳಿ ತೆರಳುತ್ತಿದ್ದಾರೆ. ಈ ನಡುವೆ ಅವರು ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಅಭಿಮಾನಿಗಳ ಬಗ್ಗೆ ಮಾತನಾಡಿದ್ದಾರೆ. ‘ಕಾರ್ಯಕ್ರಮ ಮುಗಿದ ಬಳಿಕ ಯಾರೂ ಬೈಕ್ನಲ್ಲಿ ನಮ್ಮನ್ನು ಚೇಸ್ ಮಾಡಿಕೊಂಡು ಬರಬೇಡಿ. ನಿಮ್ಮನ್ನು ನೋಡಿಕೊಂಡು ಇನ್ನೊಂದಿಷ್ಟು ಜನ ಬರುತ್ತಾರೆ. ಹೈವೇ ಅಥವಾ ಯಾವುದೇ ರಸ್ತೆಯಲ್ಲಿ ಅದು ಅಪಾಯಕಾರಿ. ಕಾರ್ಯಕ್ರಮದಲ್ಲಿ ಭೇಟಿಯಾಗಲು ಸಾಧ್ಯವಾಗದಿದ್ದರೆ ಇನ್ನೊಮ್ಮೆ ನೀವು ನಮ್ಮ ಮನೆಯ ಬಳಿ ಬರಬಹುದು. ದಯವಿಟ್ಟು ಫಾಲೋ ಮಾಡಬೇಡಿ. ನಮಗೆ ಭಯಪಡಿಸಬೇಡಿ’ ಎಂದು ಶ್ರೀಮುರಳಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.