ರಾಜ್ಯ ಸರ್ಕಾರದ ವೈಫಲ್ಯ ಮತ್ತು ದುರಾಡಳಿತದಿಂದ ಜನ ಸಾವಿನ ಮೊರೆ ಹೋಗುತ್ತಿದ್ದಾರೆ: ಹೆಚ್ ಡಿ ಕುಮಾರಸ್ವಾಮಿ

|

Updated on: Jan 04, 2025 | 2:18 PM

ಕಲಬುರಗಿಯಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ಮಾಡುತ್ತ ಗುತ್ತಿಗೆದಾರ ಸಚಿನ್ ಪಾಂಚಾಳ್ ಸಾವಿಗೆ ನ್ಯಾಯ ಕೇಳಿದರೆ ಕಾಂಗ್ರೆಸ್ ಮುಖಂಡರು ಎಳನೀರು ಕಾಫಿ ಟೀ ಕೊಡ್ತಾರಂತೆ, ಇದೊಂದು ಲಜ್ಜೆಗೇಡಿ ಸರ್ಕಾರ, ಬೆಳಗಾವಿಯಲ್ಲಿ ಸಚಿವರೊಬ್ಬರ ಪಿಎ ಹೆಸರನ್ನು ಡೆತ್ ನೋಟಲ್ಲಿ ಬರೆದಿಟ್ಟು ಸರ್ಕಾರೀ ನೌಕರನೊಬ್ಬ ಸಾವಿಗೆ ಶರಣಾಗುತ್ತಾನೆ, ಪ್ರಕರಣದ ತನಿಖೆ ತಟಸ್ಥವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ಮೈಸೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ದುರಾಡಳಿತ, ಆಡಳಿತ ವೈಫಲ್ಯ ಮತ್ತು ಹಿಂಸೆಯ ಮೂಲಕ ಹಲವಾರು ಆತ್ಮಹತ್ಯೆಗಳಿಗೆ ಕಾರಣವಾಗುತ್ತಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದ ನಡೆದಿರುವ ಅತ್ಮಹತ್ಯೆಗಳ ಪಟ್ಟಿ ದೊಡ್ಡದು, ಹರಿಹರದ ಮುಸ್ಲಿಂ ಗುತ್ತಿಗೆದಾರನೊಬ್ಬನಿಗೆ ಕಾಮಗಾರಿ ಮುಗಿಸಿ ಒಂದೂವರೆ ವರ್ಷ ಕಳೆದರೂ ಅವನ ಬಿಲ್ ಬಿಡುಗಡೆಯಾಗಿಲ್ಲ, ಹಾಗಾಗಿ ತನಗೆ ದಯಾಮರಣ ನೀಡಬೇಕೆಂದು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾನೆ, ಒಬ್ಬ ಸಚಿವನ ರಾಜೀನಾಮೆ ಕೇಳಿದರೆ ಪ್ರಯೋಜನವಿಲ್ಲ, ಇಡೀ ಸರ್ಕಾರವೇ ತೊಲಗಬೇಕು ಎಂದು ಎಂದು ಕುಮಾರಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರೋಟೋಕಾಲ್ ಉಲ್ಲಂಘಿಸಿದ ಸರ್ಕಾರ: ಕುಮಾರಸ್ವಾಮಿ ಬೇಸರ, ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ದಿಶಾ ಸಭೆ