ಆರೋಗ್ಯ ಸರಿಯಿಲ್ಲದಿದ್ದರೂ ಜೆಡಿಎಸ್ ಪ್ರತಿಭಟನೆಯಲ್ಲಿ ಭಾಗಿಯಾದ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ
ಕುಮಾರಸ್ವಾಮಿಯವರಿಗೆ ಆರೋಗ್ಯ ಸರಿ ಇದ್ದಂತಿಲ್ಲ, ಫ್ರೀಡಂ ಪಾರ್ಕ್ಗೆ ಅವರು ಸ್ವೆಟರ್ ಧರಿಸಿ ಬಂದರು ಮತ್ತು ವೇದಿಕೆ ಹತ್ತಿದಾಗ ಕೆಮ್ಮುತ್ತಿದ್ದರು. ಮಾತಾಡುತ್ತೀರಾ ಎಂದು ನಿಖಿಲ್ ಸನ್ನೆ ಭಾಷೆಯಲ್ಲಿ ಕೇಳಿದಾಗ ಇಲ್ಲ, ನೀನೇ ಮುಂದುವರಿಸು ಎಂದು ಅವಅರು ಸಹ ಸನ್ನೆ ಮಾಡುತ್ತಾ ಹೇಳಿದರು. ವೇದಿಕೆ ಮೇಲಿದ್ದ ಮುಖಂಡರ ಕೈಯಲ್ಲಿ ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಮತ್ತು ವಿಧಾನ ಸೌಧ ಚಲೋ ಪ್ಲಕಾರ್ಡ್ಗಳಿದ್ದವು.
ಬೆಂಗಳೂರು, ಏಪ್ರಿಲ್ 12: ನಗರದಲ್ಲಿಂದು ಜೆಡಿಎಸ್ ಹಾಲಿ ಮತ್ತು ಸಂಸದರು, ಹಾಲಿ ಮತ್ತು ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮುಖಂಡರು, ಕಾರ್ಯಕರ್ತರು ಮತ್ತು ಮಹಿಳಾ ಕಾರ್ಯಕರ್ತೆಯರು ಕರ್ನಾಟಕ ಸರ್ಕಾರದ (Karnataka government) ವಿರುದ್ಧ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಪ್ರತಿಭಟನೆಗೆ ತಡವಾಗಿ ಆಗಮಿಸಿದಾಗ ಅವರನ್ನು ಬರಮಾಡಿಕೊಳ್ಳಲು ನಿಖಿಲ್ ಕುಮಾರಸ್ವಾಮಿ ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದರು ಮತ್ತು ವೇದಿಕೆ ಮೇಲಿದ್ದವರೆಲ್ಲ ಎದ್ದುನಿಂತರು.
ಇದನ್ನೂ ಓದಿ: ಸರ್ಕಾರಿ ಜಮೀನು ಒತ್ತುವರಿ ಆರೋಪ: ಕುಮಾರಸ್ವಾಮಿಗೆ ಬಿಗ್ ಶಾಕ್ ಕೊಟ್ಟ ಸರ್ಕಾರ!
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos