AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಇಂಜೆಕ್ಷನ್ ಕೊಟ್ಟರೆ ಆತ್ಮಹತ್ಯೆ ಯೋಚನೆಯೇ ಸುಳಿಯಲ್ಲ!

ಈ ಇಂಜೆಕ್ಷನ್ ಕೊಟ್ಟರೆ ಆತ್ಮಹತ್ಯೆ ಯೋಚನೆಯೇ ಸುಳಿಯಲ್ಲ!

Gopal AS
| Updated By: ಗಂಗಾಧರ​ ಬ. ಸಾಬೋಜಿ|

Updated on:Sep 12, 2025 | 12:04 PM

Share

ಅದೊಂದು ಮ್ಯಾಜಿಕ್ ಇಂಜೆಕ್ಷನ್, ಅದನ್ನ ತಗೊಂಡೆಡ ಸಾಯ್ಲೇಬೇಕು ಅಂತಂದುಕೊಂಡಿರುವವರು ಕೂಡ ಇನ್ನು ಮುಂದೆ ಸುಸೈಡ್ ಮಾಡ್ಕೊಳ್ಳೋ ಯೋಚನೆನೇ ಮಾಡಲ್ಲ. ಈ ಜೀವ ರಕ್ಷಕ ಇಂಜೆಕ್ಷನ್​ನಿಂದಾಗಿ ಇಂದು ಹತ್ತಾರು ಜೀವಗಳು ಹೊಸ ಬದುಕು ಪಡೆದುಕೊಂಡಿವೆ. ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯುವ ಹೊಸ ಸಂಶೋಧನೆಯೊಂದು ಪರಿಚಯವಾಗಿದೆ.

ಕೊಡಗು, ಸೆಪ್ಟೆಂಬರ್​ 12: ಆತ್ಮಹತ್ಯೆಯ ಯೋಚನೆ ಬಂದವರ ಬಗ್ಗೆ ಮಾಹಿತಿ ಸಿಕ್ಕರೆ ಅಥವಾ ಆತ್ಮಹತ್ಯೆ ಯತ್ನಿಸಿ ಆಸ್ಪತ್ರೆ ಬಂದವರನ್ನ ಇನ್ನು ಮುಂದೆ ಎಂದಿಗೂ ಆತ್ಮಹತ್ಯೆ (suicide) ಮಾಡಿಕೊಳ್ಳದಂತೆ ತಡೆಯುವ ಹೊಸ ಸಂಶೋಧನೆಯೊಂದು ಪರಿಚಯವಾಗಿದೆ. ಇದೊಂದು ಇಂಜೆಕ್ಷನ್ (injection) ಆಗಿದ್ದು ಸದ್ಯ ರಾಜ್ಯ ವಿವಿಧ ಆಸ್ಪತ್ರೆಗಳಲ್ಲಿ ಲಭ್ಯವಿದೆ.

ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ಬರುವ ರೋಗಿಗಳನ್ನ ವಿವಿಧ ಮಾನಸಿಕ ಮತ್ತು ದೈಹಿಕ ಪ್ರಯೋಗ, ಚಿಕಿತ್ಸೆಗಳಿಗೆ ಒಳಡಿಸಿದ ಬಳಿಕ ಈ ಇಂಜೆಕ್ಷನ್ ನಿಡಲಾಗುತ್ತದೆ. ಒಮ್ಮೆ ಈ ಇಂಜೆಕ್ಷನ್ ತೆಗೆದುಕೊಂಡವರು ಮತ್ತೊಮ್ಮೆ ಆತ್ಮಹತ್ಯೆ ಯೋಚನೆ ಮಾಡವುದಿಲ್ಲ ಎಂದು ಡಾ ರೂಪೇಶ್ ಕುಮಾರ್ ಹೇಳುತ್ತಾರೆ.

ಯಾರಿಗೆಲ್ಲಾ ಈ ಇಂಜೆಕ್ಷನ್ ನೀಡಲಾಗುತ್ತೆ 

ಹಾಗಂತ ಆತ್ಮಹತ್ಯೆ ಯತ್ನಿಸಿ ಬಂದವರಿಗೆಲ್ಲಾ ಈ ಇಂಜೆಕ್ಷನ್ ನೀಡಲಾಗೋದಿಲ್ಲ. ಬದಲಿಗೆ ಆ ವ್ಯಕ್ತಿಯ ಮೇಲೆ ನಾನಾ ಮಾನಸಿಕ ಪರೀಕ್ಷೆಗಳನ್ನ ಮಾಡಲಾಗುತ್ತೆ. ಮಾನಸಿಕ ತಜ್ಞರು ಸಮಾಲೋಚನೆ ಮಾಡ್ತಾರೆ. ಆ ವ್ಯಕ್ತಿಗೆ ಖಿನ್ನತೆಯಿಂದ ಹೊರಬರಲು ಬೇರೆ ಬೇರೆ ಪ್ರಯೋಗಗಳನ್ನ ಮಾಡುತ್ತಾರೆ. ಇವೆಲ್ಲವನ್ನೂ ಮಾಡಿಯೂ ಆ ವ್ಯಕ್ತಿ ಖಿನ್ನತೆಯಿಂದ ಹೊರಬರಲಿಲ್ಲ, ಪದೇ ಪದೇ ಆತ್ಮಹತ್ಯೆ ಯೋಚನೆ ಮಾಡುತ್ತಾನೆ ಎಂದಾದಲ್ಲಿ ಮಾತ್ರ ಅವರಿಗೆ ಅರಿವಿಲ್ಲದೆಯೇ ಈ ಇಂಜೆಕ್ಷನ್ ಅನ್ನ ಗ್ಲುಕೋಸ್​ ಮೂಲಕ ನೀಡಲಾಗುತ್ತದೆ.

ಇದನ್ನೂ ಓದಿ: 25 – 39 ವರ್ಷದ ಗಂಡಸರಿಂದಲೇ ಹೆಚ್ಚು ಆತ್ಮಹತ್ಯೆ ಯತ್ನ, ಬೆಂಗಳೂರಿನಲ್ಲೇ ಅಧಿಕ: ನಿಮ್ಹಾನ್ಸ್ ಅಧ್ಯಯನದಲ್ಲಿ ಆಘಾತಕಾರಿ ಅಂಶ

ಸಾಮಾನ್ಯವಾಗಿ ಈ ಇಂಜೆಕ್ಷನ್ ಖಾಸಗಿ ಆಸ್ಪತ್ರೆಗಳಲ್ಲಿ 15 ರಿಂದ 20 ಸಾವಿರ ರೂ ಬೆಲೆ ಬಾಳುತ್ತೆ. ಆದರೆ
ಸರ್ಕಾರಿ ಆಸ್ಪತ್ರೆಯಲ್ಲಿ ಬಿಪಿಎಲ್ ಕಾರ್ಡ್ ಇದ್ದರೆ ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ. ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಈ ರೀತಿ ಇಂಜೆಕ್ಷನ್ ಪಡೆದ 10ಕ್ಕೂ ಅಧಿಕ ಜನರು ಇಂದು ಆತ್ಮಹತ್ಯೆ ಯೋಚನೆಯಿಂದ ಹೊರ ಬಂದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ಬೇರೆ ಬೇರೆ ಕಾರಣಗಳಿಂದ ಈ ಔಷಧಿಯ ಗುರುತನ್ನ ಬಿಡುಗಡೆ ಮಾಡಲು ಆಸ್ಪತ್ರೆ ನಿರಾಕರಿಸಿದೆ. ಸದ್ಯ ಮಡಿಕೇರಿ ಜಿಲ್ಲಾಸ್ಪತ್ರೆ ಸೇರಿದಂತೆ ರಾಜ್ಯದ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಇಂಜೆಕ್ಷನ್ ಲಭ್ಯವಿದ್ದು, ಜೀವ ರಕ್ಷಕ ಔಷಧಿ ಎಂದೇ ಪರಿಗಣಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Sep 12, 2025 12:01 PM