ಸನ್ನಿ ಲಿಯೋನ್ ಸಸ್ಯಾಹಾರಿಯೋ, ಮಾಂಸಾಹಾರಿಯೋ; ನಟಿ ಕೊಟ್ರು ಅಚ್ಚರಿಯ ಉತ್ತರ
ನ್ನಿ ಲಿಯೋನ್ ಸಸ್ಯಾಹಾರಿ. ಪ್ರಾಣಿಗಳನ್ನು ಹತ್ಯೆ ಮಾಡುವುದು ಅವರಿಗೆ ಇಷ್ಟ ಆಗುವುದಿಲ್ಲ.
ನಟಿ ಸನ್ನಿ ಲಿಯೋನ್ (Sunny Leone) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರನ್ನು ಕಂಡರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ಈ ಪ್ರೀತಿಯನ್ನು ನಾನಾ ರೀತಿಯಲ್ಲಿ ವ್ಯಕ್ತಪಡಿಸಲಾಗುತ್ತಿದೆ. ಕರ್ನಾಟಕದಲ್ಲಿ ಮಟನ್ ಶಾಪ್ಗೆ ಸನ್ನಿ ಲಿಯೋನ್ ಅವರ ಹೆಸರನ್ನು ಇಡಲಾಗಿದೆ. ಸನ್ನಿ ಲಿಯೋನ್ ಫೋಟೋ ತೋರಿಸಿದರೆ ಶೇ.20 ಡಿಸ್ಕೌಂಟ್ ಸಿಗುತ್ತದೆ. ಇತ್ತೀಚೆಗೆ ಸನ್ನಿ ಲಿಯೋನ್ ಬೆಂಗಳೂರಿಗೆ ಬಂದಿದ್ದರು. ಆ ಸಂದರ್ಭದಲ್ಲಿ ಈ ಬಗ್ಗೆ ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಸನ್ನಿ ಉತ್ತರ ನೀಡಿದ್ದಾರೆ. ಸನ್ನಿ ಲಿಯೋನ್ ಸಸ್ಯಾಹಾರಿ (Vegetarian). ಪ್ರಾಣಿಗಳನ್ನು ಹತ್ಯೆ ಮಾಡುವುದು ಅವರಿಗೆ ಇಷ್ಟ ಆಗುವುದಿಲ್ಲ. ಆದರೆ, ಫ್ಯಾನ್ಸ್ ಮಾಡುವ ಈ ರೀತಿ ಕೆಲಸದ ಬಗ್ಗೆ ಅವರಿಗೆ ಖುಷಿ ಇದೆ. ಈ ಕುರಿತು ಅವರು ಮಾತನಾಡಿದ್ದಾರೆ. ಈ ವಿಡಿಯೋ ನೋಡಿ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: May 21, 2022 01:58 PM