Daily Devotional: ಅಧಿಕ ಜೇಷ್ಠ ಮಾಸದಲ್ಲಿ ವಿಷ್ಣು ಸಹಸ್ರನಾಮ ಓದಲೇಬೇಕು!
ಅಧಿಕ ಜ್ಯೇಷ್ಠ ಮಾಸದಲ್ಲಿ ವಿಷ್ಣು ಪೂಜೆಯಿಂದ ಏನೆಲ್ಲಾ ಲಾಭವಿದೆ ಎಂದು ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಅಧಿಕ ಜೇಷ್ಠ ಮಾಸವು ಹಿಂದೂ ಚಾಂದ್ರಮಾನ ಪದ್ಧತಿಯಲ್ಲಿ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರವಾದ ಮಾಸವಾಗಿದೆ. ಸೂರ್ಯ ಮತ್ತು ಚಂದ್ರರ ಚಲನೆಯನ್ನು ಅವಲಂಬಿಸಿ ಇದು ಪ್ರತಿ ಮೂರು ವರ್ಷಗಳಿಗೊಮ್ಮೆ ಬರುತ್ತದೆ. ಈ ಮಾಸವನ್ನು ‘ಪುರುಷೋತ್ತಮ ಮಾಸ’ ಅಥವಾ ‘ಅಧಿಕ ಮಾಸ’ ಎಂದೂ ಕರೆಯುತ್ತಾರೆ. ‘ಅಧಿಕಸ್ಯ ಅಧಿಕ ಫಲಂ’ ಎಂಬ ನುಡಿಯಂತೆ ಈ ಮಾಸದಲ್ಲಿ ಮಾಡುವ ಪುಣ್ಯ ಕಾರ್ಯಗಳಿಗೆ ಹೆಚ್ಚಿನ ಫಲ ದೊರೆಯುತ್ತದೆ ಎಂದು ನಂಬಲಾಗಿದೆ.

ಪ್ರತಿ ಮಾಸಕ್ಕೂ ಒಬ್ಬ ಅಧಿಪತಿ ದೇವರಿರುತ್ತಾನೆ. ಆದರೆ ಅಧಿಕ ಮಾಸಕ್ಕೆ ಜವಾಬ್ದಾರಿ ವಹಿಸಿಕೊಳ್ಳಲು ದೇವರುಗಳು ಹಿಂಜರಿದಾಗ, ಸಾಕ್ಷಾತ್ ವಿಷ್ಣು ಭಗವಾನರು ಈ ಮಾಸದ ನಿರ್ವಹಣೆಯನ್ನು ವಹಿಸಿಕೊಂಡರು. ಹಾಗಾಗಿ ಇದನ್ನು ಪುರುಷೋತ್ತಮ ಮಾಸ ಎಂದು ಕರೆಯಲಾಗುತ್ತದೆ ಮತ್ತು ವಿಷ್ಣುವಿನ ಆರಾಧನೆಗೆ ಅತ್ಯಂತ ಪ್ರಶಸ್ತ ಮಾಸವಾಗಿದೆ. ಈ ತಿಂಗಳು ಪೂರ್ತಿ ವಿಷ್ಣುವೇ ಅಧಿಪತಿಯಾಗಿರುತ್ತಾನೆ. ವಿಷ್ಣು ಸಹಸ್ರನಾಮ ಪಾರಾಯಣ, ಓಂ ನಮೋ ಭಗವತೇ ವಾಸುದೇವಾಯ ಮಂತ್ರ ಜಪ, ಭಗವದ್ಗೀತೆ ಹಾಗೂ ಭಾಗವತ ಪಾರಾಯಣ, ನಾಮಸ್ಮರಣೆ ಮತ್ತು ದಾನ ಧರ್ಮಗಳು ವಿಶೇಷ ಪುಣ್ಯವನ್ನು ತರುತ್ತವೆ. ಬಡವರಿಗೆ ಅನ್ನದಾನ, ಸಹಾಯ ಮಾಡುವುದು ಅತ್ಯಂತ ಶುಭಕರ. ಈ ಮಾಸದಲ್ಲಿ ವಿವಾಹ, ಉಪನಯನ, ಗೃಹಪ್ರವೇಶ ಮುಂತಾದ ಕಾರ್ಯಗಳನ್ನು ನಿಷಿದ್ಧವೆಂದು ಪರಿಗಣಿಸಲಾಗುತ್ತದೆ. ದೇವತಾರಾಧನೆ ಮತ್ತು ಪುಣ್ಯ ಸಂಗ್ರಹಕ್ಕೆ ಈ ಮಾಸ ಅತ್ಯಂತ ಯೋಗ್ಯವಾಗಿದೆ ಎಂದು ಅವರು ವಿವರಿಸಿದ್ದಾರೆ
Published on: May 19, 2026 07:50 AM
ಪಾವನಾ ಕೊರಳಿಗೆ ತಾಳಿ ಕಟ್ಟಿದ ನಟ ಚಿಕ್ಕಣ್ಣ; ಮದುವೆಯ ಸುಂದರ ವಿಡಿಯೋ ನೋಡಿ..
ರಾಯರ ಮಠದಲ್ಲಿ ಗುರುರಾಯರ ಮಧ್ಯಾರಾಧನೆ: ವಿಶೇಷ ಪೂಜಾ ಕೈಂಕರ್ಯಗಳು
ಪಾರ್ಕ್ಗಳ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಕೆ ಖಂಡಿಸಿ ಮೈಸೂರಲ್ಲೂ ಪ್ರತಿಭಟನೆ
ಗೃಹಲಕ್ಷ್ಮಿ ಯೋಜನೆಗೆ 3 ವರ್ಷ: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸಂದೇಶ