ರಂಗೋಲಿ ಹಾಕುತ್ತಿದ್ದ ಮಹಿಳೆಯ ಸರ ದೋಚಿದ ಖದೀಮ: ಇಲ್ಲಿದೆ ನೋಡಿ ಭಯಾನಕ ದೃಶ್ಯ
ಹೆಲ್ಮಟ್ ಧರಿಸಿ ಬಂದ ವ್ಯಕ್ತಿ ಓರ್ವ ಹಾಡು ಹಗಲೆ ಸರ ಕಿತ್ತೊಯ್ದಿದ್ದಾನೆ. ಮಹಿಳೆ ರಂಗೋಲಿ ಹಾಕುವಾಗ ಹೊಂಚುಹಾಕಿ ಕೃತ್ಯವೆಸಲಾಗಿದೆ.
ಹಾಸನ: ಮನೆ ಮುಂದೆ ರಂಗೋಲಿ (rangoli) ಹಾಕುವಾಗ ಮಹಿಳೆ ಮೇಲೆ ಅಟ್ಯಾಕ್ ಮಾಡಿ ಸರ ದೋಚಿರುವಂತಹ ಘಟನೆ ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ಅಕ್ಕಿ ಕುರುಬರ ಬೀದಿಯಲ್ಲಿ ನಡೆದಿದೆ. ಹೆಲ್ಮಟ್ ಧರಿಸಿ ಬಂದ ವ್ಯಕ್ತಿ ಓರ್ವ ಹಾಡು ಹಗಲೆ ಸರ ಕಿತ್ತೊಯ್ದಿದ್ದಾನೆ. ಮಹಿಳೆ ರಂಗೋಲಿ ಹಾಕುವಾಗ ಹೊಂಚುಹಾಕಿ ಕೃತ್ಯವೆಸಲಾಗಿದೆ. ರಂಗೋಲಿ ಹಾಕೋವಾಗ ರಸ್ತೆಯಲ್ಲಿ ಮುಂದೆ ಹೋಗಿ, ಮತ್ತೆ ವಾಪಸ್ಸು ಬಂದು ಕಳ್ಳ ಸರ ಕಿತ್ತುಕೊಂಡಿದ್ದಾನೆ. ಮಹಿಳೆ ಕಿರಿಚಾಡಲು ಬಿಡದಂತೆ ಬಾಯಿ ಮುಚ್ಚಿಡಿದು ಸರಗಳ್ಳತನ ಮಾಡಿದ್ದು, ಕಡೆಗೆ ರಂಗೋಲಿಯನ್ನ ಮುಖದ ಮೇಲೆ ಎರಚಿ ಖದೀಮ ಎಸ್ಕೇಪ್ ಆಗಿದ್ದಾನೆ. ಹೊಂಚು ಹಾಕಿ, ಸರ ಕಿತ್ತು ಪರಾರಿಯಾಗೋ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೊಳೆನರಸೀಪುರ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಧಾರಾಕಾರ ಮಳೆಗೆ ಬೆಳಗಾವಿಯಲ್ಲಿ ಕುಸಿದ ಮನೆಗಳು: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ವೃದ್ಧರು
Latest Videos