ಆರ್ಯನ್ ಜಾಮೀನಿಗಾಗಿ ಕೋರ್ಟ್ಗೆ ಅಲೆದಾಡುವ, ಅದು ಸಿಗದೆ ಹೋದಾಗ ಭಾವುಕಳಾಗಿ ಅತ್ತುಬಿಡುವ ಆ ಮಹಿಳೆ ಯಾರು ಗೊತ್ತಾ?
ಪೂಜಾ ಅವರು ಖಾನ್ ಪತ್ನಿ ಗೌರಿ ಖಾನ್ ಮತ್ತು ಅವರ ಮಕ್ಕಳು-ಆರ್ಯನ್, ಸುಹಾನಾ ಖಾನ್ ಮತ್ತು ಅಬ್ರಾಮ್ ರೊಂದಿಗೆ ಅತ್ಯಂತ ಆತ್ಮೀಯ ಸಂಬಂಧ ಹೊಂದಿದ್ದಾರೆ. ಆವರೊಂದಿಗಿನ ಫೋಟೋಗಳನ್ನು ಪೂಜಾ ಆಗಾಗ ಶೇರ್ ಮಾಡುತ್ತಿರುತ್ತಾರೆ.
ಆ ದೃಶ್ಯವನ್ನು ನೀವು ಸಹ ಟಿವಿಗಳಲ್ಲಿ ನೋಡಿರುವ ಸಾಧ್ಯತೆಯಿದೆ. ಅಕ್ಟೋಬರ್ 8 ರಂದು ಬಾಲಿವುಡ್ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಜಾಮೀನು ತಿರಸ್ಕೃತಗೊಂಡ ಕೂಡಲೇ ಕೋರ್ಟ್ ಆವರಣದಲ್ಲಿ ಒಬ್ಬ ಮಹಿಳೆ ಭಾವುಕರಾಗಿ ಕಣ್ಣೀರು ಸುರಿಸುತ್ತಿದ್ದರು. ಅವರು ಯಾರು ಅನ್ನೋದು ಬಹಳಷ್ಟು ಜನಕ್ಕೆ ಗೊತ್ತಿಲ್ಲ. ಕುಟುಂಬದ ಸದಸ್ಯರು ಆರ್ಯನ್ ನನ್ನು ಭೇಟಿಮಾಡಲು ಕೋರ್ಟ್ ಅನುಮತಿ ನಿರಾಕರಿಸಿದೆ. ಆದರೆ, ಆರ್ಯನ್ ಪರ ವಾದಿಸುತ್ತಿರುವ ವಕೀಲ ಸತೀಶ್ ಮನೆಸಿಂಧೆ ಅವರು ಆ ಮಹಿಳೆಗೆ ಆರ್ಯನ್ ನನ್ನು ಭೇಟಿಯಾಗಲು ಅನುಮತಿ ನೀಡುವಂತೆ ಕೋರ್ಟ್ ಅನ್ನು ಕೋರಿದ್ದರು.
ಓಕೆ, ಅ ಮಹಿಳೆ ಯಾರೆಂದು ಈಗ ಗೊತ್ತಾಗಿದೆ. ಅವರ ಹೆಸರು ಪೂಜಾ ದದ್ಲಾನಿ, 2012 ರಿಂದ ಶಾರುಖ್ ಅವರ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪೂಜಾ, ಖಾನ್ ಕುಟುಂಬ್ ಜೊತೆ ನಿಕಟ ಬಾಂಧವ್ಯ ಹೊಂದಿದ್ದಾರೆ, ಅವರ ಇನ್ಸ್ಟಾಗ್ರಾಮ್ ಫೋಸ್ಟ್ಗಳನ್ನು ನೋಡಿದರೆ ಅದು ವೇದ್ಯವಾಗುತ್ತದೆ. ಶಾರುಖ್ ಕುಟುಂಬದಲ್ಲಿ ತಾನೂ ಒಬ್ಬ ಸದಸ್ಯೆ ಎಂದು ಪೂಜಾ ಹೇಳಿಕೊಂಡಿದ್ದಾರೆ.
ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಪೂಜಾ ಅವರು ಖಾನ್ ಪತ್ನಿ ಗೌರಿ ಖಾನ್ ಮತ್ತು ಅವರ ಮಕ್ಕಳು-ಆರ್ಯನ್, ಸುಹಾನಾ ಖಾನ್ ಮತ್ತು ಅಬ್ರಾಮ್ ರೊಂದಿಗೆ ಅತ್ಯಂತ ಆತ್ಮೀಯ ಸಂಬಂಧ ಹೊಂದಿದ್ದಾರೆ. ಆವರೊಂದಿಗಿನ ಫೋಟೋಗಳನ್ನು ಪೂಜಾ ಆಗಾಗ ಶೇರ್ ಮಾಡುತ್ತಿರುತ್ತಾರೆ.
ಆರ್ಯನ್ನನ್ನು ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್ ಸಿ ಬಿ) ಅಕ್ಟೋಬರ್ ಮೂರನೇ ತಾರೀಕಿನಂದು ಅರಸ್ಟ್ ಮಾಡಿದ ಬಳಿಕ ಪೂಜಾ ಅನೇಕ ಸಲ ಎನ್ ಸಿ ಬಿ ಕಚೇರಿ ಬಳಿ ಕಾಣಿಸಿಕೊಂಡಿದ್ದಾರೆ. ಅಕ್ಟೋಬರ್ಮ 13 ರಂದು ನಡೆದ ಆರ್ಯನ್ ಜಾಮೀನು ವಿಚಾರಣೆ ಸಂದರ್ಭದಲ್ಲೂ ಪೂಜಾ ಕೋರ್ಟಿನಲ್ಲಿ ಹಾಜರಿದ್ದರು.
ಅಂದಹಾಗೆ, 38 ವರ್ಷ ವಯಸ್ಸಿನ ಪೂಜಾಗೆ ಮದುವೆಯಾಗಿದ್ದು ಅವರ ಪತಿ ಹಿತೇಶ್ ಗುರ್ನಾನಿ ಲಿಸ್ಟಾ ಜೆವೆಲ್ಸ್ ಹೆಸರಿನ ಸಂಸ್ಥೆಯಲ್ಲಿ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಾರೆ. ದಂಪತಿಗೆ ಒಬ್ಬ ಮಗಳಿದ್ದಾಳೆ.
ಇದನ್ನೂ ಓದಿ: Viral Video: ಸುಮಧುರ ಕಂಠದಲ್ಲಿ ಹಾಡು ಹೇಳಿ ರೋಗಿಗೆ ಧೈರ್ಯ ತುಂಬಿದ ನರ್ಸ್; ನೆಟ್ಟಿಗರೆಲ್ಲಾ ಭಾವುಕರಾದ ವಿಡಿಯೋವಿದು