ರಾಷ್ಟ್ರಮಟ್ಟದಲ್ಲಿ ಕೀರ್ತಿ ಪತಾಕೆ ಹಾರಿಸ್ತೀವಿ ಅಂತಿದ್ದಾರೆ ಯಾದಗಿರಿಯ ಈ ಕ್ರೀಡಾಪಟುಗಳು, ಆದರೆ ಇಬ್ಬರಿಗೂ ಬಡತನ ಕಾಡ್ತಿದೆ, ನೆರವು ಬೇಕಾಗಿದೆ

ಅವರಿಬ್ಬರೂ ಕಡು ಬಡತನದ ಕುಟುಂಬದಲ್ಲಿ ಜನಿಸಿದವರು. ಆದರೆ ಅವರಿಬ್ಬರಿಗೂ ಕ್ರೀಡೆ ಅಂದ್ರೆ ಅಚ್ಚು ಮೆಚ್ಚ. ಚಿಕ್ಕವಯಸ್ಸಿನಲ್ಲೇ ಒಲಂಪಿಕ್ಸ್​​​ ನಲ್ಲಿ ಭಾಗವಹಿಸಿ ಭಾರತಕ್ಕೆ ಪದಕ ತರಬೇಕು ಅಂತ ಕನಸು ಕಂಡವರು. ಅದರಂತೆ ಪರಿಶ್ರಮದಿಂದ ರಾಜ್ಯಮಟ್ಟದ ಕ್ರೀಡೆಯಲ್ಲಿ ಆಡಿ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಆದ್ರೆ ಈಗ ಅದೇ ಬಡತನ ಅವರಿಬ್ಬರಿಗೂ ಅಡ್ಡಿಯಾಗಿದೆ.

ರಾಷ್ಟ್ರಮಟ್ಟದಲ್ಲಿ ಕೀರ್ತಿ ಪತಾಕೆ ಹಾರಿಸ್ತೀವಿ ಅಂತಿದ್ದಾರೆ ಯಾದಗಿರಿಯ ಈ ಕ್ರೀಡಾಪಟುಗಳು, ಆದರೆ ಇಬ್ಬರಿಗೂ ಬಡತನ ಕಾಡ್ತಿದೆ, ನೆರವು ಬೇಕಾಗಿದೆ
| Edited By: ಸಾಧು ಶ್ರೀನಾಥ್​

Updated on: Sep 23, 2023 | 6:46 PM

ಅವರಿಬ್ಬರೂ ಕಡು ಬಡತನದ ಕುಟುಂಬದಲ್ಲಿ ಜನಿಸಿದ್ದವರು. ಆದರೆ ಅವರಿಬ್ಬರಿಗೂ ಕ್ರೀಡೆ ಅಂದ್ರೆ ಅಚ್ಚು ಮೆಚ್ಚ. ಚಿಕ್ಕವಯಸ್ಸಿನಲ್ಲೇ ಓಲಂಪಿಕ್ ನಲ್ಲಿ ಭಾಗವಹಿಸಿ ಭಾರತಕ್ಕೆ ಪದಕ ತರಬೇಕು ಅಂತ ಕನಸು ಕಂಡವರು. ಅದರಂತೆ ಪರಿಶ್ರಮದಿಂದ ರಾಜ್ಯಮಟ್ಟದ ಕ್ರೀಡೆಯಲ್ಲಿ ಆಡಿ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಆದ್ರೆ ಈಗ ಅದೇ ಬಡತನ ಅವರಿಬ್ಬರಿಗೂ ಅಡ್ಡಿಯಾಗಿದೆ.

ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಗೆದ್ದು ಹಲವು ಪದಕಗಳನ್ನು ಬಾಚಿಕೊಂಡ ಕ್ರೀಡಾಪಟುಗಳು.. ರಾಜ್ಯ ಮಟ್ಟದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಆರ್ಥಿಕ ನೆರವು ನೀಡುವಂತೆ ಕೇಳ್ತಿರೋ ಕ್ರೀಡಾಪಟುಗಳು.. ಯಸ್ ಈ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿಯಲ್ಲಿ. ಹೌದು ಯಾದಗಿರಿ ಜಿಲ್ಲೆಯ ಶಹಾಪುರ‌ ತಾಲೂಕಿನ ಉಕ್ಕನಾಳ ತಾಂಡಾದ ಲೋಕೇಶ್ ರಾಠೋಡ್ ಎಂಬ ಯುವಕ ಕಳೆದ ಆರು ವರ್ಷಗಳಲ್ಲಿ ಕ್ರೀಡೆಯಲ್ಲಿ ಮಹತ್ತರ ಸಾಧನೆ ಮಾಡಿದ್ದಾನೆ.

ಲೋಕೇಶ್ ರಾಠೋಡ್ ಚಿಕ್ಕ ವಯಸ್ಸಿನಲ್ಲಿ ಕ್ರೀಡೆಗಳಲ್ಲಿ ಆಸಕ್ತಿ ಹೊಂದಿದ್ದ.ಬಾಲ್ಯದಿಂದಲೇ ಕ್ರೀಡೆಯಲ್ಲಿ ಆಸಕ್ತಿ ವಹಸಿದ ಯುವಕ ನಿತ್ಯ ಕ್ರೀಡೆ ಬಗ್ಗೆನೇ ಯೋಚನೆ ಮಾಡ್ತಾಯಿದ್ದ. ಬೆಳೆಯುತ್ತಾ ಬೆಳೆಯುತ್ತಾ ಹೋಬಳಿ, ತಾಲೂಕು, ಜಿಲ್ಲಾ ಸೇರಿ ರಾಜ್ಯ ಹಾಗೂ ರಾಜ್ಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಪದಕಗಳನ್ನು ಪಡೆದುಕೊಂಡಿದ್ದಾರೆ. 2017 ರಲ್ಲಿ ಪ್ರಥಮ ಭಾರಿಗೆ ದಕ್ಷಿಣ ಭಾರತದ ಕ್ರೀಡಾಕೂಟದಲ್ಲಿ ಭಾಗವಹಿಸಿ ತೃತೀಯ ಸ್ಥಾನ ಪಡೆದ್ದ.

ಈ ಮೂಲಕ ಕ್ರೀಡಾ ಜರ್ನಿ ಆರಂಭಿಸಿದ ರಾಠೋಡ್.ಕಳೆದ ಎರಡು ದಿನಗಳ ಹಿಂದೆ ನಡೆದ ಖೇಲೋ ಇಂಡಿಯಾ ಅಡಿಯಲ್ಲಿ ರಾಜ್ಯ ಮಟ್ಟದ ಓಲಂಪಿಕ್ ಕ್ರೀಡೆಯಲ್ಲಿ ಎತ್ತರ ಜೀಗಿತದಲ್ಲಿ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ತಂದೆ ತಾಯಿ ಇಬ್ಬರು ದೂರದ ಪುಣೆಯಲ್ಲಿ ಕೂಲಿ ಕೆಲಸ ಮಾಡ್ತಾರೆ. ಹೀಗಾಗಿ ಜಾರ್ಖಂಡ್ ನಲ್ಲಿ‌ ನಡೆಯುವ ರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಲು ಬಡತನ ಅಡ್ಡಿಯಾಗುತ್ತಿದೆ.

ಇದೆ ಕಾರಣಕ್ಕೆ ನನಗೆ ರಾಷ್ಟ್ರ ಮಟ್ಟದ ಅಥ್ಲೆಟಿಕ್ ಕ್ರೀಡೆ ಜಾರ್ಖಂಡ್ ನಲ್ಲಿ ‌ನಡೆಯಲಿರುವ ಕ್ರೀಡಾಕೂಟದಲ್ಲಿ ಭಾಗವಹಿಸಲು ಆರ್ಥಿಕ ನೆರವು ನೀಡಿ ಅಂತಿದ್ದಾನೆ. ಕೇವಲ 40-50 ಸಾವಿರ ದುಡ್ಡು ಬೇಕಾಗಿದೆ ಆದ್ರೆ ತಂದೆ ತಾಯಿ ಇಷ್ಟು ದುಡ್ಡು ಕೊಟ್ಟು ನನಗೆ ಜಾರ್ಖಂಡ್ ಗೆ ಕಳುಹಿಸಲು ಸಾಧ್ಯವಿಲ್ಲ ಇದೆ ಕಾರಣಕ್ಕೆ ಯಾರಾದ್ರು ದಾನಿಗಳು ಮುಂದೆ ಬಂದು ಸಹಾಯ ಮಾಡಿದ್ರೆ ಸಾಧನೆ ಮಾಡುತ್ತೆನೆ ಎನ್ನುತ್ತಾನೆ ಯುವಕ ಲೋಕೇಶ್. ಇನ್ನು ಸಹಾಯ ಮಾಡಿದ್ರೆ ಯಾದಗಿರಿ ಅಷ್ಟೇ ಅಲ್ದೆ ಈಡೀ ರಾಜ್ಯದ ಹೆಸರು ತರುತ್ತೆನೆ ಎನ್ನುತ್ತಾನೆ ಲೋಕೇಶ್

ಇತ್ತ ಇನ್ನೋರ್ವ ಕ್ರೀಡಾಪಟು ಯುವತಿ ಪಲ್ಲವಿ ಪಾಟೀಲ್ ಯಾದಗಿರಿ ನಗರ ನಿವಾಸಿಯಾಗಿದ್ದು, ಕ್ರೀಡೆಯಲ್ಲಿ ಮಹಿಳೆಯರು ಕಮ್ಮಿ ಇಲ್ಲ ಅನ್ನೋದನ್ನ ಸಾಭೀತು ಪಡಿಸಿದ್ದಾಳೆ. ಆದ್ರೇ ರಾಜ್ಯ ಮಟ್ಟದಿಂದ ರಾಷ್ಟ್ರ ಮಟ್ಟದಲ್ಲಿ ಹೋಗಿ ಆಡಲು ಇವರಿಗೆ ಆರ್ಥಿಕ ನೆರವು ಬೇಕಾಗಿದೆ. ಈವರೆಗೂ ಇವರು ಹಲವು ರಾಜ್ಯ ಮಟ್ಟದ ಪದಕಗಳಿಗೂ ಕೊರಳ್ಳೊಡಿದ್ದಾರೆ. ಈಗ ನಮಗೆ ಆರ್ಥಿಕ ‌ನೆರವು ನೀಡಿ, ಜಿಲ್ಲೆಯ ಕೀರ್ತಿ ಪತಾಕೆಯನ್ನ ಅಂತರಾಷ್ಟ್ರೀಯ ಮಟ್ಟದಲ್ಲೂ ಹಾರಸ್ತೀವಿ ಅಂತಿದ್ದಾರೆ.

ಬಾಲ್ಯದಿಂದ್ಲೇ ಹೈಜಂಪ್ ನಲ್ಲಿ ಸಾಧನೆ ಮಾಡುತ್ತಾ ಬಂದಿದ್ದಾಳೆ. ಲೋಕೇಶ್ ಸಮಗ್ರ ಅಥ್ಲೆಟಿಕ್ಸ್ ನಲ್ಲಿ ಸಾಧನೆ ಮಾಡಿದ್ರೆ ಪಲ್ಲವಿ ಮಾತ್ರ ಕೇವಲ ಹೈಜಂಪ್ ನಲ್ಲಿ ಸಾಧನೆ ಮಾಡಿದ್ದಾಳೆ. ಆದ್ರೆ ಇಬ್ಬರಿಗೂ ಬಡತನ ಎದುರಾಗಿದೆ. ಯಾದಗಿರಿ ಜಿಲ್ಲೆಯ ಇಬ್ಬರೂ ಕ್ರೀಡಾಪಟುಗಳು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ಕಳೆದ ಆರು ವರ್ಷಗಳಿಂದ ಛತ್ತೀಸ್ಗಢ, ತೆಲಂಗಾಣ, ನವದೆಹಲಿ, ಪಂಜಾಬ್, ಗುಜರಾತ್ ನಲ್ಲಿ ಆಡಿದ್ದಾರೆ. ಸದ್ಯ ಜಾರ್ಖಂಡ್ ನಲ್ಲಿ ನಡೆಯುವ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಇಬ್ಬರು ಕ್ರೀಡಾಪಟುಗಳು ಭಾಗಿಯಾಗಬೇಕಿದೆ. ಆದ್ರೇ ಕಡುಬಡತನ ಇವರಿಬ್ಬರ ಕನಸಿಗೆ ಅಡ್ಡಗಾಲು ಹಾಕ್ತಿದೆ. ಇದೆ ಮೊದಲ ಬಾರಿ ಯಾದಗಿರಿ ಜಿಲ್ಲೆಯ ಕ್ರೀಡಾಪಟುಗಳು ಈ ರೀತಿ ಸಾಧನೆ ಮಾಡಿದ್ದಾರೆ.

ಆದ್ರೆ ಈ ಇಬ್ಬರಿಗೆ ಬಡತನ ಅಡ್ಡಿಯಾಗಿದ್ದು ಸಹಾಯ ಹಸ್ತಕ್ಕಾಗಿ ಅಂಗಲಾಚುತ್ತಿದ್ದಾರೆ. ಮುಂದಿ‌ನ ತಿಂಗಳ 4 ರಂದು ಜಾರ್ಖಂಡ್ ನಲ್ಲಿ‌ ನಡೆಯುವ ರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಭಾಗಿಯಾಗಬೇಕಿದ್ದು ಸಹಾಯದ ಅನಿವಾರ್ಯವಿದೆ. ಒಟ್ನಲ್ಲಿ ಕಡು ಬಡತನದಲ್ಲಿ ಅರಳಿದ ಕ್ರೀಡಾಪಟುಗಳಿಗೆ ಬಡತನ ಅಡ್ಡಿಯಾಗಿದ್ದು, ತೀರಾ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸದ್ಯ ಕ್ರೀಡಾಪಟುಗಳಿಗೆ ಆರ್ಥಿಕ ನೆರವು ನೀಡಿ ಕ್ರೀಡೆಗೆ ಪ್ರೋತ್ಸಾಹ ನೀಡಿದ್ರೆ ಯಾದಗಿರಿ ಜಿಲ್ಲೆ ಹಾಗೂ ರಾಜ್ಯದ ಹೆಸರು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗ್ತಾರೆ ಎನ್ನೋದೆ ನಮ್ಮ ಆಶಯವಾಗಿದೆ.

Follow us
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ಆನೆ ಭೀಮ ಮತ್ತೆ ಗ್ರಾಮಕ್ಕೆ ಎಂಟ್ರಿ, ಗಾಂಭೀರ್ಯ ನಡಿಗೆ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
ರಿಂಕು ಸಿಂಗ್ ಬಗ್ಗೆ ದ್ರಾವಿಡ್ ಏನೆಲ್ಲ ಹೇಳಿದ್ದಾರೆ ಗೊತ್ತೇ?: ವಿಡಿಯೋ ನೋಡಿ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ
‘ಅವರು ಗಲೀಜಿನಲ್ಲಿ ಇದ್ದಾರೆ’: ಯಾವ ಮುಲಾಜು ಇಲ್ಲದೇ ನೇರವಾಗಿ ಹೇಳಿದ ಸಂಗೀತಾ