ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಇವುಗಳಿಂದಲೇ ಭಾರತ ವಿಶ್ವಕಪ್​ಗೆ ಮುತ್ತಿಕ್ಕಿದ್ದು

ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಇವುಗಳಿಂದಲೇ ಭಾರತ ವಿಶ್ವಕಪ್​ಗೆ ಮುತ್ತಿಕ್ಕಿದ್ದು

ರಮೇಶ್ ಬಿ. ಜವಳಗೇರಾ
|

Updated on:Jun 30, 2024 | 12:21 PM

ಐಸಿಸಿ ಕ್ರಿಕೆಟ್‌ ವಿಶ್ವಕಪ್‌ ಫೈನಲ್‌ ಸೋಲಿನ ನೋವು ಕೋಟ್ಯಂತರ ಭಾರತೀಯರ ಎದೆಯಲ್ಲಿತ್ತು. ಇನ್ನೇನು ಸೋತೇ ಹೋಗ್ತೀವಿ ಅನ್ನೋ ಆತಂಕದಲ್ಲಿದ್ದ ಭಾರತದ ಕ್ರಿಕೆಟ್‌ ಅಭಿಮಾನಿಗಳಿಗೆ 20ನೇ ಓವರ್‌ನಲ್ಲಿ ಗೆಲುವಿನ ಸಿಹಿ ಸಿಕ್ಕಿತು. ಈ ಮೂಲಕ ಹರಿಣಗಳ ಕೈಯಿಂದ ಗೆಲುವು ಕಸಿದುಕೊಂಡ ಭಾರತ, 2ನೇ ಬಾರಿಗೆ ಟಿ20 ಕ್ರಿಕೆಟ್‌ ವಿಶ್ವಕಪ್​ಗೆ ಮುತ್ತಿಟ್ಟಿದೆ. ಹಾಗಾದ್ರೆ, ಟೀಂ ಇಂಡಿಯಾ ಗೆಲುವಿಗೆ ಆ ಐದು ಪ್ರಮುಖ ಕಾರಣಗಳು. ಅವು ಯಾವುವು ಎನ್ನುವುದನ್ನು ತಿಳಿಯಿರಿ.

ಟಿ-20 ವಿಶ್ವಕಪ್​ನ ರಣರೋಚಕ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಗೆಲುವು ಸಿಕ್ಕಿದೆ. ಬಾರ್ಬಡೋಸ್‌ನಲ್ಲಿ ನಡೆದ ಫೈನಲ್‌ನಲ್ಲಿ ಟೀಂ ಇಂಡಿಯಾ ರೋಚಕ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನ ಭಾರತ ಮಣಿಸಿ ಕ್ರಿಕೆಟ್‌ ಟಿ20 ವಿಶ್ವಕಪ್‌ ಮುಡಿಗೇರಿಸಿಕೊಂಡಿದೆ. ಈ ಮೂಲಕ ಎರಡನೇ ಬಾರಿಗೆ ಟಿ20 ವಿಶ್ವಕಪ್‌ ಚಾಂಪಿಯನ್‌ ಆಗಿ ಭಾರತ ಹೊರಹೊಮ್ಮಿದೆ. ಟಾಸ್‌ ಗೆದ್ದು ಮೊದಲಿಗೆ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಭಾರತ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 176 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನ ಕಲೆಹಾಕಿತು. ಭಾರತ ನೀಡಿದ 177 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ, ಕೊನೆಗೆ 8 ವಿಕೆಟ್‌ ನಷ್ಟಕ್ಕೆ 169 ರನ್‌ಗಳಿಸಲಷ್ಟೇ ಶಕ್ತವಾಯಿತು. ಕೊನೆಯ ಓವರ್‌ನಲ್ಲೂ ಹಾರ್ದಿಕ್‌ ಪಾಂಡ್ಯ ಡೇವಿಡ್‌ ಮಿಲ್ಲರ್‌ ವಿಕೆಟ್‌ ಕೂಡ ಉರುಳಿಸಿದ್ರು. ಹೀಗೆ, 169 ರನ್‌ಗಳಿಗೆ ದಕ್ಷಿಣ ಆಫ್ರಿಕಾವನ್ನ ಕಟ್ಟಿಹಾಕುವಲ್ಲಿ ಭಾರತ ಯಶಸ್ವಿಯಾಯ್ತು. 2ನೇ ಬಾರಿಗೆ ಟಿ20 ವಿಶ್ವಕಪ್‌ಗೆ ಭಾರತ ಮುತ್ತಿಕ್ಕಿತು. ಹಾಗಾದ್ರೆ, ಟೀಮ್ ಇಂಡಿಯಾ ಈ ಬಾರಿ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಗೆಲುವಿಗೆ ನಾನಾ ಕಾರಣಗಳು ಇವೆ. ಒಂದು ಸೂರ್ಯ ಕುಮಾರ್ ಹಿಡಿದ ಕ್ಯಾಚ್, ಮತ್ತೊಂದು ಹಾರ್ದಿಕ್ ಪಾಂಡ್ಯಾ ಮಾಡಿದ ಬೌಲಿಂಗ್, ಇನ್ನೊಂದು ಬೂಮ್ರಾ ಬೌಲಿಂಗ್ ಹೀಗೆ ನಾನಾ ಕಾರಣಗಳು ಇವೆ. ಹಾಗಾದ್ರೆ, ಪ್ರಮುಖವಾಗಿ ಟೀಂ ಇಂಡಿಯಾ ವಿಶ್ವಕಪ್​ ಎತ್ತಿ ಹಿಡಿಯಲು ಐದು ಕಾರಣಗಳಾವುವು ಎನ್ನುವುದನ್ನು ತಿಳಿದುಕೊಳ್ಳಿ.

Published on: Jun 30, 2024 12:20 PM