Loading video

ಹನಿ ಟ್ರ್ಯಾಪ್ ಪ್ರಕರಣದ ಸಾರ್ವಜನಿಕ ಚರ್ಚೆಯಿಂದ ಜನ ತುಂಬಾ ಬೇಸರಗೊಂಡಿದ್ದಾರೆ: ಡಾ ಹೆಚ್​ಡಿ ರಂಗನಾಥ್

|

Updated on: Mar 24, 2025 | 12:17 PM

ರಾಜಣ್ಣ ಮತ್ತು ತನ್ನ ನಡುವೆ ಸೌಹಾರ್ದಯುತ ಸಂಬಂಧ ಇಲ್ಲ ಅನ್ನೋದನ್ನು ಡಾ ರಂಗನಾಥ್ ಪರೋಕ್ಷವಾಗಿ ಒಪ್ಪಿಕೊಳ್ಳುತ್ತಾರೆ. ಅವರ ಜೊತೆ ತಾನು ಮೊದಲಿಂದಲೂ ಸಲುಗೆಯಿಂದ ಇದ್ದೇನೆ, ಅವರೊಂದಿಗೆ ಯಾವ ವೈಮನಸ್ಸನ್ನೂ ಇಟ್ಟುಕೊಂಡಿಲ್ಲ, ಅದರೆ ಅವರ ಮನಸ್ಸಲ್ಲಿ ಏನಿದೆಯೋ ಗೊತ್ತಿಲ್ಲ ಎಂದು ಹೇಳುವ ರಂಗನಾಥ್ ಸಚಿವನ ಮಗನಿಗೆ ತಾನು ಬೆದರಿಕೆ ಒಡ್ಡುವುದು ಸಾಧ್ಯವೇ ಇಲ್ಲ ಎನ್ನುತ್ತಾರೆ.

ಬೆಂಗಳೂರು, ಮಾರ್ಚ್ 24: ಕುಣಿಗಲ್ ಕಾಂಗ್ರೆಸ್ ಶಾಸಕ ಡಾ ಹೆಚ್​ಡಿ ರಂಗನಾಥ್ ಹನಿ ಟ್ರ್ಯಾಪ್ ಮತ್ತು ಸಚಿವ ಕೆಎನ್ ರಾಜಣ್ಣ (Dr KN Rajanna) ವಿಷಯವನ್ನು ಪ್ರಸ್ತಾಪಿಸಿದಾಗ ಭಾವಾವೇಷದಿಂದ ಮಾತಾಡಿದರು. ವೋಟು ಹಾಕಿ ನಮ್ಮನ್ನು ಗೆಲ್ಲಿಸಿದ ಜನಕ್ಕೆ ಅಪಚಾರ ಮಾಡುತ್ತಿರುವ ವಿಷಯ ಇದು, ಮತದಾರರು ಈ ವಿದ್ಯಮಾನಗಳಿಂದ ನೊಂದಿದ್ದಾರೆ ಮತ್ತು ಬೇಸರಗೊಂಡಿದ್ದಾರೆ, ಹನಿ ಟ್ರ್ಯಾಪ್ ನಂಥ ಘಟನೆ ನಡೆದಿದ್ದೇಯಾದರೆ, ಪಕ್ಷದ ಚೌಕಟ್ಟಿನಲ್ಲಿ ಅದನ್ನು ಚರ್ಚಿಸಬೇಕಿತ್ತು, ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಪ್ರಸ್ತಾಪಿಸಬೇಕಿತ್ತು ಎಂದು ರಂಗನಾಥ್ ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Honey-Trap : ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಕರ್ನಾಟಕದ ಹನಿಟ್ರ್ಯಾಪ್ ಪ್ರಕರಣ