ಬೆಂಗಳೂರು: ಟ್ರಾನ್ಸ್‌ಫಾರ್ಮರ್‌ನಲ್ಲಿ ಹತ್ತಿಕೊಂಡ ಬೆಂಕಿ ತಗುಲಿ ಸುಟ್ಟು ಕರಕಲಾದ ಐಷಾರಾಮಿ ಕಾರುಗಳು
ಟ್ರಾನ್ಸ್‌ಫಾರ್ಮರ್ ಸ್ಫೋಟಗೊಂಡು ಹತ್ತಿಕೊಂಡ ಬೆಂಕಿ ಪಕ್ಕದಲ್ಲೇ ನಿಲ್ಲಿಸಿದ್ದ ಮರ್ಸಿಡಿಸ್ ಬೆಂಜ್ ಸೇರಿದಂತೆ ಎರಡು ಕಾರುಗಳಿಗೆ ತಗುಲಿ ಹೊತ್ತಿ ಉರಿದ ಘಟನೆ ನಗರದ ಬಾಣಸವಾಡಿಯ ಸ್ಪೆನ್ಸರ್ ರಸ್ತೆಯಲ್ಲಿ ನಡೆದಿದೆ
ಬೆಂಗಳೂರು, ಆಗಸ್ಟ್ 4: ಟ್ರಾನ್ಸ್‌ಫಾರ್ಮರ್ ಸ್ಫೋಟಗೊಂಡು ಹತ್ತಿಕೊಂಡ ಬೆಂಕಿ ಪಕ್ಕದಲ್ಲೇ ನಿಲ್ಲಿಸಿದ್ದ ಮರ್ಸಿಡಿಸ್ ಬೆಂಜ್ ಸೇರಿದಂತೆ ಎರಡು ಕಾರುಗಳಿಗೆ ತಗುಲಿ ಹೊತ್ತಿ ಉರಿದ ಘಟನೆ ನಗರದ (Bengaluru) ಬಾಣಸವಾಡಿಯ ಸ್ಪೆನ್ಸರ್ ರಸ್ತೆಯಲ್ಲಿ ನಡೆದಿದೆ. ಘಟನೆ ಸಂದರ್ಭದಲ್ಲಿ ಕಾರಿನಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.
ರಸ್ತೆಯ ಮನೆಯೊಂದರ ಗೇಟಿನ ಬಳಿ ಎರಡು ಕಾರುಗಳಲ್ಲಿ ಒಂದು ಕಾರು ನಿಂತಿತ್ತು. ಟ್ರಾನ್ಸ್‌ಫಾರ್ಮರ್‌ಗೆ ಬೆಂಕಿ ಹೊತ್ತಿಕೊಳ್ಳುವ ಮುನ್ನವೇ ಬೆಂಜ್‌ನ ಚಾಲಕ ಆನ್ ರೋಡ್‌ನಲ್ಲಿ ನಿಲ್ಲಿಸಿ ಹತ್ತಿರದ ಮನೆಯಲ್ಲಿದ್ದ ತನ್ನ ಸಂಬಂಧಿಕರನ್ನು ಭೇಟಿಯಾಗಲು ಹೋಗಿದ್ದರು. ಮಹಾರಾಷ್ಟ್ರ ನೋಂದಣಿಯ ವಾಹನದ ಚಾಲಕ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಪುಣೆಯಿಂದ ಬೆಂಗಳೂರಿಗೆ ಬಂದಿದ್ದರು.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos