Dharmasthala Mask Man Arrested; ಸತ್ಯ ಎಷ್ಟೇ ಕಹಿಯಾದರೂ ಅದು ಸತ್ಯವೇ, ಸರ್ಕಾರಕ್ಕೆ ಅರ್ಥವಾಗಲಿಲ್ಲ: ಸೋಮಣ್ಣ
ಮುಸುಕುಧಾರಿ ವ್ಯಕ್ತಿ ಒಬ್ಬ ಫ್ರಾಡ್, ಅವನ ಯೋಗ್ಯತೆ ಏನು? ಅವನೊಬ್ಬ ಪೌರ ಕಾರ್ಮಿಕ ಮಾತ್ರ. ಅವನ ಮಾತಿಗೆ ಬೆಲೆ ನೀಡುವ ಅವಶ್ಯಕತೆ ಎಲ್ಲಿದೆ, ಅವನ ಇತಿಮಿತಿಯನ್ನು ಅರ್ಥಮಾಡಿಕೊಳ್ಳಿ ಅಂತ ನಾಲ್ಕು ಗೋಡೆಗಳ ನಡುವೆ ಹೇಳಿದರೂ ಸರ್ಕಾರ ಅದನ್ನು ಅರ್ಥಮಾಡಿಕೊಳ್ಳಲಿಲ್ಲ, ಅವನ ಮತ್ತು ಒಂದಷ್ಟು ಎಡಪಂಥೀಯರ ಮಾತನ್ನು ನಂಬಿಕೊಂಡು ಕಾರ್ಯಾಚರಣೆಗೆ ಮುಂದಾದ ರಾಜ್ಯ ಸರ್ಕಾರ 7 ಕೋಟಿ ಕನ್ನಡಿಗರ ಮನಸ್ಸು ನೋಯಿಸಿದೆ ಎಂದು ಸೋಮಣ್ಣ ಹೇಳಿದರು.
ತುಮಕೂರು, ಆಗಸ್ಟ್ 23: ನಗರದಲ್ಲಿ ಮಾಧ್ಯಮ ಗೋಷ್ಠಿಯೊಂದನ್ನು ಉದ್ದೇಶಿಸಿ ಮಾತಾಡಿದ ಕೇಂದ್ರ ಸಚಿವ ವಿ ಸೋಮಣ್ಣ, ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಅರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು (CM Siddaramaiah) ತರಾಟೆಗೆ ತೆಗೆದುಕೊಂಡರು. ಸತ್ಯ ಕಹಿಯಾಗಿದ್ದರೂ ಯಾವತ್ತಿಗೂ ಸತ್ಯವೇ, ಸುಳ್ಳುಗಳನ್ನು ನಂಬಿದ ರಾಜ್ಯ ಸರ್ಕಾರ ಧರ್ಮಸ್ಥಳದ ಪಾವಿತ್ರ್ಯತೆಯನ್ನು ಅರ್ಥಮಾಡಿಕೊಳ್ಳದೆ ತನಿಖೆಯ ಕೆಲಸಕ್ಕೆ ಮುಂದಾಯಿತು, ಧರ್ಮಸ್ಥಳದ ಭಕ್ತರು ಕೇವಲ ಕರ್ನಾಟಕದಲ್ಲಿ ಮಾತ್ರ ಅಲ್ಲ, ವಿಶ್ವದೆಲ್ಲೆಡೆ ಇದ್ದಾರೆ, ಅವರೆಲ್ಲರ ಧಾರ್ಮಿಕ ಭಾವನೆಗಳಿಗೆ ಸರ್ಕಾರ ಧಕ್ಕೆಯುಂಟು ಮಾಡಿದೆ, ಇದಕ್ಕೆ ನೇರ ಹೊಣೆಗಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ತಮ್ಮಿಂದಾಗಿರುವ ಅಚಾತುರ್ಯಕ್ಕೆ ಅವರು ಬೆಲೆ ತೆರಲಿದ್ದಾರೆ ಎಂದು ಸೋಮಣ್ಣ ಹೇಳಿದರು.
ಇದನ್ನೂ ಓದಿ: ಧರ್ಮಸ್ಥಳ ಕೇಸ್: ಮುಸುಕುಧಾರಿ ಚಿನ್ನಯ್ಯನ ಅಣ್ಣ ಎಸ್ಐಟಿ ವಶಕ್ಕೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ