AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗನ ಮದುವೆ ಸಂಭ್ರಮದಲ್ಲಿದ್ದ ಚಿನ್ನದ ವ್ಯಾಪಾರಿಗೆ ಬಿಗ್ ಶಾಕ್

ಮಗನ ಮದುವೆ ಸಂಭ್ರಮದಲ್ಲಿದ್ದ ಚಿನ್ನದ ವ್ಯಾಪಾರಿಗೆ ಬಿಗ್ ಶಾಕ್

ಜಗದೀಶ ಬಿ.
| Edited By: |

Updated on: Sep 03, 2026 | 12:13 PM

Share

ತುಮಕೂರಿನ ಚಿಕ್ಕಪೇಟೆಯಲ್ಲಿ ಚಿನ್ನದ ವ್ಯಾಪಾರಿ ಲಕ್ಷ್ಮಣ್ ಗಣಪತ್ ಪವಾರ್ ಅವರ ಮನೆಯಲ್ಲಿ 2.25 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಕಳ್ಳತನವಾಗಿದೆ. ಮಗನ ಮದುವೆಗಾಗಿ ಕುಟುಂಬ ಮಹಾರಾಷ್ಟ್ರಕ್ಕೆ ತೆರಳಿದ್ದಾಗ ಈ ಕೃತ್ಯ ನಡೆದಿದೆ. ಸುಮಾರು 785 ಗ್ರಾಂ ಚಿನ್ನ ಮತ್ತು 1.4 ಕೋಟಿ ರೂ. ಮೌಲ್ಯದ ಬೆಳ್ಳಿ ದೋಚಲಾಗಿದ್ದು, ಪರಿಚಿತರೇ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

ತುಮಕೂರು, ಸೆ.3: ಚಿಕ್ಕಪೇಟೆಯಲ್ಲಿ ಚಿನ್ನದ ವ್ಯಾಪಾರಿ ಲಕ್ಷ್ಮಣ್ ಗಣಪತ್ ಪವಾರ್ ಅವರ ಮನೆಯಲ್ಲಿ ಬರೋಬ್ಬರಿ 2.25 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಕಳ್ಳತನವಾಗಿದೆ. ಮಗನ ಮದುವೆ ಸಂಭ್ರಮದಲ್ಲಿದ್ದ ಕುಟುಂಬ ಮಹಾರಾಷ್ಟ್ರಕ್ಕೆ ತೆರಳಿದ್ದ ಸಂದರ್ಭದಲ್ಲಿ ಆಗಸ್ಟ್ 29 ಅಥವಾ 30ರಂದು ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಲಕ್ಷ್ಮಣ್ ಗಣಪತ್ ಪವಾರ್ ಅವರು ಮಹಾರಾಷ್ಟ್ರ ಮೂಲದವರಾಗಿದ್ದು, ಹಲವು ವರ್ಷಗಳಿಂದ ತುಮಕೂರಿನಲ್ಲಿ ಗೋಲ್ಡ್ ಟೆಸ್ಟಿಂಗ್ ಅಂಗಡಿ ನಡೆಸುತ್ತಿದ್ದಾರೆ. ತಮ್ಮ ಮಗನ ಮದುವೆಗಾಗಿ ಕುಟುಂಬ ಸಮೇತ ಮಹಾರಾಷ್ಟ್ರದ ಖಾನ್ಪುರಕ್ಕೆ ತೆರಳಿದ್ದ ವೇಳೆ ಖದೀಮರು ಮನೆಗೆ ನುಗ್ಗಿ ಸುಮಾರು 785 ಗ್ರಾಂ 24 ಕ್ಯಾರೆಟ್ ಚಿನ್ನದ ಬಿಸ್ಕೆಟ್‌ಗಳು ಮತ್ತು 1.4 ಕೋಟಿ ಮೌಲ್ಯದ ಬೆಳ್ಳಿಯನ್ನು ದೋಚಿದ್ದಾರೆ. ಚಿನ್ನಾಭರಣಗಳನ್ನು ಅಂಗಡಿಯಲ್ಲಿ ಇಡುವ ಬದಲು ಮನೆಯಲ್ಲಿ ಸುರಕ್ಷಿತವಾಗಿ ಇರಿಸಿದ್ದ ಬಗ್ಗೆ ಮಾಹಿತಿ ಇದ್ದವರು ಕೃತ್ಯ ಎಸಗಿರುವ ಸಾಧ್ಯತೆ ಇದ್ದು, ಪರಿಚಿತರ ಕೈವಾಡದ ಬಗ್ಗೆ ತುಮಕೂರು ನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Follow Us