AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಕ್ಷ ಲಕ್ಷ ಸಾಲ ಮಾಡಿ ತೀರಿಸಲಾಗದೆ 120 ಅಡಿ ಹೈಟೆನ್ಶನ್ ಟವರ್ ಏರಿದ ಭೂಪ! ಆಮೇಲೇನಾಯ್ತು? ಇಲ್ಲಿದೆ ನೋಡಿ

ಲಕ್ಷ ಲಕ್ಷ ಸಾಲ ಮಾಡಿ ತೀರಿಸಲಾಗದೆ 120 ಅಡಿ ಹೈಟೆನ್ಶನ್ ಟವರ್ ಏರಿದ ಭೂಪ! ಆಮೇಲೇನಾಯ್ತು? ಇಲ್ಲಿದೆ ನೋಡಿ

Jagadisha B
| Edited By: |

Updated on: Feb 26, 2026 | 11:00 AM

Share

ಲಕ್ಷ ಲಕ್ಷ ಸಾಲ ಮಾಡಿ ನಂತರ ಅದನ್ನು ತೀರಿಸಲಾಗಿದೆ 120 ಅಡಿ ಎತ್ತರದ ಹೈಟೆನ್ಶನ್ ವಿದ್ಯುತ್ ಟವರ್‌ ಏರಿ ವ್ಯಕ್ತಿಯೊಬ್ಬ ಹುಚ್ಚಾಟ ಮೆರೆದ ಘಟನೆ ತುಮಕೂರು ಜಿಲ್ಲೆಯ ಪಾವಗಡದ ಬಿಕೆಹಳ್ಳಿ–ದಳವೆಹಳ್ಳಿ ರಸ್ತೆಯ ಮಧ್ಯೆ ನಡೆದಿದೆ. ಅದೃಷ್ಟವಶಾತ್, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ವ್ಯಕ್ತಿಯ ಹುಚ್ಚಾಟ ಹಾಗೂ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಇಲ್ಲಿದೆ.

ತುಮಕೂರು, ಫೆಬ್ರವರಿ 26: ಲಕ್ಷಾಂತರ ರೂಪಾಯಿ ಕೈಸಾಲ ಮಾಡಿ ಮರುಪಾವತಿಸಲು ಆಗದೆ ಸಂಕಷ್ಟಕ್ಕೊಳಗಾದ ವ್ಯಕ್ತಿಯೊಬ್ಬ 400 ಕೆವಿ ಹೈಟೆನ್ಶನ್ ವಿದ್ಯುತ್ ಟವರ್ ಏರಿ ಹುಚ್ಚಾಟ ಮೆರೆದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಬಿಕೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಗೋಪಾಲ ಎಂಬಾತ ಬಿಕೆಹಳ್ಳಿ–ದಳವೆಹಳ್ಳಿ ರಸ್ತೆಯ ಮಧ್ಯೆ ಇರುವ ಸುಮಾರು 120 ಅಡಿ ಎತ್ತರದ ಹೈಟೆನ್ಶನ್ ಟವರ್‌ ಏರಿ ಕುಳಿತಿದ್ದಾನೆ. ಸಾಲದ ಒತ್ತಡದಿಂದ ಬೇಸತ್ತು ಈ ದುಸ್ಸಾಹಸಕ್ಕೆ ಕೈಹಾಕಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆ ಕುರಿತು ಮಾಹಿತಿ ತಿಳಿದ ತಿರುಮಣಿ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಗೋಪಾಲನನ್ನು ಸಮಾಧಾನಪಡಿಸುವ ಪ್ರಯತ್ನ ನಡೆಸಿದರು. ಹಲವು ಗಂಟೆಗಳ ಮಾತುಕತೆಯ ಬಳಿಕ ಗೋಪಾಲ ಸಮಾಧಾನಗೊಂಡರೂ, ಅಷ್ಟು ಎತ್ತರದಿಂದ ಸುರಕ್ಷಿತವಾಗಿ ಕೆಳಗಿಳಿಯುವುದು ಕಷ್ಟಕರವಾಗಿತ್ತು. ನಂತರ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಸಿಬ್ಬಂದಿ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಹಗ್ಗ, ಹಾರ್ನೆಸ್ ಬೆಲ್ಟ್, ಲ್ಯಾಡರ್ ಸೇರಿದಂತೆ ಅಗತ್ಯ ರಕ್ಷಣಾ ಉಪಕರಣಗಳನ್ನು ಬಳಸಿ ಎಚ್ಚರಿಕೆಯಿಂದ ಗೋಪಾಲನನ್ನು ಕೆಳಗಿಳಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us