ಶ್ರೀರಂಗಪಟ್ಟಣ ಬಳಿ ಎರಡು ಟಿಪ್ಪರ್ಗಳ ನಡುವೆ ಢಿಕ್ಕಿ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಇಲ್ಲ
ಅಪಘಾತ ನಡೆದ ಸ್ಥಳದಲ್ಲಿ ಒಬ್ಬ ಪೊಲೀಸ್ ಕಾನ್ಸಟೇಬಲ್ ಇದ್ದಾರೆ. ಪ್ರಕರಣವನ್ನು ಅವರು ದಾಖಲಿಸಿಕೊಂಡಿರಬಹುದು. ಪಕ್ಕದಿಂದ ಬರುತ್ತಿದ್ದ ಟಿಪ್ಪರ್ನ ಬ್ರೇಕ್ ಫೇಲ್ ಆಗಿರುವ ಸಾಧ್ಯತೆ ಇದೆ. ಚಾಲಕನಿಗೆ ಮುಖ್ಯರಸ್ತೆಯಲ್ಲಿ ಟಿಪ್ಪರ್ನಂಥ ದೊಡ್ಡ ವಾಹನ ಬರ್ತಾ ಇದ್ದಿದ್ದು ಕಂಡರೂ ತನ್ನ ವಾಹನವನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಎರಡೂ ಟಿಪ್ಪರ್ಗಳ ಚಾಲಕರಿಗೆ ಸಣ್ಣಪುಟ್ಟ ಗಾಯಗಳು ಮಾತ್ರ ಆಗಿವೆ.
ಮಂಡ್ಯ, ಜೂನ್ 7: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಟಿಎಂ ಹೊಸೂರು ಬಳಿ ಇಂದು ಬೆಳಗ್ಗೆ ಅಪಘಾತವೊಂದು ನಡೆದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ (no casualties) ಆಗಿಲ್ಲ. ಮೈಸೂರು-ಬೆಂಗಳೂರು ಹೆದ್ದಾರಿಯ ಸರ್ವೀಸ್ ರೋಡಲ್ಲಿ ಎರಡು ಟಿಪ್ಪರ್ಗಳ ನಡುವೆ ನಡೆದ ಅಪಘಾತ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೇರವಾಗಿ ಬರುತ್ತಿದ್ದ ಟಿಪ್ಪರೊಂದಕ್ಕೆ ಬಲಭಾಗದ ರಸ್ತೆಯಿಂದ ಬರುತ್ತಿದ್ದ ಮತ್ತೊಂದು ಟಿಪ್ಪರ್ ಢಿಕ್ಕಿ ಹೊಡೆದ ಕಾರಣ ಎರಡು ವಾಹನಗಳಲ್ಲಿ ಒಂದು ಪಕ್ಕದಲ್ಲಿದ್ದ ಹೋಟೆಲ್ ಕಡೆ ನುಗ್ಗಿದೆ. ಹೋಟೆಲ್ನಲ್ಲಿ ಬಹಳ ಜನ ಇದ್ದಾಗ್ಯೂ ಯಾರೂ ಗಾಯಗೊಂಡಿಲ್ಲ.
ಇದನ್ನೂ ಓದಿ: Tumkur Accident: ತುಮಕೂರು ಹಿರೇಹಳ್ಳಿ ಬಳಿ ಭೀಕರ ಅಪಘಾತ, ಕಂಟೇನರ್ ಲಾರಿಗೆ ಬೈಕ್ ಡಿಕ್ಕಿಯಾಗಿ ಮೂವರು ಸಾವು
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ

ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ

ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ

ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
