PM Modi in Udupi: ಉಡುಪಿಯಲ್ಲಿ ಮೋದಿ ರೋಡ್ ಶೋ, ಪ್ರಧಾನಿಯ ಅದ್ಭುತ ಭಾವಚಿತ್ರ ರಚಿಸಿ ತಂದ ವಿದ್ಯಾರ್ಥಿ
ಉಡುಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಸಾವಿರಾರು ಅಭಿಮಾನಿಗಳಿಂದ ಭರ್ಜರಿ ಸ್ವಾಗತ ದೊರೆತಿದೆ. ಈ ಸಂದರ್ಭದಲ್ಲಿ, ಎಸ್.ಆರ್. ಪಿಯು ಕಾಲೇಜಿನ ಹೆಬ್ರಿ ವಿದ್ಯಾರ್ಥಿ ಪರೀಕ್ಷಿತ್ ಆಚಾರ್ ವಿಶೇಷ ರೀತಿಯಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಪರೀಕ್ಷಿತ್ ಅವರು ತಮ್ಮ ಕೈಯಾರೆ ಪ್ರಧಾನಿ ಮೋದಿ ಮತ್ತು ಅವರ ತಾಯಿಯವರ ಸುಂದರ ಭಾವಚಿತ್ರವನ್ನು ರಚಿಸಿ ತಂದಿದ್ದಾರೆ.
ಉಡುಪಿ, ನವೆಂಬರ್ 28: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಪಿಯಲ್ಲಿ ಭರ್ಜರಿ ಸ್ವಾಗತ ದೊರೆತಿದೆ. ಈ ಸಂದರ್ಭದಲ್ಲಿ, ಎಸ್.ಆರ್. ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಹೆಬ್ರಿಯ ವಿದ್ಯಾರ್ಥಿ ಪರೀಕ್ಷಿತ್ ಆಚಾರ್ ವಿಶೇಷ ರೀತಿಯಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಪರೀಕ್ಷಿತ್ ಅವರು ತಮ್ಮ ಕೈಯಾರೆ ಪ್ರಧಾನಿ ಮೋದಿ ಮತ್ತು ಅವರ ತಾಯಿಯವರ ಸುಂದರ ಭಾವಚಿತ್ರವನ್ನು ರಚಿಸಿ ತಂದಿದ್ದಾರೆ. ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಪರೀಕ್ಷಿತ್, ಈ ಪೇಂಟಿಂಗ್ ಅನ್ನು ಪೂರ್ಣಗೊಳಿಸಲು ಸುಮಾರು ಎಂಟು ಗಂಟೆಗಳ ಕಾಲ ತೆಗೆದುಕೊಂಡಿದ್ದಾರೆ. ಅಕ್ರಿಲಿಕ್ ಪೇಂಟ್ ಮತ್ತು ಕ್ಯಾನ್ವಾಸ್ ಬೋರ್ಡ್ ಬಳಸಿ ಇದನ್ನು ತಯಾರಿಸಲಾಗಿದೆ. ಮೋದಿ ರೋಡ್‌ಶೋ ಸಾಗುವ ದಾರಿಯಲ್ಲಿ ಈ ಭಾವಚಿತ್ರವನ್ನು ಪ್ರದರ್ಶಿಸಲು ಪರೀಕ್ಷಿತ್ ಸಿದ್ಧರಾಗಿದ್ದಾರೆ. ಪ್ರಧಾನಿಯವರು ಈ ಕಲಾಕೃತಿಯನ್ನು ನೋಡಿ, ಅದನ್ನು ಸ್ವೀಕರಿಸಬಹುದು ಎಂಬ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಸ್ಕೈ ಗೋಲ್ಡ್ ಅಂಡ್ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್ನಲ್ಲಿ ಚಿನ್ನದಂಗಡಿ ದರೋಡೆ
ಮನ್ ಕಿ ಬಾತ್ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
