Union Budget 2025: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಐತಿಹಾಸಿಕ ಬಜೆಟ್ ಮಂಡಿಸಿದ್ದಾರೆ: ಪ್ರಲ್ಹಾದ ಜೋಶಿ, ಸಚಿವ

Updated on: Feb 01, 2025 | 7:59 PM

Union Budget 2025: ಎಂಎಸ್​ಎಂಇ ಗಳ ಕ್ರೆಡಿಟ್ ವ್ಯಾಪ್ತಿಯನ್ನು ಹೆಚ್ಚು ಮಾಡಿರುವುದು ಅವುಗಳ ಸ್ಕೋಪ್ ಹೆಚ್ಚಿಸಲಿದೆ ಎಂದ ಸಚಿವ ಪ್ರಲ್ಹಾದ್ ಜೋಶಿ, ಸ್ಟಾರ್ಟ್​​​ ಅಪ್ ಕಂಪನಿಗಳಿಗೆ ಫಂಡ್ ಆಫ್ ಫಂಡ್ಸ್ ಅಂತ ₹ 10,000 ಕೋಟಿಯನ್ನು ತೆಗೆದಿರಿಸಿರುವುದು ಯುವಕರಿಗೆ ಹೆಚ್ಚು ಪ್ರಯೋಜನವಾಗಲಿದೆ, ಮತ್ತು ಫುಡ್ ಡೆಲಿವರಿ ಬಾಯ್​​ಗಳಾಗಿ ಕೆಲಸ ಮಾಡುವವರಿಗೆ ಆರೋಗ್ಯ ವಿಮೆಯ ಸವಲತ್ತು ವಿಸ್ತರಿಸಿರುವುದು ಅಭಿನಂದನೀಯ ಎಂದರು.

ದೆಹಲಿ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿಯನ್ನು ನಡೆಸಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಿದ ಬಜೆಟ್ 2025 ಅನ್ನು ಶ್ಲಾಘಿಸಿದರು. ನಿರ್ಮಲಾ ಸೀತಾರಾಮನ್ ಅವರು ಐತಿಹಾಸಿಕ ಬಜೆಟ್ ಮಂಡಿಸಿದ್ದಾರೆ, ಸತತವಾಗಿ 8 ಬಜೆಟ್ ಗಳನ್ನು ಮಂಡಿಸಿದ ಪ್ರಥಮ ಹಣಕಾಸು ಸಚಿವರೆಂಬ ಖ್ಯಾತಿ ಅವರದ್ದು ಎಂದು ಜೋಶಿ ಹೇಳಿದರು. ವಾರ್ಷಿಕ ಆದಾಯ ₹ 12 ಲಕ್ಷ ಇರುವವರನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸದಿರುವುದು ಬಜೆಟ್ ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಎಂದ ಜೋಶಿ, ರೈತರು, ಕೂಲಿ ಕಾರ್ಮಿಕರು, ಸಣ್ಣ ಉದ್ದಿಮೆದಾರರು, ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಮುಂತಾದ ಸಮಾಜದ ಎಲ್ಲ ವರ್ಗಗಳನ್ನು ಒಳಗೊಳ್ಳುವ ಬಜೆಟ್ ಅನ್ನು ಸಚಿವೆ ಮಂಡಿಸಿದ್ದಾರೆ ಅಂತ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Union Budget 2025: ಬಜೆಟ್ ಪ್ರಕಾರ ಗ್ರಾಹಕರಿಗೆ ಯಾವುದು ದುಬಾರಿಯಾಗಲಿದೆ?

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More