ಒಕ್ಕೂಟ ವ್ಯವಸ್ಥೆಯಲ್ಲಿ ವಿಶ್ವಾಸವಿರುವ ಕೇಂದ್ರವು ಕರ್ನಾಟಕಕ್ಕೆ ಎಲ್ಲ ಯೋಜನೆಗಳನ್ನು ನೀಡುತ್ತಿದೆ: ಶಿವರಾಜ್ ಸಿಂಗ್ ಚೌಹಾನ್
ರಾಜ್ಯದ ಜಿಲ್ಲಾ ಮತ್ತು ತಾಲೂಕು ಪಂಚಾಯತಿಗಳಿಗೆ ನಡೆಯಲಿರುವ ಚುನಾವಣೆಗಳಿಗೆ ರಾಜ್ಯಕ್ಕೆ ಶಿವರಾಜ್ ಸಿಂಗ್ ಚೌಹಾನ್ ಅವರೇ ಉಸ್ತವಾರಿ ಆಗಿದ್ದಾರೆ. ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರನ್ನು ಬದಲಾಯಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಚೌಹಾನ್, ನಮ್ಮಲ್ಲಿ ಎಲ್ಲಾದಕ್ಕೂ ಚುನಾವಣೆಯ ಮೂಲಕವೇ ಅಯ್ಕೆ ಮಾಡಲಾಗುತ್ತದೆ, ಪ್ರದೇಶ ಅಧ್ಯಕ್ಷರ ಚುನಾವಣೆಗೂ ಪ್ರಕ್ರಿಯೆ ಶುರುವಾಗಲಿದೆ ಎಂದರು.
ಬೆಂಗಳೂರು: ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾನ್, ಕೇಂದ್ರದ ಯೋಜನೆಗಳನ್ನು ಕರ್ನಾಟಕಕ್ಕೆ ನೀಡುವಲ್ಲಿ ಕೇಂದ್ರ ಸರ್ಕಾರ ಯಾವುದೇ ತಾರತಮ್ಯವೆಸಗುತ್ತಿಲ್ಲ, ಕರ್ನಾಟಕ ಸರ್ಕಾರ ಮನವಿ ಮಾಡದಿದ್ದಾಗ್ಯೂ ತಾನು ಹಲವು ಯೋಜನೆಗಳನ್ನು ತೆಗೆದುಕೊಂಡು ಬಂದಿದ್ದೇನೆ ಎಂದು ಹೇಳಿದರು. ಕರ್ನಾಟಕ ಸರ್ಕಾರಕ್ಕೆ ಆರೋಪಗಳನ್ನು ಮಾಡುವ ಕಡೆ ಜಾಸ್ತಿ ಒಲವು ಇದ್ದಂತಿದೆ ಆದರೆ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳ ಅನುದಾನವನ್ನು ಇಲ್ಲಿನ ಸರ್ಕಾರ ಬಳಸಿಯೇ ಇಲ್ಲ, ಕೇಂದ್ರ ಸರ್ಕಾರವು ಭದ್ರ ಒಕ್ಕೂಟ ವ್ಯವಸ್ಥೆ ಅಡಿ ಕೆಲಸ ಮಾಡುತ್ತದೆ, ಕರ್ನಾಟಕಕ್ಕೆ ನಷ್ಟ ಅಥವಾ ಕೊರತೆ ಎದುರಾಗಬಾರದೆನ್ನುವ ದೃಷ್ಟಿಯಿಂದ ಹಲವಾರು ಯೋಜನೆಗಳನ್ನು ನೀಡಿದೆ ಎಂದು ಚೌಹಾನ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಿರುವ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾನ್ರನ್ನು ಭೇಟಿಯಾದ ರಾಜ್ಯದ ಸಚಿವರು