ಉಡುಪಿಯ ಕಡಲ ತೀರದಲ್ಲಿ ವಿಶಿಷ್ಟ ಗಣಪ| ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ

ಉಡುಪಿಯ ಕಡಲ ತೀರದಲ್ಲಿ ವಿಶಿಷ್ಟ ಗಣಪ| ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ

ಕಿರಣ್ ಹನುಮಂತ್​ ಮಾದಾರ್
|

Updated on: Sep 07, 2024 | 5:46 PM

ನಾಡಿನೆಲ್ಲೆಡೆ ಗಣೇಶ ಚತುರ್ಥಿ ಜೋರಾಗಿ ನಡೆಯುತ್ತಿದೆ. ಅದರಂತೆ ಉಡುಪಿಯ ಕಾಪು ಕಡಲ ತೀರದ ಮರಳಿನಲ್ಲಿ ವಿಶಿಷ್ಟ ಗಣಪನನ್ನು ಕೆತ್ತಲಾಗಿದೆ. ಇತ್ತ ಕೋಲಾರದ ಲಕ್ಷ್ಮೀ ಸಂಕಷ್ಟಹರ ಗಣಪತಿ ದೇವಾಲಯದಲ್ಲಿ ಕರಿಗಡಬುನಲ್ಲಿ ಗಣೇಶ ಅರಳಿದ್ದು, ಗಣೇಶನನ್ನು ನೋಡಲು ಭಕ್ತರ ದಂಡು ಹರಿದು ಬರುತ್ತಿದೆ. 

ಉಡುಪಿ, ಸೆ.07: ನಾಡಿನೆಲ್ಲೆಡೆ ಗಣೇಶ ಚತುರ್ಥಿ ಜೋರಾಗಿ ನಡೆಯುತ್ತಿದೆ. ಅದರಂತೆ ಉಡುಪಿಯ ಕಾಪು ಕಡಲ ತೀರದ ಮರಳಿನಲ್ಲಿ ವಿಶಿಷ್ಟ ಗಣಪನನ್ನು ಕೆತ್ತಲಾಗಿದೆ. ಹೌದು, ಜಿಲ್ಲೆಯ ಕಾಪು ತಾಲೂಕಿನ ಕಲಾವಿದ ಹರೀಶ್ ಸಾಗ ತಂಡದಿಂದ ರಚನೆಯಾದ ಈ ಮರಳು ಶಿಲ್ಪ, ಗಜಾನನಂ ಎಂಬ ಥೀಂ ನೊಂದಿಗೆ ಶಿಲ್ಪ ರಚನೆ ಮಾಡಲಾಗಿದೆ. ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಅಪರೂಪದ ಶಿಲ್ಪ ಇದಾಗಿದೆ. ಹಲವು ಗಂಟೆಗಳ ಪರಿಶ್ರಮದಿಂದ ತಯಾರಾಗಿದ ಈ ಮರಳು ಶಿಲ್ಪ, ಸುಖಾಸೀನ ಭಂಗಿಯಲ್ಲಿ ಗಣಪ ಪವಡಿಸಿದ್ದಾನೆ.

ಇತ್ತ ಕೋಲಾರದ ಲಕ್ಷ್ಮೀ ಸಂಕಷ್ಟಹರ ಗಣಪತಿ ದೇವಾಲಯದಲ್ಲಿ ಕರಿಗಡಬುನಲ್ಲಿ ಗಣೇಶ ಅರಳಿದ್ದಾನೆ. ಮನಸ್ಸಿನ ಇಷ್ಟಾರ್ಥ ಈಡೇರಿಕೆಗೆ 10,001 ಕರಿಗಡುಬು ಬಳಸಿ‌ ಗಣೇಶನನ್ನು ತಯಾರಿಸಲಾಗಿದೆ. ಸುಮಾರು 15 ಅಡಿ ಎತ್ತರದ ಕರಿಗಡಬು ಗಣೇಶ ಇದಾಗಿದ್ದು, ಗಣೇಶನನ್ನು ನೋಡಲು ಭಕ್ತರ ದಂಡು ಹರಿದು ಬರುತ್ತಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ