ಪ್ರಭಾವಿ ಕೈ ನಾಯಕ ಫರ್ಮಾನ್: ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಯುಟರ್ನ್!
ಅತ್ಯಾಚಾರ ಕೇಸ್ ನಲ್ಲಿ ಸಜಾ ಕೈದಿ ಪ್ರಜ್ವಲ್ ರೇವಣ್ಣನನ್ನ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡೋಕೆ ಮುಂದಾಗಿದ್ದ ಪೊಲೀಸರಿಗೆ ಕೊನೆ ಕ್ಷಣದಲ್ಲಿ ಬ್ರೇಕ್ ಬಿದ್ದಿದೆ. ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಪ್ರಜ್ವಲ್ ರೇವಣ್ಣನನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲು CAR ಪೊಲೀಸರು ಸಿದ್ಧತೆ ನಡೆಸಿದ್ದರು. ಅದರಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಕರೆದುಕೊಂಡು ಹೋಗಿದ್ದ CAR ಎಸ್ಕಾರ್ಟ್ ಸಿಬ್ಬಂದಿ, ಮಾರ್ಗಮಧ್ಯದಲ್ಲೇ ವಾಪಸ್ ಕರೆದುಕೊಂಡು ಬಂದಿದ್ದಾರೆ
ಬೆಂಗಳೂರು, ಅಕ್ಟೋಬರ್ 12): ಅತ್ಯಾಚಾರ ಕೇಸ್ ನಲ್ಲಿ ಸಜಾ ಕೈದಿ ಪ್ರಜ್ವಲ್ ರೇವಣ್ಣನನ್ನ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡೋಕೆ ಮುಂದಾಗಿದ್ದ ಪೊಲೀಸರಿಗೆ ಕೊನೆ ಕ್ಷಣದಲ್ಲಿ ಬ್ರೇಕ್ ಬಿದ್ದಿದೆ. ಹೌದು… ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಪ್ರಜ್ವಲ್ ರೇವಣ್ಣನನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲು CAR ಪೊಲೀಸರು ಸಿದ್ಧತೆ ನಡೆಸಿದ್ದರು. ಅದರಂತೆ ಪರಪ್ಪನ ಅಗ್ರಹಾರ ಜೈಲಿನಿಂದ ಪ್ರಜ್ವಲ್ ರೇವಣ್ಣನನ್ನ ಕರೆದುಕೊಂಡು ಹೊರಟಿದ್ದ ಎಸ್ಕಾರ್ಟ್ ಸಿಬ್ಬಂದಿ, ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಪ್ರಯಾಣಿಸಿದ್ದರು.. ಆದರೆ ಮಾರ್ಗಮಧ್ಯೆ ಹಿರಿಯ ಅಧಿಕಾರಿಯಿಂದ ಬಂದ ದೂರವಾಣಿ ಕರೆಯ ಬೆನ್ನಲ್ಲೇ ಪ್ರಯಾಣಕ್ಕೆ ಬ್ರೇಕ್ ಬಿದ್ದಿದೆ.
ಶನಿವಾರ ಸಂಜೆ ಪ್ರಜ್ವಲ್ ರೇವಣ್ಣನನ್ನ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ವಾಪಸ್ ಕರೆತರಲಾಗಿದೆ. ಶಿರಾ ಮಾರ್ಗ ವಾಗಿ ತೆರಳುವ ಮಾರ್ಗ ಮಧ್ಯೆಯೇ ಹಿರಿಯ ಪೊಲೀಸ್ ಅಧಿಕಾರಿಗೆ ಕರೆ ಮಾಡಿದ್ದ ಪ್ರಭಾವಿ ನಾಯಕ ಮೌಖಿಕ ಆದೇಶ ನೀಡಿ, ವಾಪಾಸ್ ಕರೆತರುವಂತೆ ಹೇಳಿದ್ದಾರೆ.ಪ್ರಜ್ವಲ್ ಬೆಳಗಾವಿ ಹಿಂಡಲಗಾ ಜೈಲು ಪಾಲಾದ್ರೆ ಮತ್ತೆ ರಾಜಕೀಯ ಮೇಲಾಟ ಶುರುವಾಗುವ ಮುಂದಾಲೋಚನೆ ಅರಿತು ವಾಪಾಸ್ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಿಸಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಪ್ರಜ್ವಲ್ ರೇವಣ್ಣನನ್ನ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡದಿರಲು ಕಾರಣವೇನು..? ರಾಜಕೀಯ ಕಾರಣವೇ? ಭದ್ರತೆ ಸಮಸ್ಯೆಯಾ..? ಅಥವಾ ಕೋರ್ಟ್ ವಿಚಾರಣೆಯ ಅನಿವಾರ್ಯತೆಯಾ..? ಇಲ್ಲಿದೆ ಡಿಟೇಲ್ಸ್.

