ಸಿಎಂ ಸಿದ್ದರಾಮಯ್ಯಗೆ ಸವಾಲ್​​ ಹಾಕಿದ ಕೇಂದ್ರ ಸಚಿವ ಸೋಮಣ್ಣ: ಕಾರಣ ಇಲ್ಲಿದೆ

Edited By:

Updated on: Apr 04, 2026 | 4:33 PM

ಕೇಂದ್ರ ಸಚಿವ ವಿ.ಸೋಮಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕುರಿತು ಸವಾಲು ಹಾಕಿದ್ದಾರೆ. ಕೆಲಸವಿಲ್ಲದ ಮಂತ್ರಿ ಎಂದು ತಮ್ಮನ್ನು ಟೀಕಿಸಿರೋದಕ್ಕೆ ತಿರುಗೇಟು ನೀಡಿರುವ ಸೋಮಣ್ಣ, ಚುನಾವಣೆ ಬಳಿಕ ತಮ್ಮ ಕಚೇರಿಗೆ ಒಂದು ಗಂಟೆ ಬಂದು ಹೋಗುವಂತೆ ಆಹ್ವಾನಿಸಿದ್ದಾರೆ. ಯಾರು ಕೆಲಸ ಇಲ್ಲದ ಮಂತ್ರಿ ಎಂದು ಇದರಿಂದ ತಿಳಿಯುತ್ತದೆ ಎಂದು ಹೇಳುವ ಮೂಲಕ ಕೌಂಟರ್​​ ಕೊಟ್ಟಿದ್ದಾರೆ.

ದಾವಣಗೆರೆ, ಏಪ್ರಿಲ್​​ 04: ಕೆಲಸವಿಲ್ಲದ ಮಂತ್ರಿ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಮೇಲೆ ಮಾಡಿದ್ದ ಆರೋಪಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಕೌಂಟರ್​​ ನೀಡಿದ್ದಾರೆ. ಚುನಾವಣೆ ಮುಗಿದ ಮೇಲೆ ಸಿದ್ದರಾಮಯ್ಯನವರು ಬಂದು ನಮ್ಮ ಕಚೇರಿಯಲ್ಲಿ 1 ಗಂಟೆ ಇರಲಿ. ನಾನು ಅವರ ಕಚೇರಿಯಲ್ಲಿ ಒಂದು ತಿಂಗಳು ಇರುತ್ತೇನೆ. ಸಿದ್ದರಾಮಯ್ಯನವರು ಹಳೆಯ ಕಾಲದಲ್ಲಿದ್ದಾರೆ ಎಂದು ಟೀಕಿಸಿದ ಸೋಮಣ್ಣ, ತಾಂತ್ರಿಕ ವ್ಯವಸ್ಥೆ ಬಹಳಷ್ಟು ಮುಂದುವರಿದಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ಮಾತನಾಡುವಾಗ ಅಂಕಿಅಂಶಗಳೊಂದಿಗೆ, ಗಾಂಭೀರ್ಯದಿಂದ ಮಾತನಾಡಬೇಕು ಎಂದಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Loading...
Unable to load recommendations.
Follow Us
ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More