AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ

ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ

ಝಾಹಿರ್ ಯೂಸುಫ್
|

Updated on:Dec 14, 2025 | 12:31 PM

Share

Vaibhav Suryavanshi: ಯುಎಇ ವಿರುದ್ಧದ ಕಳೆದ ಪಂದ್ಯದಲ್ಲಿ 171 ರನ್ ಬಾರಿಸಿದ್ದ ವೈಭವ್ ಸೂರ್ಯವಂಶಿಯನ್ನು ಸಯ್ಯಮ್ ಕೇವಲ 5 ರನ್​​ಗೆ ಔಟ್ ಮಾಡಿದ್ದಾರೆ. 6 ಎಸೆತಗಳನ್ನು ಎದುರಿಸಿದ ವೈಭವ್ ಸುಲಭ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದ್ದಾರೆ. ಇದಕ್ಕೂ ಮುನ್ನ  ನಡೆದ ಎಮರ್ಜಿಂಗ್ ಏಷ್ಯಾಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧ ವೈಭವ್ 45 ರನ್​ ಮಾತ್ರ ಕಲೆಹಾಕಿದ್ದರು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲನುಭವಿಸಿತ್ತು.

ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆಯುತ್ತಿರುವ ಅಂಡರ್-19 ಏಷ್ಯಾಕಪ್ ಏಕದಿನ ಟೂರ್ನಿಯ 5ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ಬೌಲಿಂಗ್ ಆಯ್ದುಕೊಂಡಿದೆ. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾಗೆ ಆರಂಭಿಕ ಆಘಾತ ನೀಡುವಲ್ಲಿ ಪಾಕ್ ಬೌಲರ್ ಮೊಹಮ್ಮದ್ ಸಯ್ಯಮ್ ಯಶಸ್ವಿಯಾಗಿದ್ದಾರೆ.

ಯುಎಇ ವಿರುದ್ಧದ ಕಳೆದ ಪಂದ್ಯದಲ್ಲಿ 171 ರನ್ ಬಾರಿಸಿದ್ದ ವೈಭವ್ ಸೂರ್ಯವಂಶಿಯನ್ನು ಸಯ್ಯಮ್ ಕೇವಲ 5 ರನ್​​ಗೆ ಔಟ್ ಮಾಡಿದ್ದಾರೆ. 6 ಎಸೆತಗಳನ್ನು ಎದುರಿಸಿದ ವೈಭವ್ ಸುಲಭ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದ್ದಾರೆ. ಇದಕ್ಕೂ ಮುನ್ನ  ನಡೆದ ಎಮರ್ಜಿಂಗ್ ಏಷ್ಯಾಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧ ವೈಭವ್ 45 ರನ್​ ಮಾತ್ರ ಕಲೆಹಾಕಿದ್ದರು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲನುಭವಿಸಿತ್ತು.

ಇದೀಗ ಮತ್ತೊಮ್ಮೆ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಬೃಹತ್ ಇನಿಂಗ್ಸ್ ಆಡುವಲ್ಲಿ ವೈಭವ್ ಸೂರ್ಯವಂಶಿ ವಿಫಲರಾಗಿದ್ದಾರೆ. ವೈಭವ್ ಅವರ ವೈಫಲ್ಯದ ಹೊರತಾಗಿಯೂ ನಾಯಕ ಆಯುಷ್ ಮ್ಹಾತ್ರೆ 25 ಎಸೆತಗಳಲ್ಲಿ 38 ರನ್ ಬಾರಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ 13 ಓವರ್​ಗಳ ಮುಕ್ತಾಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 50 ರನ್ ಕಲೆಹಾಕಿದೆ.

ಭಾರತ ಅಂಡರ್-19 ಪ್ಲೇಯಿಂಗ್ 11: ಆಯುಷ್ ಮ್ಹಾತ್ರೆ (ನಾಯಕ) ,ವೈಭವ್ ಸೂರ್ಯವಂಶಿ , ಆರನ್ ಜಾರ್ಜ್ ,
ವಿಹಾನ್ ಮಲ್ಹೋತ್ರಾ , ವೇದಾಂತ್ ತ್ರಿವೇದಿ , ಅಭಿಗ್ಯಾನ್ ಕುಂದು (ವಿಕೆಟ್ ಕೀಪರ್) , ಕನಿಷ್ಕ್ ಚೌಹಾಣ್ , ಖಿಲನ್ ಪಟೇಲ್ , ದೀಪೇಶ್ ದೇವೇಂದ್ರನ್ , ಕಿಶನ್ ಕುಮಾರ್ ಸಿಂಗ್ , ಹೆನಿಲ್ ಪಟೇಲ್.

ಪಾಕಿಸ್ತಾನ್ ಅಂಡರ್-19 ಪ್ಲೇಯಿಂಗ್ 11: ಉಸ್ಮಾನ್ ಖಾನ್ , ಸಮೀರ್ ಮಿನ್​ಹಾಸ್,  ಅಲಿ ಹಸನ್ ಬಲೂಚ್ , ಅಹ್ಮದ್ ಹುಸೇನ್ , ಫರ್ಹಾನ್ ಯೂಸುಫ್ (ನಾಯಕ) , ಹಮ್ಝ ಜಹೂರ್ (ವಿಕೆಟ್ ಕೀಪರ್) , ಹುಜೈಫಾ ಅಹ್ಸಾನ್ , ನಿಖಾಬ್ ಶಫೀಕ್ , ಅಬ್ದುಲ್ ಸುಭಾನ್ , ಮೊಹಮ್ಮದ್ ಸಯ್ಯಮ್ , ಅಲಿ ರಾಝ.

Published on: Dec 14, 2025 12:31 PM