ವಿಷ್ಣುವರ್ಧನ್ ಸಮಾಧಿ ಉಳಿವಿಗೆ ಪ್ರಯತ್ನಿಸಿದ ಸ್ಟಾರ್ ನಟರು ಯಾರು?
‘ಸಾಹಸ ಸಿಂಹ’ ವಿಷ್ಣುವರ್ಧನ್ ಅವರ ಸಮಾಧಿ ಇತ್ತೀಚೆಗೆ ನೆಲಸಮ ಆಯಿತು. ಆದರೆ ಆ ಜಾಗವನ್ನು ಉಳಿಸಿಕೊಳ್ಳಲು ಹಲವು ವರ್ಷಗಳಿಂದ ಹೋರಾಟ ನಡೆಯುತ್ತಲೇ ಬಂದಿದೆ. ಕನ್ನಡ ಚಿತ್ರರಂಗದ ಕೆಲವು ನಟರು ಈ ಬಗ್ಗೆ ಆಸಕ್ತಿ ತೋರಿಸಿದ್ದಾರೆ. ಆ ಕುರಿತು ವೀರಕಪುತ್ರ ಶ್ರೀನಿವಾಸ್ ಅವರು ಮಾತನಾಡಿದ್ದಾರೆ.
‘ಸಾಹಸ ಸಿಂಹ’ ವಿಷ್ಣುವರ್ಧನ್ (Vishnuvardhan) ಅವರ ಸಮಾಧಿ ನೆಲಸಮ ಆಗಿದೆ. ಆದರೆ ಆ ಜಾಗವನ್ನು ಉಳಿಸಿಕೊಳ್ಳಲು ಹಲವು ವರ್ಷಗಳಿಂದ ಹೋರಾಟ ನಡೆಯುತ್ತಲೇ ಬಂದಿದೆ. ಕನ್ನಡ ಚಿತ್ರರಂಗದ ಕೆಲವು ನಟರು ಈ ಬಗ್ಗೆ ಆಸಕ್ತಿ ತೋರಿಸಿದ್ದಾರೆ. ಆ ಕುರಿತು ವೀರಕಪುತ್ರ ಶ್ರೀನಿವಾಸ್ (Veerakaputra Srinivas) ಅವರು ಮಾತನಾಡಿದ್ದಾರೆ. ‘ಕಿಚ್ಚ ಸುದೀಪ್ (Kichcha Sudeep) ಮಾತ್ರವಲ್ಲದೇ ಯಶ್, ಡಾಲಿ ಧನಂಜಯ, ವಸಿಷ್ಠ ಸಿಂಹ ಅವರು ನಮ್ಮ ಜೊತೆ ಚರ್ಚೆ ಮಾಡಿದ್ದರು. ದರ್ಶನ್ ಟ್ವೀಟ್ ಮಾಡಿ ಬೆಂಬಲ ನೀಡಿದ್ದರು’ ಎಂದಿದ್ದಾರೆ ವೀರಕಪುತ್ರ ಶ್ರೀನಿವಾಸ್. ಚಿತ್ರರಂಗದ ನಿಯೋಗ ಈ ಬಗ್ಗೆ ಒಟ್ಟಾಗಿ ಧ್ವನಿ ಎತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
