ವಿಜಯಪುರದ ಯುವ ರೈತ ಸತತವಾಗಿ 61 ಗಂಟೆಗಳ ಕಾಲ ಟ್ರ್ಯಾಕ್ಟರ್ ಮೂಲಕ ರಂಟೆ ಹೊಡೆದು ಅಪರೂಪದ ಸಾಧನೆ ಮಾಡಿದರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 27, 2022 | 11:21 PM

ಹೊಳೆಬಸ್ಸಪ್ಪ ಅವರು, 61 ಗಂಟೆಗಳ ಕಾಲ ಸತತವಾಗಿ ರಂಟೆ ಹೊಡೆದಿದ್ದಾರೆ. ರಂಟೆ ಹೊಡೆಯುವ ಕೆಲಸವನ್ನು ಅವರು ಜನೆವರಿ 24, ಬೆಳಗ್ಗೆ 6 ಗಂಟೆಗೆ ಪ್ರಾರಂಭಿಸಿ ಜನೆವರಿ 26, ಸಾಯಂಕಾಲ 7:30 ರವರೆಗೆ ನಿಮಗೆ ವಿಡಿಯೋನಲ್ಲಿ ಕಾಣುತ್ತಿರುವ ಹೊಲದಲ್ಲಿ ಮಾಡಿದ್ದಾರೆ.

ಹೊಲಗಳಲ್ಲಿ ರಂಟೆ (ploughing) ಹೊಡೆಯುವುದು ಸಾಮಾನ್ಯ ಮಾತಲ್ಲ. ಅದು ಶ್ರಮದ ಕೆಲಸ. ಅದರಲ್ಲೂ ಬಿಸಿಲು ನಾಡಿನ ಜಿಲ್ಲೆಗಳಲ್ಲಿ ಒಂದಾಗಿರುವ ವಿಜಯಪುರನಲ್ಲಿ (Vijayapura) ನೇಗಿಲು ಹೊಡೆಯುವುದು ಹೆಚ್ಚು ಬೆವರು ಸುರಿಸುವ ಕೆಲಸ. ಸಣ್ಣ ಪ್ರಮಾಣದ ರೈತರು ತಮ್ಮಲ್ಲಿರುವ ಎತ್ತುಗಳ ಸಹಾಯದಿಂದ ತಾವೇ ಈ ಕೆಲಸ ಮಾಡುತ್ತಾರೆ. ರೈತ ಸ್ಥಿತಿವಂತನಾಗಿದ್ದರೆ, ರೆಂಟೆ ಹೊಡೆಯಲು ಬಿತ್ತನೆ ಮಾಡಲು ಟ್ರ್ಯಾಕ್ಟರ್ ಗಳನ್ನು (tractor) ಬಳಸುತ್ತಾರೆ. ಟ್ರ್ಯಾಕ್ಟರ್ ಬಾಡಿಗೆ ಪಡೆಯುವ ಪರಿಪಾಠವೂ ಇದೆ. ಇದನ್ನೆಲ್ಲ ನಿಮಗೆ ಹೇಳುವ ಸಂದರ್ಭವನ್ನು ವಿಜಯಪುರದ ಒಬ್ಬ ರೈತ ಕಲ್ಪಿಸಿದ್ದಾರೆ. ಕಿವಿಗಡಚಿಕ್ಕುವ ಹಲಿಗೆಗಳ ಸದ್ದಿನ ಮಧ್ಯೆ ಟ್ರ್ಯಾಕ್ಟರ್ ಓಡಿಸುತ್ತಿದ್ದಾರಲ್ಲ, ಈ ಯುವ ರೈತನ ಬಗ್ಗೆ ನಾವು ಮಾತಾಡುತ್ತಿದ್ದೇವೆ. ಅಂದಹಾಗೆ ರೈತನ ಹೆಸರು ಹೊಳೆಬಸಪ್ಪ ಮುನಳ್ಳಿ (Holebassappa Munalli) ಮತ್ತು ಅವರು ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಹೆಬ್ಬಾಳ ಗ್ರಾಮದವರು. ಹೊಳೆಬಸಪ್ಪ ಒಂದು ವಿಶಿಷ್ಟವಾದ ದಾಖಲೆಯನ್ನು ಸ್ಥಾಪಿಸಿದ್ದಾರೆ. ನಿರಂತರವಾಗಿ ಎರಡೂವರೆ ದಿನಗಳಿಗಿಂತ ಸ್ವಲ್ಪ ಜಾಸ್ತಿ ಸಮಯದವರೆಗೆ ಅವರು ವಿಶ್ರಮಿಸದೆ ಟ್ರ್ಯಾಕ್ಟರ್ ಮೂಲಕ ರೆಂಟೆ ಹೊಡೆದಿದ್ದಾರೆ!

ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಹೊಳೆಬಸ್ಸಪ್ಪ ಅವರು, 61 ಗಂಟೆಗಳ ಕಾಲ ಸತತವಾಗಿ ರಂಟೆ ಹೊಡೆದಿದ್ದಾರೆ. ರಂಟೆ ಹೊಡೆಯುವ ಕೆಲಸವನ್ನು ಅವರು ಜನೆವರಿ 24, ಬೆಳಗ್ಗೆ 6 ಗಂಟೆಗೆ ಪ್ರಾರಂಭಿಸಿ ಜನೆವರಿ 26, ಸಾಯಂಕಾಲ 7:30 ರವರೆಗೆ ನಿಮಗೆ ವಿಡಿಯೋನಲ್ಲಿ ಕಾಣುತ್ತಿರುವ ಹೊಲದಲ್ಲಿ ಮಾಡಿದ್ದಾರೆ. ಇದನ್ನು ಮಾಡಿದ ನಂತರವೇ ಜಮೀನು ಉಳುಮೆ ಕೆಲಸಕ್ಕೆ ತಯಾರಾಗುತ್ತದೆ.

ತಮ್ಮ ಸಾಧನೆಯಿಂದ ಹೊಳೆಬಸ್ಸಪ್ಪ ಹೆಬ್ಬಾಳದಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಸಿದ್ದಾರೆ. ಕೆಲವರು ಟ್ರ್ಯಾಕ್ಟರ್ ಮುಂದೆ ಕುಣಿಯುತ್ತಿದ್ದಾರೆ, ಇನ್ನಳಿದವರು ಅದರ ಮುಂದೆ ನಿಂತು ಕೆಮೆರಾಗೆ ಪೋಸ್ ನೀಡುತ್ತಿದ್ದಾರೆ. ಹಲಿಗೆ, ತಮಟೆ ಬಾರಿಸುವವರು ಆವೇಷಕ್ಕೊಳಗಾದವರಂತೆ ಬಾರಿಸುತ್ತಿದ್ದಾರೆ.

ಇದನ್ನೂ ಓದಿ:    Hardik Pandya: ಅಜ್ಜಿ ಜತೆ ಶ್ರೀವಲ್ಲಿ ಹಾಡಿಗೆ ಮಸ್ತ್ ಹೆಜ್ಜೆ ಹಾಕಿದ ಹಾರ್ದಿಕ್ ಪಾಂಡ್ಯ; ಫ್ಯಾನ್ಸ್ ಮನಗೆದ್ದ ವಿಡಿಯೋ ಇಲ್ಲಿದೆ