ಸಿಎಂ ಡಿಕೆ ಶಿವಕುಮಾರ್ ಮೊಮ್ಮಗಳಿಗೆ ವಿನಯ್ ಗುರೂಜಿಯಿಂದ ವಿಶೇಷ ಆಶೀರ್ವಾದ
ಸಿಎಂ ಡಿಕೆ ಶಿವಕುಮಾರ್ ಆಹ್ವಾನದ ಮೇರೆಗೆ ವಿನಯ್ ಗುರೂಜಿ ಅವರ ನಿವಾಸಕ್ಕೆ ಭೇಟಿ ನೀಡಿದರು. ಸಿಎಂ ಮೊಮ್ಮಗಳು ಹುಟ್ಟಿದ ನಂತರ ಇದು ಅವರ ಮೊದಲ ಭೇಟಿ. ಈ ಸಂದರ್ಭದಲ್ಲಿ, ಡಿಕೆ ಶಿವಕುಮಾರ್ ಅವರ ಮೊಮ್ಮಗಳಿಗೆ ಶಾಲು ಹಾಕುವಂತೆ ಗುರುಗಳಿಗೆ ವಿನಂತಿಸಿದರು. ವಿನಯ್ ಗುರೂಜಿ ಅವರು ಕಾಲು ಮುಟ್ಟಿ ಆಶೀರ್ವಾದ ಮಾಡುವ ಮೂಲಕ ಶುಭ ಹಾರೈಸಿದರು.
ಬೆಂಗಳೂರು, ಸೆಪ್ಟೆಂಬರ್ 12: ಬೆಂಗಳೂರಿನಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಆಹ್ವಾನದ ಮೇರೆಗೆ ಅವರ ನಿವಾಸಕ್ಕೆ ಅವಧೂತ ಶ್ರೀ ವಿನಯ್ ಗುರೂಜಿ ಇಂದು ಭೇಟಿ ನೀಡಿದರು. ಮೊಮ್ಮಗಳು ಹುಟ್ಟಿದ ಬಳಿಕ ಮೊದಲ ಬಾರಿಗೆ ಮನೆಗೆ ಆಗಮಿಸಿದ ಹಿನ್ನೆಲೆ ಡಿ.ಕೆ. ಶಿವಕುಮಾರ್ ದಂಪತಿ ತಮ್ಮ ಮೊಮ್ಮಗಳನ್ನು ಗುರೂಜಿ ಮುಂದೆ ಕೂರಿಸಿ ಆಶೀರ್ವಾದ ಪಡೆದುಕೊಂಡರು. ಇನ್ನು ಈ ವೇಳೆ ವಿನಯ್ ಗುರೂಜಿ ಸಿಎಂ ಡಿ.ಕೆ. ಶಿವಕುಮಾರ್ಗೆ ಮನವಿ ಪತ್ರವೊಂದನ್ನು ಸಲ್ಲಿಸಿದ್ದು, ಮಲೆನಾಡು ಭಾಗಗಳಲ್ಲಿ ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಲು ಕಾಡುಗಳಲ್ಲಿ ನೈಸರ್ಗಿಕ ಹಣ್ಣಿನ ಗಿಡಗಳನ್ನು ನೆಡುವುದು, ಸೂಕ್ತ ಫೆನ್ಸಿಂಗ್ ಮತ್ತು ವೈಜ್ಞಾನಿಕ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದು, ಆನೆ ಹಾವಳಿ ನಿಯಂತ್ರಣಕ್ಕೆ ಸೂಕ್ತ ಟ್ರಂಚಿಂಗ್ ನಿರ್ಮಿಸುವುದು ಹಾಗೂ ಕಾಡಿನಂಚಿನಲ್ಲಿರುವ ಕೃಷಿ ಭೂಮಿಯ ಸಮಸ್ಯೆಗಳನ್ನು ಇತ್ಯರ್ಥಪಡಿಸುವಂತೆ ಒತ್ತಾಯಿಸಿದರು. ಜೊತೆಗೆ ಯುವಕರ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುವಂತೆ ಹಾಗೂ ವಿಕಲಚೇತನರಿಗೆ ವಿಶೇಷ ಶಿಕ್ಷಣ ಒದಗಿಸುವಂತೆ ಕೋರಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

