ಬ್ರಿಕ್ಸ್ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್; ಚೀನಾ ಅಧ್ಯಕ್ಷರಿಗೆ ವಿಶೇಷತೆ ವಿವರಿಸಿದ ಮೋದಿ
ದೆಹಲಿಯ ಭಾರತ್ ಮಂಟಪದಲ್ಲಿ 18ನೇ ಬ್ರಿಕ್ಸ್ ಶೃಂಗಸಭೆ ಅಧಿಕೃತವಾಗಿ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಕ್ಸ್ ನಾಯಕರನ್ನು ವೈಯಕ್ತಿಕವಾಗಿ ಸ್ವಾಗತಿಸಿದರು. ತಮಿಳುನಾಡಿನ ರಾಮೇಶ್ವರಂನಲ್ಲಿರುವ ಪ್ರಸಿದ್ಧ ರಾಮನಾಥಸ್ವಾಮಿ ದೇವಾಲಯದ ಹಿನ್ನೆಲೆಯಲ್ಲಿ ಅವರು ವಿಶ್ವದಾದ್ಯಂತದ ನಾಯಕರಿಗೆ ಭವ್ಯ ಸ್ವಾಗತ ನೀಡಿದರು. ತಮಿಳುನಾಡಿನ ರಾಮೇಶ್ವರಂನಲ್ಲಿರುವ ರಾಮನಾಥಸ್ವಾಮಿ ದೇವಾಲಯವನ್ನು ಶಿವನಿಗೆ ಅರ್ಪಿತವಾದ ಅತ್ಯಂತ ಪವಿತ್ರ ಮತ್ತು ಪ್ರಸಿದ್ಧ ಹಿಂದೂ ಯಾತ್ರಾ ಸ್ಥಳವೆಂದು ಪರಿಗಣಿಸಲಾಗಿದೆ. ಇದು ಭಾರತದ 12 ಜ್ಯೋತಿರ್ಲಿಂಗಗಳು ಮತ್ತು ನಾಲ್ಕು ಧಾಮಗಳಲ್ಲಿ ಒಂದಾಗಿದೆ.
ನವದೆಹಲಿ, ಸೆಪ್ಟೆಂಬರ್ 12: ಬ್ರಿಕ್ಸ್ ಶೃಂಗಸಭೆಯಲ್ಲಿ ವಿಶ್ವದಾದ್ಯಂತದ ರಾಷ್ಟ್ರಗಳ ಮುಖ್ಯಸ್ಥರನ್ನು ಸ್ವಾಗತಿಸಿದ ವೇದಿಕೆಯ ಹಿನ್ನೆಲೆಯಲ್ಲಿದ್ದ ತಮಿಳುನಾಡಿನ ಪ್ರಸಿದ್ಧ ರಾಮೇಶ್ವರಂನ ರಾಮನಾಥಸ್ವಾಮಿ ದೇವಾಲಯದ ಸ್ಕ್ರೀನ್ ಜಾಗತಿಕ ನಾಯಕರ ಗಮನ ಸೆಳೆಯಿತು. ದೆಹಲಿಯಲ್ಲಿ ನಡೆಯುತ್ತಿರುವ 18ನೇ ಬ್ರಿಕ್ಸ್ ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ತಮಿಳುನಾಡಿನ ರಾಮೇಶ್ವರಂನ ಐತಿಹಾಸಿಕ ಶ್ರೀ ರಾಮನಾಥಸ್ವಾಮಿ ದೇವಾಲಯದ ಬ್ಯಾಕ್ಡ್ರಾಪ್ ಬಗ್ಗೆ ವೇದಿಕೆಯಲ್ಲಿಯೇ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿವರಿಸಿದರು. ಆ ದೇವಾಲಯದ ಆಧ್ಯಾತ್ಮಿಕ ಮಹತ್ವದ ಬಗ್ಗೆ ಚೀನಾ ಅಧ್ಯಕ್ಷರಿಗೆ ಮೋದಿ ವಿವರ ನೀಡಿದರು. ಈ ಮೂಲಕ ಜಾಗತಿಕ ವೇದಿಕೆಯಲ್ಲಿ ಪ್ರಧಾನಿ ಮೋದಿ ಭಾರತದ ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ ಪರಂಪರೆಯ ಪ್ರಸಾರವನ್ನು ಕೂಡ ಮಾಡಿದರು.
ರಾಮೇಶ್ವರಂ ದೇವಾಲಯದ ವಿಶೇಷತೆ:
ತಮಿಳುನಾಡಿನ ರಾಮೇಶ್ವರಂನಲ್ಲಿರುವ ರಾಮನಾಥಸ್ವಾಮಿ ದೇವಾಲಯವನ್ನು ಶಿವನಿಗೆ ಅರ್ಪಿತವಾದ ಅತ್ಯಂತ ಪವಿತ್ರ ಮತ್ತು ಪ್ರಸಿದ್ಧ ಹಿಂದೂ ಯಾತ್ರಾ ಸ್ಥಳವೆಂದು ಪರಿಗಣಿಸಲಾಗಿದೆ. ಇದು ಭಾರತದ 12 ಜ್ಯೋತಿರ್ಲಿಂಗಗಳು ಮತ್ತು ನಾಲ್ಕು ಧಾಮಗಳಲ್ಲಿ ಒಂದಾಗಿದೆ. ಶ್ರೀರಾಮನು ಶ್ರೀಲಂಕಾಕ್ಕೆ ಪ್ರಯಾಣಿಸಲು ಮತ್ತು ರಾವಣನಿಂದ ತನ್ನ ಪತ್ನಿಯನ್ನು ರಕ್ಷಿಸಲು ರಾಮ ಸೇತು ಸೇತುವೆಯನ್ನು ದಾಟುವ ಮೊದಲು ಈ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದನೆಂದು ನಂಬಲಾಗಿದೆ. ಇದರ ಕಾರಿಡಾರ್ ಭಾರತದ ಹಿಂದೂ ದೇವಾಲಯಗಳಲ್ಲಿ ಅತಿ ಉದ್ದವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

