ಅಂತೂ ಇಂತೂ ಬಂದ ಗೆಳೆಯ; ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ವಿನೋದ್​ ಪ್ರಭಾಕರ್

| Updated By: ಮದನ್​ ಕುಮಾರ್​

Updated on: Jun 24, 2024 | 3:02 PM

ಪರಿಸ್ಥಿತಿ ಚೆನ್ನಾಗಿ ಇದ್ದಾಗ ದರ್ಶನ್​ ಅವರಿಂದ ಕನ್ನಡ ಚಿತ್ರರಂಗದ ಅನೇಕರು ಸಹಾಯ ಪಡೆದಿದ್ದರು. ಆದರೆ ಈಗ ಅವರನ್ನು ನೋಡಲು ಯಾವ ಸ್ನೇಹಿತರೂ ಬರುತ್ತಿಲ್ಲ ಎಂದು ಜನರು ಸೋಶಿಯಲ್​ ಮೀಡಿಯಾದಲ್ಲಿ ಟೀಕೆ ಮಾಡಿದ್ದರು. ಇಂದು (ಜೂನ್​ 24) ವಿನೋದ್​ ಪ್ರಭಾಕರ್​ ಅವರು ಪರಪ್ಪನ ಅಗ್ರಹಾರಕ್ಕೆ ಬಂದು ದರ್ಶನ್​ರನ್ನು ಭೇಟಿ ಮಾಡಿದ್ದಾರೆ.

ನಟ ದರ್ಶನ್​ (Darshan) ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಮಂದಿ ಗೆಳೆಯರು ಇದ್ದಾರೆ. ಹಲವರ ಸಿನಿಮಾಗಳಿಗೆ ದರ್ಶನ್​ ಬೆಂಬಲ ನೀಡಿದ್ದಾರೆ. ದರ್ಶನ್​ ಅವರಿಂದ ಸಹಾಯ ಪಡೆದುಕೊಂಡವರ ಸಂಖ್ಯೆ ದೊಡ್ಡದಿದೆ. ಆದರೆ ಈಗ ದರ್ಶನ್​ ಸಂಕಷ್ಟದಲ್ಲಿ ಸಿಲುಕಿರುವಾಗ ಬಹುತೇಕರು ಅಂತರ ಕಾಯ್ದುಕೊಂಡಿದ್ದಾರೆ. ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ಎ2 ಆಗಿರುವ ದರ್ಶನ್​ ಅವರನ್ನು ಪರಪ್ಪನ ಅಗ್ರಹಾರಕ್ಕೆ ಕಳಿಸಲಾಗಿದೆ. ಅವರನ್ನು ನೋಡಲು ಆತ್ಮೀಯರು ಬಂದಿಲ್ಲ ಎಂಬ ಬೇಸರ ಅಭಿಮಾನಿಗಳಿಗೆ ಇತ್ತು. ದರ್ಶನ್​ ಅವರಿಂದ ಸಹಾಯ ಪಡೆದುಕೊಂಡಿದ್ದ ಸ್ನೇಹಿತರು ಈಗ ಎಲ್ಲಿದ್ದಾರೆ ಎಂದು ಸೋಶಿಯಲ್​ ಮೀಡಿಯಾದಲ್ಲಿ ಪ್ರಶ್ನೆ ಎದ್ದಿತ್ತು. ಈಗ ಅಂತೂ ಇಂತೂ ಅವರ ಗೆಳೆಯರಲ್ಲಿ ಒಬ್ಬರಾದ ವಿನೋದ್​ ಪ್ರಭಾಕರ್​ ಇಂದು (ಜೂನ್​ 24) ಜೈಲಿಗೆ ಬಂದಿದ್ದಾರೆ. ಪೊಲೀಸರಿಂದ ಅನುಮತಿ ಪಡೆದುಕೊಂಡು ದರ್ಶನ್​ ಅವರನ್ನು ವಿನೋದ್​ ಪ್ರಭಾಕರ್​ (Vinod Prabhakar) ಭೇಟಿ ಮಾಡಿದ್ದಾರೆ. ಕಷ್ಟದಲ್ಲಿ ಇರುವ ಗೆಳೆಯನನ್ನು ಅವರು ಮಾತನಾಡಿಸಿಕೊಂಡು ಬಂದಿದ್ದಾರೆ. ಅಲ್ಲದೇ ದರ್ಶನ್​ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್​ ಕೂಡ ಇಂದು ಭೇಟಿ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on