Video: ಸಿಂಹದ ಮೇಲೆ ಕಾಡೆಮ್ಮೆಗಳ ಹಿಂಡು ಆಕ್ರಮಣ; ವಿಡಿಯೋ ವೈರಲ್

Video: ಸಿಂಹದ ಮೇಲೆ ಕಾಡೆಮ್ಮೆಗಳ ಹಿಂಡು ಆಕ್ರಮಣ; ವಿಡಿಯೋ ವೈರಲ್

ಅಕ್ಷತಾ ವರ್ಕಾಡಿ
|

Updated on: Aug 17, 2024 | 11:18 AM

ಕಾಡೆಮ್ಮೆಗಳಿಂದ ತಪ್ಪಿಸಿಕೊಳ್ಳಲು ಸಿಂಹ ಮರ ಏರಿ ಕುಳಿತಿದ್ದು, ಮರ ಒಣಗಿದ್ದರಿಂದ ಮುರಿದು ಬಿದ್ದಿದೆ. ರೆಂಬೆಯ ಸಮೇತ ಸಿಂಹ ಕೆಳಗೆ ಬಿದಿದ್ದು, ಅಲ್ಲಿಂದ ಓಡಿಹೋಗಿ ಕಾಡೆಮ್ಮೆಗಳ ದಾಳಿಯಿಂದ ತನ್ನನ್ನು ತಾನು ರಕ್ಷಿಸಿಕೊಂಡಿದೆ. ವಿಡಿಯೋ ಇಲ್ಲಿದೆ ನೋಡಿ.

ಕಾಡೆಮ್ಮೆಗಳ ಗುಂಪೊಂದು ಒಂಟಿ ಸಿಂಹವನ್ನು ಕೆಣಕಿವೆ. ಸಿಂಹ ಇವುಗಳೊಂದಿಗೆ ಕಾದಾಡಿ ತಪ್ಪಿಸಿಕೊಳ್ಳಲು ನೋಡಿದೆ. ಒಣ ಮರವನ್ನು ಸಿಂಹ ಹತ್ತಿ ಕುಳಿತಿದ್ದು, ಕಾಡೆಮ್ಮೆಗಳ ಹಿಂಡು ಮರದ ಸುತ್ತಲೂ ಸುತ್ತುವರಿದಿದೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​​ ಆಗುತ್ತಿದೆ. ಕಾಡೆಮ್ಮೆಗಳಿಂದ ತಪ್ಪಿಸಿಕೊಳ್ಳಲು ಸಿಂಹ ಮರ ಏರಿ ಕುಳಿತಿದ್ದು, ಮರ ಒಣಗಿದ್ದರಿಂದ ಮುರಿದು ಬಿದ್ದಿದೆ. ರೆಂಬೆಯ ಸಮೇತ ಸಿಂಹ ಕೆಳಗೆ ಬಿದಿದ್ದು, ಅಲ್ಲಿಂದ ಓಡಿಹೋಗಿ ಕಾಡೆಮ್ಮೆಗಳ ದಾಳಿಯಿಂದ ತನ್ನನ್ನು ತಾನು ರಕ್ಷಿಸಿಕೊಂಡಿದೆ.@Latestsightings ಎಂಬ ಯೂಟ್ಯೂಬ್​​ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಸದ್ಯ ಎಲ್ಲೆಡೆ ವೈರಲ್​​ ಆಗಿದೆ. ವಿಡಿಯೋ ಹಂಚಿಕೊಂಡ ಒಂದೇ ತಿಂಗಳಲ್ಲಿ 2.8 ಮಿಲಿಯನ್​ ಅಂದರೆ 20ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಇದನ್ನೂ ಓದಿ: Video: ಪಿಸ್ತೂಲ್, ಚಾಕು ಹಿಡಿದು ಚಿನ್ನ ಕದಿಯಲು ಬಂದ ನಾಲ್ವರನ್ನು ಕೋಲಿನಿಂದ ಹೊಡೆದು ಓಡಿಸಿದ ಮಾಲೀಕ