ಬರಿಗೈಯಲ್ಲಿ ಚಿರತೆಯ ಕುತ್ತಿಗೆ ಹಿಡಿದ ಗ್ರಾಮಸ್ಥರು; ವಿಡಿಯೋಗೆ ನೆಟ್ಟಿಗರ ಬೇಸರ

ಬರಿಗೈಯಲ್ಲಿ ಚಿರತೆಯ ಕುತ್ತಿಗೆ ಹಿಡಿದ ಗ್ರಾಮಸ್ಥರು; ವಿಡಿಯೋಗೆ ನೆಟ್ಟಿಗರ ಬೇಸರ

ಸುಷ್ಮಾ ಚಕ್ರೆ
|

Updated on: Dec 05, 2024 | 10:14 PM

ಉತ್ತರ ಪ್ರದೇಶದಲ್ಲಿ ಬರಿಗೈಯಲ್ಲಿ ಚಿರತೆಯನ್ನು ತಡೆದ ಗ್ರಾಮಸ್ಥರ ವರ್ತನೆಗೆ ನೆಟ್ಟಿಗರು ಬೇಸರಗೊಂಡಿದ್ದಾರೆ. ತಮ್ಮ ಊರಿಗೆ ಬಂದು ಕಾಟ ಕೊಡುತ್ತಿದ್ದ ಚಿರತೆಯನ್ನು ಹಿಡಿಯಲು ಅರಣ್ಯಾಧಿಕಾರಿಗಳು ವಿಫಲರಾದ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಚಿರತೆಯನ್ನು ಹಿಡಿದಿದ್ದಾರೆ.

ನೊಯ್ಡಾ: ಊರಿನೊಳಗೆ ಬಂದು ಕಾಟ ಕೊಡುತ್ತಿದ್ದ ಚಿರತೆಯನ್ನು ಹಿಡಿಯಲು ಅರಣ್ಯ ಅಧಿಕಾರಿಗಳು ವಿಫಲರಾದ ನಂತರ ಉತ್ತರ ಪ್ರದೇಶದ ಹಳ್ಳಿಯೊಂದರ ನಿವಾಸಿಗಳು ತಾವೇ ಚಿರತೆಯನ್ನು ಸೆರೆ ಹಿಡಿದು, ಅದರ ಕುತ್ತಿಗೆಯನ್ನು ಬರಿಗೈಯಲ್ಲಿ ಒತ್ತಿ ಹಿಡಿದು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ನ ಲಾಲ್‌ಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ವೀಡಿಯೋದಲ್ಲಿ ಯುವಕರು ಚಿರತೆಯ ಕುತ್ತಿಗೆಗೆ ಕೈ ಹಾಕಿ ನಿಂತಿರುವುದನ್ನು ನೋಡಬಹುದು. ಆ ಚಿರತೆ ತೀವ್ರವಾಗಿ ಭಯಗೊಂಡಂತೆ ಕಾಣಿಸಿತು. ಈ ಘಟನೆಯ ನಂತರ ಅರಣ್ಯ ಇಲಾಖೆ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು. ಚಿರತೆಯೊಂದಿಗೆ ಗ್ರಾಮಸ್ಥರು ತಿರುಗಾಡುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಅನೇಕ ನೆಟಿಜನ್‌ಗಳನ್ನು ಕೆರಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ