ಇನ್ಮುಂದೆ ಕಿಚ್ಚ ಸುದೀಪ್ ಅವರೇ ವಿಷ್ಣುವರ್ಧನ್​ ಮಗ: ಹುಟ್ಟುಹಬ್ಬದ ದಿನ ಅಭಿಮಾನಿಗಳ ಮಾತು

Updated By: ಮದನ್​ ಕುಮಾರ್​

Updated on: Sep 18, 2025 | 3:54 PM

‘ಸಾಹಸ ಸಿಂಹ’ ವಿಷ್ಣುವರ್ಧನ್ ಅವರ 75ನೇ ವರ್ಷದ ಹುಟ್ಟುಹಬ್ಬವನ್ನು ಇಂದು (ಸೆ.18) ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅಭಿಮಾನಿಗಳು ಬೆಂಗಳೂರಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮ ಮಾಡುವ ಮೂಲಕ ಅಭಿಮಾನ ಪ್ರದರ್ಶಿಸುತ್ತಿದ್ದಾರೆ. ಈ ವೇಳೆ ಟಿವಿ9 ಜೊತೆ ಕೆಲವು ಅಭಿಮಾನಿಗಳು ಮಾತನಾಡಿದರು. ವಿಡಿಯೋ ಇಲ್ಲಿದೆ ನೋಡಿ..

ನಟ ವಿಷ್ಣುವರ್ಧನ್ ಅವರ 75ನೇ ವರ್ಷದ ಹುಟ್ಟುಹಬ್ಬವನ್ನು (Vishnuvardhan Birthday) ಇಂದು (ಸೆಪ್ಟೆಂಬರ್ 18) ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅಭಿಮಾನಿಗಳು (Vishnuvardhan Fans) ಬೆಂಗಳೂರಿನಲ್ಲಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಅಭಿಮಾನ ಪ್ರದರ್ಶಿಸುತ್ತಿದ್ದಾರೆ. ಈ ವೇಳೆ ಟಿವಿ9 ಜೊತೆ ಕೆಲವು ಅಭಿಮಾನಿಗಳು ಮಾತನಾಡಿದರು. ವಿಷ್ಣುವರ್ಧನ್ ದರ್ಶನ ಕೇಂದ್ರಕ್ಕಾಗಿ ಕಿಚ್ಚ ಸುದೀಪ್ ಅವರು ಅರ್ಧ ಎಕರೆ ಜಾಗ ಖರೀದಿ ಮಾಡಿದ್ದಾರೆ. ಅವರ ಈ ಕೆಲಸಕ್ಕೆ ಅಭಿಮಾನಿಗಳು ಭೇಷ್ ಎಂದಿದ್ದಾರೆ. ‘ವಿಷ್ಣು ಅವರಿಗೆ ಮಗ ಇಲ್ಲ ಎಂಬ ಕೊರಗು ಇಷ್ಟು ದಿನ ಇತ್ತು. ಆದರೆ ಇನ್ಮೇಲೆ ಆ ಚಿಂತೆ ಮಾಡುವಂತಿಲ್ಲ. ಮಗನಾಗಿ ಕಿಚ್ಚ ಸುದೀಪ್ (Kichcha Sudeep) ಸರ್ ಇದ್ದಾರೆ. ಅವರ ಹಿಂದೆ ನಾವು ಅಭಿಮಾನಿಗಳು ಇರುತ್ತೇವೆ’ ಎಂದು ವಿಷ್ಣುವರ್ಧನ್ ಅಭಿಮಾನಿ  ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.