ಕುಮಾರಸ್ವಾಮಿ ಬೇಸರದಿಂದ ಆಡಿದ ಮಾತನ್ನು ಬಿಜೆಪಿ ನಾಯಕರು ಹೇಗೆ ಅರ್ಥೈಸಿಕೊಳ್ಳುತ್ತಾರೋ?

ಕುಮಾರಸ್ವಾಮಿ ಬೇಸರದಿಂದ ಆಡಿದ ಮಾತನ್ನು ಬಿಜೆಪಿ ನಾಯಕರು ಹೇಗೆ ಅರ್ಥೈಸಿಕೊಳ್ಳುತ್ತಾರೋ?

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 22, 2024 | 5:38 PM

ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಗೆ ಸೇರಿಸಿಕೊಳ್ಳುವ ಬಗ್ಗೆ ಸಿದ್ದರಾಮಯ್ಯ ಇನ್ನೂ ನಿರ್ಧರಿಸಿಲ್ಲ. ಆದರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾ ಅವರು ತನಗೆ ಫೋನಾಯಿಸಿ, ಯೋಗೇಶ್ವರ್ ಜೆಡಿಎಸ್ ಪಕ್ಷಕ್ಕೆ ಸೇರಿಸಿಕೊಂಡು ಚನ್ನಪಟ್ಟಣದ ಟಿಕೆಟ್ ಕೊಡೋದಾದ್ರೆ ತನ್ನ ಅಭ್ಯಂತರವಿಲ್ಲ ಎಂದಿದ್ದರು, ಇದಕ್ಕಿಂತ ದೊಡ್ಡ ಮಾತು ಬೇಕೇ? ಎಂದು ಕುಮಾರಸ್ವಾಮಿಯರು ಯೋಗೇಶ್ವರ್​ರನ್ನು ಪರೋಕ್ಷವಾಗಿ ತಿವಿದರು.

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇವತ್ತು ದೇಶದಲ್ಲೇ ಅತಿಹೆಚ್ಚು ಗೌರವಿಸುವ ವ್ಯಕ್ತಿಯೆಂದರೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಅವರು ಇಟ್ಟುಕೊಂಡಿರುವ ಗೌರವಕ್ಕೆ ಚ್ಯುತಿ ಬರಬಾರದೆಂಬ ಕಾರಣಕ್ಕೆ ನಾವು ಇಷ್ಟು ಬೊಗ್ಗಿದ್ದೇವೆ, ಇದಕ್ಕೂ ಮೀರಿ ಬೊಗ್ಗುವುದು ನಮ್ಮಿಂದ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಜೆಡಿಎಸ್ ಕಚೇರಿಯಲ್ಲಿ ಆಡಿದ ಮಾತಿನ ವಿಶ್ಲೇಷಣೆಯಾಗುತ್ತಿದೆ. ಅಂದರೆ ರಾಜ್ಯ ಬಿಜೆಪಿ ನಾಯಕರ ವರ್ತನೆಯಿಂದ ಅವರು ಬೇಸತ್ತಿದ್ದಾರೆಯೇ? ರಾಜ್ಯ ನಾಯಕರು ಈ ಮಾತನ್ನು ಹೇಗೆ ಅರ್ಥೈಸಿಕೊಳ್ಳಲಿದ್ದಾರೆಯೋ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹೆಚ್​​ಡಿಕೆ ನನಗೆ ಟಿಕೆಟ್ ಕೊಡದಿದ್ರೆ ಅವರ ಮಗನಿಗೇ ಕೊಡಲಿ: ಕುಮಾರಸ್ವಾಮಿ ವಿರುದ್ಧ ಸಿಡಿದ ಸಿಪಿ ಯೋಗೇಶ್ವರ್