ಮಲ್ಲಿಕಾರ್ಜುನ ಖರ್ಗೆಯವರನ್ನು ಜ್ಞಾನೇಂದ್ರ ಕಪ್ಪಗಿದ್ದಾರೆ ಅಂದಾಗ ಯಾಕೆ ಎಲ್ಲರೂ ಸುಮ್ಮನಿದ್ದರು? ಪ್ರಿಯಾಂಕ್ ಖರ್ಗೆ

|

Updated on: Nov 13, 2024 | 7:07 PM

ಸರ್ಕಾರೀ ಕಾಮಗಾರಿಗಳಲ್ಲಿ ಮುಸ್ಲಿಂ ಸಮುದಾಯದವರಿಗೆ ಮೀಸಲಾತಿ ಕಲ್ಪಿಸುವ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ, ಅಂಥ ಪ್ರಸ್ತಾವನೆ ದಾಖಲೆಯಲ್ಲಿದೆ ಎಂದ ಮಾತ್ರಕ್ಕೆ ಅದಕ್ಕೆ ಸರ್ಕಾರ ಅನುಮೋನೆ ನೀಡಿಂತಾಗುವುದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಬೆಂಗಳೂರು: ನಗರದಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಚಿವ ಜಮೀರ್ ಅಹ್ಮದ್ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರನ್ನು ಕರಿಯ ಅಂತ ಕರೆದಿರುವುದನ್ನು ಪ್ರಸ್ತಾಪಿಸಿ, ಹಿಂದೆ ಗೃಹ ಸಚಿವರಾಗಿದ್ದ ಅರಗ ಜ್ಞಾನೇಂದ್ರ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸುಟ್ಟ ಮುಖದಂತಿರುವವರು, ಕಪ್ಪಗಿರೋರು ಅಂತ ಹೇಳಿದ್ದರಲ್ಲ? ಕುಮಾರಸ್ವಾಮಿ ಬಗ್ಗೆ ಮರುಕ ತೋರಿಸುತ್ತಿರವವರಿಗೆ ಆಗ ಯಾಕೆ ಅನುಕಂಪ ಹುಟ್ಟಲಿಲ್ಲ ಎಂದು ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಿಜೆಪಿ ಸುಳ್ಳಿನ ಫ್ಯಾಕ್ಟರಿ ನಡೆಸಲು ಜೀತದಾಳು, ಬಾಡಿಗೆ ಭಾಷಣಕಾರರನ್ನು ಇಟ್ಟುಕೊಂಡಿದೆ; ಪ್ರಿಯಾಂಕ್ ಖರ್ಗೆ ಟೀಕೆ