Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada Season; ಟಿಕೆಟ್ ಟು ಫಿನಾಲೆ ಸಿಕ್ಕಾಗಲೇ ಹನುಮಂತ ವಿನ್ನರ್ ಆದಂತೆ ಸಂಭ್ರಮಿಸಿದ್ದೆವು: ಮಾರುತಿ, ಸಹೋದರ

Bigg Boss Kannada Season; ಟಿಕೆಟ್ ಟು ಫಿನಾಲೆ ಸಿಕ್ಕಾಗಲೇ ಹನುಮಂತ ವಿನ್ನರ್ ಆದಂತೆ ಸಂಭ್ರಮಿಸಿದ್ದೆವು: ಮಾರುತಿ, ಸಹೋದರ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 28, 2025 | 2:18 PM

ಬಿಗ್ ಬಾಸ್ ವಿನ್ನರ್ ಹನುಮಂತ ಅವರ ಪ್ರಣಯ ಪ್ರಸಂಗದ ಬಗ್ಗೆ ಮನೆಯಲ್ಲಿ ಗೊತ್ತಿದ್ದಂತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿರುವ ಯುವತಿಯನ್ನು ಹನುಮಂತ ಪ್ರೀತಿಸುತ್ತಿದ್ದು ಆಕೆಯನ್ನೇ ಮದುವೆಯಾಗೋದಾಗಿ ಹೇಳಿದ್ದಾರೆ. ಹುಡುಗಿ ಯಾರೇ ಆದರೂ ತನ್ನ ತಮ್ಮನ ಲಗ್ನ ಬಂಜಾರಾ ಸಂಪ್ರದಾಯದಂತೆ ಊರಲ್ಲಿ ವಿಜೃಂಭಣೆಯಿಂದ ಮಾಡುತ್ತೇವೆ ಎಂದು ಮಾರುತಿ ಹೇಳುತ್ತಾರೆ.

ಹಾವೇರಿ: ಬಿಗ್ ಬಾಸ್ ಕನ್ನಡ ಸೀಸನ್ 11 ವಿನ್ನರ್ ಹನುಮಂತು ಮನೆಮಾತ್ರವಲ್ಲ, ಅವರು ವಾಸ ಮಾಡುವ ಚಿಣ್ಣೂರು ಬಂಡಿ ಗ್ರಾಮದಲ್ಲೂ ಹಬ್ಬದ ವಾತಾವರಣ ಮನೆ ಮಾಡಿದೆ. ನಮ್ಮ ಹಾವೇರಿ ಪ್ರತಿನಿಧಿಯೊಂದಿಗೆ ಮಾತಾಡಿರುವ ಹನುಮಂತು ಸಹೋದರ ಮಾರುತಿ ಕುಟುಂಬದ ಸಂತಸವನ್ನು ಹಂಚಿಕೊಂಡಿದ್ದಾರೆ. ತನ್ನ ತಮ್ಮನಿಗೆ ಹನುಮಂತ ಅಂತ ಹೆಸರಿಟ್ಟಿದ್ದು ಸಾರ್ಥಕವಾಗಿದೆ, ಭಗವಾನ್ ಆಂಜನೇಯನೇ ಅವನ ದೇಹದಲ್ಲಿ ಮನೆ ಮಾಡಿದ್ದಾನೆ ಎಂದು ಹೇಳುವ ಮಾರುತಿ ಸುದೀಪ್ ಸರ್ ಹನುಮಂತನಿಗಾಗಿ ಚಪ್ಪಾಳೆ ತಟ್ಟಿ ಟಿಕೆಟ್ ಟು ಫಿನಾಲೆ ನೀಡಿದಾಗಲೇ ಅವನು ಸೀಸನ್ ಗೆದ್ದಷ್ಟು ಖುಷಿಯಾಗಿತ್ತು, ಆಗ ಹನುಮಂತು ಸಹ ಇದೇ ಮಾತನ್ನು ಹೇಳಿದ್ದ ಅನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Bigg Boss Kannada: ಮಾಧ್ಯಮಗೋಷ್ಠಿಯಲ್ಲೂ ಉತ್ತರ ಕರ್ನಾಟಕ ಭಾಷೆಯ ಸೊಗಡನ್ನು ಮತ್ತೊಮ್ಮೆ ಪರಿಚಯಿಸಿದ ವಿನ್ನರ್ ಹನುಮಂತು