Loading video

ನಮಗಾಗಿ ಏನು ಮಾಡಿದ್ದೀರಿ ಶಾಸಕರೇ ಅಂತ ಗ್ರಾಮಸ್ಥರು ಕೇಳಿದಾಗ ಕೋನರೆಡ್ಡಿ ಸಿಡಿಮಿಡಿಗೊಂಡರು!

Updated on: Jun 14, 2025 | 6:12 PM

ಶಾಸಕ ಕೋನರೆಡ್ಡಿ ಕೇವಲ ತನ್ನೊಂದಿಗೆ ಮಾತಾಡಿದ ಗ್ರಾಮಸ್ಥನ ಮೇಲೆ ಮಾತ್ರ ಗರಂ ಅಗಲ್ಲ. 360 ಡಿಗ್ರಿ ಕ್ರಿಕೆಟರ್ ಎಬಿ ಡಿ ವಿಲಿಯರ್ಸ್ ಮತ್ತು ಸೂರ್ಯ ಕುಮಾರ್ ಯಾದವ್ ರಂತೆ ತಮ್ಮ ಬಲ, ಎಡ ಮತ್ತು ಹಿಂದಿರುವ ಗ್ರಾಮಸ್ಥರೆಲ್ಲರ ಮೇಲೆ ರೇಗುತ್ತಾರೆ. ಸಿದ್ದರಾಮಯ್ಯ ಸಂಪುಟ ವಿಸ್ತರಿಸಿದಲ್ಲಿ ಮಂತ್ರಿ ಸ್ಥಾನ ಸಿಗಬಹುದೆಂದು ಕೋನರೆಡ್ಡಿ ಅಂದುಕೊಂಡಿರುವಾಗ ಜನ ಹೀಗೆ ಮಾತಾಡಿದರೆ ಹೇಗೆ ಸ್ವಾಮಿ?

ಧಾರವಾಡ, ಜೂನ್ 14: ಕಾರ್ಮಿಕ ಸಚಿವ ಸಂತೋಷ್ ಲಾಡ್ ಬೈಕ್ ಮೇಲೆ ಓಡಾಡುತ್ತಾ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿದರು. ಪಿಲಿಯನ್ ರೈಡರ್ ಆಗಿ ಅವರ ಜೊತೆಗಿದ್ದಿದ್ದು ನವಲಗುಂದ ಶಾಸಕ ಎನ್ ಹೆಚ್ ಕೋನರೆಡ್ಡಿ. ತಮ್ಮ ಕ್ಷೇತ್ರದಲ್ಲಿ ಓಡಾಡುವಾಗ ಶಾಸಕನಿಗೆ ಇರುಸು ಮುರುಸು ಉಂಟಾಗುವ ಸನ್ನಿವೇಶ ಸೃಷ್ಟಿಯಾಯಿತು. ಅರೇಕುರಹಟ್ಟಿ ಗ್ರಾಮದಲ್ಲಿ ಸಚಿವ ರೈತರೊಂದಿಗೆ ಮಾತಾಡುವಾಗ, ಶಾಸಕನಿಂದ ಯಾವುದೇ ಪ್ರಯೋಜನವಾಗಿಲ್ಲ ಅಂತ ಹೇಳಿದರು. ನಿಮಗೋಸ್ಕರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರೆ ನನ್ನ ವಿರುದ್ಧವೇ ಮಾತಾಡ್ತೀರಲ್ಲ ಅಂತ ಕೋನರೆಡ್ಡಿ ಹೇಳಿದಾಗ ಗ್ರಾಮಸ್ಥರೊಬ್ಬರು ನಮಗಾಗಿ ಏನು ಮಾಡಿದ್ದೀರಿ ಅಂತ ನೇರವಾಗೇ ಕೇಳುತ್ತಾರೆ. ಆಗ ಮತ್ತಷ್ಟು ಸಿಡಿಮಿಡಿಗೊಳ್ಳುವ ಶಾಸಕ ಮಿನಿಸ್ಟ್ರು ಅವರಿಂದಾನೇ ಕೆಲಸ ಮಾಡಿಸಿಕೊಳ್ಳಿ ಅಂತ ಭುಸುಗುಡುತ್ತಾರೆ.

ಇದನ್ನೂ ಓದಿ:  ನಾನು ಒಂದು ಬಾರಿ ಕೃಷಿ ಮಂತ್ರಿ ಆಗಬೇಕು: ಮತ್ತೆ ಸಚಿವ ಸ್ಥಾನದ ಆಕಾಂಕ್ಷೆ ಬಿಚ್ಚಿಟ್ಟ ಶಾಸಕ ಕೋನರೆಡ್ಡಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Jun 14, 2025 06:11 PM