Daily Devotional: ವಿದ್ಯಾರ್ಥಿಗಳು ತಾಂಬೂಲ ಸೇವನೆ ಮಾಡಬಾರದು ಯಾಕೆ?
ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿವಿದ್ಯಾರ್ಥಿಗಳು ತಾಂಬೂಲ ಸೇವನೆ ಮಾಡಬಾರದು ಯಾಕೆ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಯಾವುದೇ ಶುಭ ಸಮಾರಂಭದಲ್ಲಿ ಒಳ್ಳೆಯ ಆಹಾರ ಸೇವನೆಯ ನಂತರ ತಾಂಬೂಲ ಸೇವಿಸುವುದು ವಾಡಿಕೆ. ಇದು ಜೀರ್ಣಕ್ರಿಯೆಗೆ ಸಹಕಾರಿ ಹಾಗೂ ಮಹಾಲಕ್ಷ್ಮಿ, ಐಶ್ವರ್ಯ ಮತ್ತು ಸಂತೋಷದ ಸಂಕೇತವಾಗಿದೆ.

ಆದರೆ ವಿದ್ಯಾರ್ಥಿಗಳು ತಾಂಬೂಲ ಸೇವನೆಯಿಂದ ದೂರವಿರಬೇಕು ಎಂದು ಶಾಸ್ತ್ರಗಳು ಹೇಳುತ್ತವೆ. ಬ್ರಹ್ಮಚಾರಿಗಳು ಕೂಡ ಇದನ್ನು ಸೇವಿಸಬಾರದು. ತಾಂಬೂಲದಲ್ಲಿ ವೀಳ್ಯದೆಲೆ, ಅಡಿಕೆ, ಸುಣ್ಣ, ಏಲಕ್ಕಿ, ಕಸ್ತೂರಿ, ಜಾಜಿ, ಜಾಪತ್ರೆ ಇರುತ್ತವೆ. ಇದನ್ನು ಸೇವಿಸುವುದರಿಂದ ವಿದ್ಯಾರ್ಥಿಗಳ ಮನಸ್ಸು ಮತ್ತು ದೇಹದ ಮೇಲೆ ಪರಿಣಾಮ ಉಂಟಾಗಿ, ಅಧ್ಯಯನಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ನಾಲಿಗೆ ದಪ್ಪವಾಗುವುದು, ವಿಕೃತ ಭಾವನೆಗಳು ಮತ್ತು ಅಹಂಕಾರ ಉಂಟಾಗುವುದು ಇತ್ಯಾದಿ ಸಮಸ್ಯೆಗಳು ಎದುರಾಗಬಹುದು. ಹಿಂದೆ ಗುರುಕುಲಗಳಲ್ಲಿಯೂ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಅಡ್ಡಿಯಾಗುವಂತಹ ಈರುಳ್ಳಿ, ಬೆಳ್ಳುಳ್ಳಿ, ಮೂಲಂಗಿ, ಹುಳಿ ಮೊಸರಿನಂತಹ ಆಹಾರ ಪದಾರ್ಥಗಳನ್ನು ನೀಡುತ್ತಿರಲಿಲ್ಲ. ಹಾಗೆಯೇ ತಾಂಬೂಲ ಕೂಡ ವಿದ್ಯಾರ್ಥಿಗಳಿಗೆ ಸೂಕ್ತವಲ್ಲ ಎಂದು ಗುರೂಜಿ ಹೇಳಿದ್ದಾರೆ.
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ