ಮತ್ತೊಬ್ಬನ ಜತೆ ಲವ್ವಿಡವ್ವಿ: ಪ್ರೀತಿಸಿ ಮದ್ವೆಯಾಗಿದ್ದ ಗಂಡನ ಕತೆ ಮುಗಿಸಿ ನೌಟಂಕಿ

Edited By:

Updated on: Apr 12, 2026 | 10:59 PM

ಅವರಿಬ್ರು ಪ್ರೀತಿಸಿ ಮದುವೆ ಆಗಿದ್ರು. 14 ವರ್ಷದ ಅವರ ಸುಖ ದಾಂಪತ್ಯಕ್ಕೆ ಇಬ್ಬರು ಮಕ್ಕಳಿದ್ದಾರೆ. ಹೀಗಿರುವಾಗ್ಲೇ ಆ ಸಂಸಾರಕ್ಕೆ ಅದೊಬ್ಬ ಎಂಟ್ರಿ ಆಗಿದ್ದ. ನೋಡ ನೋಡ್ತಿದ್ದಂತೆ ಆ ಸಂಸಾರವನ್ನೇ ಆ ಪಾಪಿ ಛಿದ್ರ ಮಾಡಿದ್ದಾನೆ. ಪ್ರಿಯಕರನಿಗಾಗಿ ಗಂಡನನ್ನೇ ಕೊಲ್ಲಿಸಿದ ಪಾಪಿ ಪತ್ನಿ ಅರೆಸ್ಟ್‌ ಆಗಿದ್ದೇ ರೋಚಕವಾಗಿದೆ. ಹೌದು... ಬೆಳಗಾವಿಯಲ್ಲಿ ಪತ್ನಿಯಿಂದಲೇ ಪತಿ ಕೊಲೆ ಆಗಿದ್ದು, ನೌಟಂಕಿ ಆಟ ಆಡ್ತಿದ್ದ ಈ ಡೌವ್‌ರಾಣಿ ಪ್ರಿಯಕರನ ಜತೆ ಹಿಂಡಲಗಾ ಜೈಲುಪಾಲಾಗಿದ್ದಾಳೆ.

ಬೆಳಗಾವಿ, (ಏಪ್ರಿಲ್ 12): ಅವರಿಬ್ರು ಪ್ರೀತಿಸಿ ಮದುವೆ ಆಗಿದ್ರು. 14 ವರ್ಷದ ಅವರ ಸುಖ ದಾಂಪತ್ಯಕ್ಕೆ ಇಬ್ಬರು ಮಕ್ಕಳಿದ್ದಾರೆ. ಹೀಗಿರುವಾಗ್ಲೇ ಆ ಸಂಸಾರಕ್ಕೆ ಅದೊಬ್ಬ ಎಂಟ್ರಿ ಆಗಿದ್ದ. ನೋಡ ನೋಡ್ತಿದ್ದಂತೆ ಆ ಸಂಸಾರವನ್ನೇ ಆ ಪಾಪಿ ಛಿದ್ರ ಮಾಡಿದ್ದಾನೆ. ಪ್ರಿಯಕರನಿಗಾಗಿ ಗಂಡನನ್ನೇ ಕೊಲ್ಲಿಸಿದ ಪಾಪಿ ಪತ್ನಿ ಅರೆಸ್ಟ್‌ ಆಗಿದ್ದೇ ರೋಚಕವಾಗಿದೆ. ಹೌದು… ಬೆಳಗಾವಿಯಲ್ಲಿ (Belagavi) ಪತ್ನಿಯಿಂದಲೇ ಪತಿ ಕೊಲೆ ಆಗಿದ್ದು, ನೌಟಂಕಿ ಆಟ ಆಡ್ತಿದ್ದ ಈ ಡೌವ್‌ರಾಣಿ ಪ್ರಿಯಕರನ ಜತೆ ಹಿಂಡಲಗಾ ಜೈಲುಪಾಲಾಗಿದ್ದಾಳೆ.

ಅವಿನಾಶ್- ಲಕ್ಷ್ಮೀ ಅನ್ನೋ ಈ ಜೋಡಿ 14 ವರ್ಷಗಳ ಹಿಂದೆಯೇ ಪ್ರೀತಿಸಿ ಮದುವೆ ಆಗಿದ್ರು. ಇಬ್ಬರ ಜಾತಿ ಬೇರೆಯಾದ್ರೂ ಇವರ ಪ್ರೀತಿಗೆ ಅದು ಅಡ್ಡಿ ಆಗಿರಲಿಲ್ಲ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಬೆಳಗಾವಿಯ ಅನಗೋಳದಲ್ಲಿ ಆಯುರ್ವೇದಿಕ್ ಕ್ಲಿನಿಕ್ ಇಟ್ಟುಕೊಂಡು ಅವಿನಾಶ್ ಬದುಕು ಕಟ್ಟಿಕೊಂಡಿದ್ರು. ಆದ್ರೆ ಏಪ್ರಿಲ್‌ 6 ರಂದು ಇದೇ ಕ್ಲಿನಿಕ್‌ನಲ್ಲೇ ಅವಿನಾಶ್ ಶವವಾಗಿದ್ರು. ನನ್ನ ಗಂಡನಿಗೆ ಶುಗರ್ ಹೆಚ್ಚಾಗಿ ಕೆಳಗೆ ಬಿದ್ದಿದ್ದಾನೆ. ಈ ವೇಳೆ ತಲೆಗೆ ಪೆಟ್ಟಾಗಿ ಗಂಡ ಮೃತಪಟ್ಟಿದ್ದಾನೆ ಅಂತಾ ಕತೆ ಹೇಳಿದ ಲಕ್ಷ್ಮೀ, ಗಂಡನ ಅಂತ್ಯ ಸಂಸ್ಕಾರಕ್ಕೆ ಮುಂದಾಗಿದ್ಳು. ಆದ್ರೆ ಪೋಸ್ಟ್‌ ಮಾರ್ಟಂ ರಿಪೋರ್ಟ್‌ ಬರ್ತಿದ್ದಂತೆ ಈ ಸಾವಿನ ಅಸಲಿಯತ್ತು ಬಯಲಾಗಿದೆ.

ಇದನ್ನೂ ಓದಿ: ಅನೈತಿಕ ಸಂಬಂಧಕ್ಕೆ ಅಡ್ಡಿ: ಪ್ರಿಯಕರನ ಜೊತೆ ಸೇರಿ ಪತಿಗೇ ಚಟ್ಟ ಕಟ್ಟಿದ ಪತ್ನಿ; ಕೊಲೆ ಬಳಿಕ ಅಮಾಯಕಳಂತೆ ನಾಟಕ

Loading...
Unable to load recommendations.
Follow Us
ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More